Monday, August 19, 2019,

Menu

Back

ರಾಷ್ಟ್ರೀಯ ರಹದಾರಿ

ರಾಷ್ಟ್ರೀಯ ರಹದಾರಿ ಎಂದರೆ ಭಾರತದಾದ್ಯಂತ ಅಥವಾ ರಹದಾರಿದಾರರು ಕೋರಿದ (ರಹದಾರಿ ಕೊಟ್ಟಿರುವ ರಾಜ್ಯ ಸಹ ಸೇರಿ) ಕನಿಷ್ಟ ನಾಲ್ಕು (4) ರಾಜ್ಯಗಳಲ್ಲಿ ಸಾರ್ವಜನಿಕ ವಾಹನವಾಗಿ ವ್ಯವಹರಿಸಲು/ ಪ್ರವರ್ತಿಸಲು ಸಂಬಂಧಪಟ್ಟ ಪ್ರಾಧಿಕಾರವು ಮಂಜೂರು ಮಾಡಿದ ರಹದಾರಿಯಾಗಿರುತ್ತದೆ. ರಹದಾರಿಯನ್ನು ಮೋಟಾರು ವಾಹನ ಕಾಯ್ದೆ 1988 ಕಲಂ 88(12) ಅನುಗುಣವಾಗಿ ನೀಡಲಾಗುತ್ತದೆ. ರಾಷ್ಟ್ರೀಯ ರಹದಾರಿಯನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳ ಕಾರ್ಯದರ್ಶಿ/ಹೆಚ್ಚುವರಿ ಕಾರ್ಯದರ್ಶಿಯವರು ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳ ಪ್ರತ್ಯಾಯೋಜಿತ ಅಧಿಕಾರದಡಿ ನೀಡುತ್ತಾರೆ. ರಾಷ್ಟ್ರೀಯ ರಹದಾರಿ ನೀಡುವಾಗ ಇದರ ಜೊತೆಗೆ ರಹದಾರಿಯಲ್ಲಿ ಅಧಿಕೃತವಾಗಿ ನೀಡಲಾದ ಆಥರೈಸೇಷನ್ನ್ನು ಇತರೆ ರಾಜ್ಯಗಳಲ್ಲಿ ವಿಧಿಸಬಹುದಾದ ತೆರಿಗೆ ಶುಲ್ಕ ಪಾವತಿಸಬೇಕೆಂಬ ಷರತ್ತಿನೊಂದಿಗೆ ನೀಡಲಾಗುತ್ತದೆ.

ಮುಖ್ಯಾಂಶ:

 • ದಿನಾಂಕದಿಂದ 12 ವರ್ಷದ ಒಳಗಿರುವ ವಾಹನಗಳಿಗೆ ರಾಷ್ಟ್ರೀಯ ರಹದಾರಿಯನ್ನು ನೀಡಲಾಗುತ್ತದೆ.
 • 15 ವರ್ಷಗಳ ಒಳಗಿನ ಮಲ್ಟಿ ಆಕ್ಸೆಲ್ ಸರಕುಸಾಗಣೆ ವಾಹನಗಳಿಗೆ ರಾಷ್ಟ್ರೀಯ ರಹದಾರಿಯನ್ನು ನೀಡಲಾಗುತ್ತದೆ.

ಹೊಸ ರಾಷ್ಟ್ರೀಯ ರಹದಾರಿ ನೀಡಲು ಲಗತ್ತಿಸಬೇಕಾದ ದಾಖಲೆಗಳು:

 1. ನಮೂನೆ – 48 + 46

 2. ಶುಲ್ಕ

 • ರೂ.1000/- + 100/- (ನಮೂದು ಶುಲ್ಕ) ಮತ್ತು ರೂ.1000/- ಆಥರೈಸೇಷನ್ ಶುಲ್ಕ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು/ಸಹಾಯಕ ಪ್ರಾದೇಶಿಕ ಅಧಿಕಾರಿಗಳು ಇವರ ಕಛೇರಿಯಲ್ಲಿ ಪಾವತಿಸಬೇಕು.
 • .ಡಿ ಪಾವತಿಸಲು ಸಂಬಂಧಿಸಿದ ಚಲನ್‍ನ್ನು Vahan Portal https://vahan.nic.in/npermit ಇದರಲ್ಲಿ ಡೌನ್‍ಲೋಡ್ ಮಾಡಿಕೊಳ್ಳುವುದು.
 • ಅರ್ಜಿಯ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಾವತಿಸಿದ ಕಾಂಪೋಸಿಟ್ ಟ್ಯಾಕ್ಸ್ ರೂ.16500/- ರಸೀದಿ ಹಾಜರುಪಡಿಸಬೇಕು ಅಥವಾ ಆನ್‍ಲೈನ್ ಪೇಮೆಂಟ್ Vahan Portal https://vahan.nic.in/npermit ನಲ್ಲಿ ಮಾಡಬಹುದು.

.    3. ದಾಖಲಾತಿಗಳು:

 • ನೋಂದಣಿ ಪತ್ರ / ಸ್ಮಾರ್ಟ್ ಕಾರ್ಡ್
 • ವಿಮೆ ಪತ್ರ
 • ಅರ್ಹತಾ  ಪತ್ರ
 • ತೆರಿಗೆ ಪತ್ರ – ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ಮಾಲಿನ್ಯ ನಿಯಂತ್ರಣಾ ಪ್ರಮಾಣ ಪತ್ರ.
 • ರಹದಾರಿ ಕಲರ್ ವಾಹನದಲ್ಲಿ ನಮೂದಾಗಿರುವುದಕ್ಕೆ ಮೋಟಾರು ವಾಹನ ನಿರೀಕ್ಷಕರು ನೀಡಲ್ಪಟ್ಟ ಕೇಂದ್ರ ಮೋಟಾರು ವಾಹನ ನಿಯಮಾವಳಿ 90ರ ಪತ್ರ ಹಾಜರುಪಡಿಸಬೇಕು.

    4. ರಾಷ್ಟ್ರೀಯ ರಹದಾರಿಯ ಅವಧಿ

 • ರಹದಾರಿಯನ್ನು ಐದು (5) ವರ್ಷದ ಅವಧಿಗೆ ನೀಡಲಾಗುವುದು ಮತ್ತು ಪ್ರತಿ 5 ವರ್ಷಕ್ಕೆ ನವೀಕರಣ ಮಾಡಲಾಗುತ್ತದೆ.
 • ಶುಲ್ಕ ಮತ್ತು ಕ್ರೋಢೀಕೃತ ತೆರಿಗೆಯನ್ನು ಪ್ರತೀ ಒಂದು ವರ್ಷಕ್ಕೊಂದುಸಾರಿ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ನವೀಕರಿಸಬೇಕಾಗುತ್ತದೆ.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ರಾಷ್ಟ್ರೀಯ ರಹದಾರಿ ನವೀಕರಣಕ್ಕೆ ಲಗತ್ತಿಸಬೇಕಾದ ದಾಖಲೆಗಳು:

 1. ಫಾರಂ-36 ಮತ್ತು ಫಾರಂ-46

 2. ಶುಲ್ಕ

 • .1000/- + ರೂ.100/- (ನಮೂದು ಶುಲ್ಕ) ಮತ್ತು ರೂ.1000/- ಆಥರೈಸೇಷನ್ ಶುಲ್ಕ, ಅವಧಿ ಮುಗಿದಿದ್ದರೆ ರೂ.500/- ದಂಡ ಶುಲ್ಕ ಪಾವತಿಸಬೇಕಾಗುತ್ತದೆ.
 • ಶುಲ್ಕ ರೂ.1000/- ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು/ಸಹಾಯಕ ಪ್ರಾದೇಶಿಕ ಅಧಿಕಾರಿಗಳು ಇವರ ಕಛೇರಿಯಲ್ಲಿ ಪಾವತಿಸಬೇಕು.
 • .ಡಿ ಪಾವತಿಸಲು ಸಂಬಂಧಿಸಿದ ಚಲನ್‍ನ್ನು Vahan Portal https://vahan.nic.in/npermit  ಇದರಲ್ಲಿ ಡೌನ್‍ಲೋಡ್ ಮಾಡಿಕೊಳ್ಳುವುದು.
 • ಅರ್ಜಿಯ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಾವತಿಸಿದ ಕಾಂಪೋಸಿಟ್ ಟ್ಯಾಕ್ಸ್ ರೂ.16500/- ರಸೀದಿ ಹಾಜರುಪಡಿಸಬೇಕು ಅಥವಾ ಆನ್‍ಲೈನ್ ಪೇಮೆಂಟ್ Vahan Portal https://vahan.nic.in/npermit ನಲ್ಲಿ ಮಾಡಬಹುದು.

     3. ದಾಖಲಾತಿಗಳು:

 • ನೋಂದಣಿ ಪತ್ರ / ಸ್ಮಾರ್ಟ್ ಕಾರ್ಡ್
 • ವಿಮೆ ಪತ್ರ
 • ಅರ್ಹತಾ  ಪತ್ರ
 • ತೆರಿಗೆ ಪತ್ರ – ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ಮಾಲಿನ್ಯ ನಿಯಂತ್ರಣಾ ಪ್ರಮಾಣ ಪತ್ರ.
 • ರಹದಾರಿ ಕಲರ್ ವಾಹನದಲ್ಲಿ ನಮೂದಾಗಿರುವುದಕ್ಕೆ ಎಕ್ಸಿಕ್ಯೂಟಿವ್ ಸ್ಟಾಫ್ ಅವರಿಂದ ನೀಡಲ್ಪಟ್ಟ ಕೇಂದ್ರ ಮೋಟಾರು ವಾಹನ ನಿಯಮಾವಳಿ 90ರ ಪತ್ರ ಹಾಜರುಪಡಿಸಬೇಕು.
 • ನೆರವುದಾರರಿಂದ ನಿರಾಪೇಕ್ಷಣಾ ಪತ್ರ (ಫೈನಾನ್ಸ್ ಇದ್ದಲ್ಲಿ).

    4. ರಾಷ್ಟ್ರೀಯ ರಹದಾರಿಯ ಅವಧಿ

 • ರಹದಾರಿಯನ್ನು ಐದು (5) ವರ್ಷದ ಅವಧಿಗೆ ನೀಡಲಾಗುವುದು ಮತ್ತು ಪ್ರತಿ 5 ವರ್ಷಕ್ಕೆ ನವೀಕರಣ ಮಾಡಲಾಗುತ್ತದೆ.
 • ಶುಲ್ಕ ಮತ್ತು ಕ್ರೋಢೀಕೃತ ತೆರಿಗೆಯನ್ನು ಪ್ರತೀ ಒಂದು ವರ್ಷಕ್ಕೊಂದುಸಾರಿ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ನವೀಕರಿಸಬೇಕಾಗುತ್ತದೆ.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ರಾಷ್ಟ್ರೀಯ ರಹದಾರಿಯಲ್ಲಿ ವಿಳಾಸ ಬದಲಾವಣೆಗೆ ಲಗತ್ತಿಸಬೇಕಾದ ದಾಖಲೆಗಳು

 1. ಸಾದಾ ಹಾಳೆಯಲ್ಲಿ ಬರೆದ ಅರ್ಜಿ.
 2. ದಾಖಲಾತಿಗಳು:
 • ಮೂಲ ರಹದಾರಿ
 • ವಿಳಾಸ ಪುರಾವೆ
 • ನೋಂದಣಿ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮಾ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ/ ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ಹಣಕಾಸು ನೆರವುದಾರರಿಂದ ನಿರಾಪೇಕ್ಷಣಾ ಪತ್ರ (ಫೈನಾನ್ಸ್ ಇದ್ದಲ್ಲಿ).

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ರಾಷ್ಟ್ರೀಯ ರಹದಾರಿ ನಕಲು ಪಡೆಯಲು ಲಗತ್ತಿಸಬೇಕಾದ ದಾಖಲೆಗಳು

 1. ಹಾಳೆಯಲ್ಲಿ ಬರೆದ ಅರ್ಜಿ.
 2. ರಹದಾರಿ ಶುಲ್ಕದ ಅರ್ಧದಷ್ಟು ಮೊತ್ತ.
 3. ದಾಖಲಾತಿಗಳು
 • ರಹದಾರಿಯನ್ನು ಯಾವುದೇ ಪ್ರಾಧಿಕಾರ ಪೊಲೀಸ್/ ಫೈನಾನ್ಸ್‍ದಾರರು ವಶಪಡಿಸಿಕೊಂಡಿಲ್ಲವೆಂಬ ಪ್ರಮಾಣ ಪತ್ರ.
 • ನೋಂದಣಿ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮಾ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ/ ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ವಾಯುಮಾಲಿನ್ಯ ನಿಯಂತ್ರಣಾ ಪತ್ರ
 • ಹಣಕಾಸು ನೆರವುದಾರರಿಂದ ನಿರಾಪೇಕ್ಷಣಾ ಪತ್ರ (ಫೈನಾನ್ಸ್ ಇದ್ದಲ್ಲಿ).

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ರಾಷ್ಟ್ರೀಯ ರಹದಾರಿಯಲ್ಲಿ ವಾಹನ ಬದಲಾವಣೆಗೆ ಲಗತ್ತಿಸಬೇಕಾದ ದಾಖಲೆಗಳು

 1. ಫಾರಂ - ನಮೂನೆ 51 ರಲ್ಲಿ ಅರ್ಜಿ (ಕೆ.ಎಂ.ವಿ.ಆರ್)
 2. ಶುಲ್ಕ – ರೂ.1000/- + ರೂ.100/- ಆರ್.ಟಿ.ಒ ಕ್ಯಾಷ್ ಕೌಂಟರ್‍ನಲ್ಲಿ ಪಾವತಿಸಬೇಕು.
 3. ಹಾಲಿ ವಾಹನ ಮತ್ತು ಉದ್ದೇಶಿತ ಬದಲು ವಾಹನದ ನೋಂದಣಿ, ವಿಮಾ ಪತ್ರ, ತೆರಿಗೆ ಪತ್ರ   ಸಲ್ಲಿಸಬೇಕು,
 • ನೋಂದಣಿ ಪತ್ರಮಾಣ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮಾ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ/ ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ವಾಯುಮಾಲಿನ್ಯ ನಿಯಂತ್ರಣಾ ಪತ್ರ

ರಾಷ್ಟ್ರೀಯ ರಹದಾರಿಯ ವರ್ಗಾವಣೆಗೆ ಲಗತ್ತಿಸಬೇಕಾದ ದಾಖಲೆಗಳು

 1. ಫಾರಂ - ನಮೂನೆ 52 ರಲ್ಲಿ ಅರ್ಜಿ (ಕೆ.ಎಂ.ವಿ)
 2. ಶುಲ್ಕ – ರೂ.1000/- + ರೂ.100/- (ನಮೂದು ಶುಲ್ಕ)
 3. ದಾಖಲಾತಿಗಳು
 • ನೋಂದಣಿ ಪತ್ರಮಾಣ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮಾ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ/ ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ವಾಯುಮಾಲಿನ್ಯ ನಿಯಂತ್ರಣಾ ಪತ್ರ

          4. ವರ್ಗಾವಣೆಕಾರ ಮತ್ತು ವರ್ಗಾವಣೆ ಪಡೆದುಕೊಳ್ಳುವ ಇಬ್ಬರೂ ಒಟ್ಟಿಗೆ ಸಹಿ ಮಾಡಿರುವ ಜಂಟಿ ಪ್ರಮಾಣ ಪತ್ರ.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ರಾಷ್ಟ್ರೀಯ ರಹದಾರಿಯ ವೇರಿಯೇಷನ್‍ಗೆ ಲಗತ್ತಿಸಬೇಕಾದ ದಾಖಲೆಗಳು

 1. ನಮೂನೆ 36 ಎ ರಲ್ಲಿ ಅರ್ಜಿ (ಕೆಎಂವಿ)   
 2. ಶುಲ್ಕ ರೂ.500/- ಮತ್ತು ರೂ.100/- (ನಮೂದು ಶುಲ್ಕ)
 3. ಮೂಲ ರಹದಾರಿ, ನೋಂದಣಿ ಪತ್ರ, ತೆರಿಗೆ ಪತ್ರ, ವಿಮೆ ಪತ್ರ, ಅರ್ಹತಾ ಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ

ರಾಷ್ಟ್ರೀಯ ರಹದಾರಿದಾರರು ಮರಣಹೊಂದಿದಲ್ಲಿ ರಹದಾರಿ ವರ್ಗಾವಣೆಗೆ ಲಗತ್ತಿಸಬೇಕಾದ ದಾಖಲೆಗಳು

 1. ಫಾರಂ - ನಮೂನೆ 53 ರಲ್ಲಿ ಅರ್ಜಿ (ಕೆ.ಎಂ.ವಿ)
 2. ಶುಲ್ಕ – ರೂ.200/- + ರೂ.100/- ಆರ್.ಟಿ.ಒ ಕ್ಯಾಷ್ ಕೌಂಟರ್‍ನಲ್ಲಿ ಪಾವತಿಸಬೇಕು.
 3. ದಾಖಲಾತಿಗಳು
 • ನೋಂದಣಿ ಪತ್ರಮಾಣ ಪತ್ರ/ ಸ್ಮಾರ್ಟ್ ಕಾರ್ಡ್
 • ವಿಮಾ ಪತ್ರ
 • ಅರ್ಹತಾ ಪತ್ರ
 • ತೆರಿಗೆ ಪತ್ರ/ ತೆರಿಗೆ ಪಾವತಿಸಿದ ಬಗ್ಗೆ ಪುರಾವೆ
 • ವಾಯುಮಾಲಿನ್ಯ ನಿಯಂತ್ರಣಾ ಪತ್ರ
 • ಮರಣ ಪ್ರಮಾಣ ಪತ್ರ
 • ನಮೂನೆ 54 (ಕೆ.ಎಂ.ವಿ.ಆರ್) ರಲ್ಲಿ ದಿನಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿದ ಪ್ರತಿ

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

© Content Owned & Site maintained by Transport Department, Karnataka State Government.
Visitors Count :: 5849062 | Site Last updated on :: 03-08-2019