Tuesday, February 20, 2018,

Menu

 
Back

ವಾಹನ ವರ್ಗದಲ್ಲಿ ಬದಲಾವಣೆ / ಪರಿವರ್ತನೆ

(ಮೋಟಾರು ವಾಹನ ಕಾಯ್ದೆ 1988 ರ ಕಲಂ 52 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 49 ಗಮನಿಸಿ)

ಯಾವುದೇ ವಾಹನದ ಮಾಲೀಕರು ನೋಂದಣಿ ಪತ್ರದಲ್ಲಿ ಇರುವ ವಿವರಗಳಿಗೆ ಬದಲಾಗಿ ವಾಹನದಲ್ಲಿ ಇತರೆ ಬದಲಾವಣೆಯನ್ನು ಮಾಡಬೇಕಾದ ಸಂದರ್ಭದಲ್ಲಿ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರದ ಅನುಮೋದನೆ ಪಡೆದಿರಬೇಕು.

ಲಗತ್ತಿಸಬೇಕಾದ ದಾಖಲೆಗಳು

  • ನಮೂನೆ 29 ರಲ್ಲಿ ಅರ್ಜಿ (ಕೆಎಂವಿ).
  • ಶುಲ್ಕ ರೂ.50/-
  • ಪೈನಾನ್ಸ್ದಾರರ ಒಪ್ಪಿಗೆ ಪತ್ರ.
  • ನೋಂದಣಿ ಪತ್ರ, ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ, ಅರ್ಹತಾ ಪತ್ರ, ರಹದಾರಿ ಪತ್ರ (ಸಾರಿಗೆ ವಾಹನ ಆಗಿದ್ದಲ್ಲಿ)
  • ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
  • ಹಸಿರು ತೆರಿಗೆ ಇವುಗಳೊಂದಿಗೆ ಸಂಬಂಧಪಟ್ಟ ಕಛೇರಿಯ ನೋಂದಣಿ ವಿಭಾಗದಲ್ಲಿ ಅರ್ಜಿ ಸಲ್ಲಿಸಬೇಕು.

ಚಾಸಿಸ್ ಬದಲಾವಣೆ :

ಯಾವುದಾದರೂ ವಾಹನವು ಅಪಘಾತಕ್ಕೊಳಗಾಗಿ ಚಾಸಿಸ್ ಹಾಳಾದಲ್ಲಿ/ ರಿಪೇರಿ ಮಾಡಿ ಸರಿಪಡಿಸಲು ಆಗದಷ್ಟು ಕೆಟ್ಟು ಹೋಗಿದ್ದಲ್ಲಿ ಅಂತಹ ಚಾಸಿಸ್ ಬದಲಾಯಿಸಲು ಅರ್ಜಿದಾರನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿಗದಿತ ಶುಲ್ಕ/ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಇದರ ಜೊತೆಗೆ ಪೊಲೀಸ್ ಪಿರ್ಯಾದು ಸಲ್ಲಿಸಿದ ಪ್ರತಿ, ಡೀಲರ್ರವರಿಂದ ಹೊಸ ಚಾಸಿಸ್ ಖರೀದಿಸಿದ ರಶೀದಿ ಸಹ ಸಲ್ಲಿಸಬೇಕಾಗುತ್ತದೆ. ಸಂಬಂಧಪಟ್ಟ ಪ್ರಾಧಿಕಾರವು ಅರ್ಜಿದಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಸದರಿ ವಾಹನಕ್ಕೆ ಹೊಸ ಚಾಸಿಸ್ ನಂಬರ್ ಹಂಚಿಕೆ ಮಾಡಿ ಅನುಮತಿ ಪತ್ರ ನೀಡಲಾಗುವುದು. ನಂತರ ಈ ಹೊಸ ಚಾಸಿಸ್ ಸಂಖ್ಯೆಯನ್ನು ಸದರಿ ವಾಹನಕ್ಕೆ ಪಂಚ್ ಮಾಡಿಸಿ ವಾಹನ ತನಿಖಾಧಿಕಾರಿಯ ಮುಂದೆ ತಪಾಸಣೆಗಾಗಿ ಹಾಜರುಪಡಿಸಬೇಕಾಗುತ್ತದೆ. ಇದನ್ನು ಪರಿಶೀಲಿಸಿ ತನಿಖಾಧಿಕಾರಿಯು ದೃಢೀಕರಿಸಿದ ನಂತರ ನೋಂದಣಿ ದಾಖಲೆಗಳಲ್ಲಿ ನಮೂದಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ ಮತ್ತು ಸ್ಪೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು.

ರಿಟ್ರೋಫಿಟ್ಮೆಂಟ್ ಆಫ್ ಎಲ್ಪಿಜಿ ಕಿಟ್:

ಯಾವುದೇ ವಾಹನ ಮಾಲೀಕನು ತನ್ನ ವಾಹನಕ್ಕೆ ಎಲ್ಪಿಜಿ ಇಂಧನ ಸಾಧನ ಅಳವಡಿಸಿಕೊಳ್ಳಲು ಅನುಮತಿಗಾಗಿ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನಿಗಧಿತ ನಮೂನೆಯಲ್ಲಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕು ಇದರ ಜೊತೆಗೆ ಎಲ್ಪಿಜಿ ಕಿಟ್ ಅಧಿಕೃತ ಮಾರಾಟಗಾರರಿಂದ ಖರೀದಿಸಿದ ದೃಢೀಕೃತ ಪ್ರತಿ/ ರಶೀದಿ ಸಹ ಸಲ್ಲಿಸಬೇಕು ಇದನ್ನು ಪರಿಶೀಲಿಸಿ ನೋಂದಣಿ ಪ್ರಾಧಿಕಾರವು ಸದರಿ ವಾಹನಕ್ಕೆ ಎಲ್ಪಿಜಿ ಇಂಧನ ಸಾದನ ಅಳವಡಿಸಲು ಅನುಮತಿ ನೀಡಲಾಗುತ್ತದೆ. ಈ ಎಲ್ಪಿಜಿ ಇಂಧನ ಸಾಧನ ಅಳವಡಿಸಿಕೊಂಡ ನಂತರ ಸಂಬಂಧಪಟ್ಟ ಕಛೇರಿಯ ತನಿಖಾಧಿಕಾರಿಯ ಮುಂದೆ ವಾಹನ ತಪಾಸಣೆಗಾಗಿ ಹಾಜರುಪಡಿಸಬೇಕು. ಈ ಅಧಿಕಾರಿಯು ಸದರಿ ಎಲ್ಪಿಜಿ ಸಾಧನವನ್ನು ನಿಯಮಗಳಿಗೆ ಅನುಗುಣವಾಗಿ ಅಳವಡಿಸಲಾಗಿದೆÉಯೇ ಎಂಬುದನ್ನು ಪರಿಶೀಲಿಸಿ, ದೃಢೀಕರಿಸಿದ ನಂತರ ವಾಹನದ ದಾಖಲೆಗಳಲ್ಲಿ ನಮೂದಿಸಿ ಹೊಸ ಸ್ಮಾರ್ಟ್ ಕಾರ್ಡ್ ನೀಡಿ ಸ್ವವಿಳಾಸದ ಲಕೋಟೆ ನೀಡಿದ್ದಲ್ಲಿ ನೋಂದಣಿದಾರರಿಗೆ ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಲು ಕ್ರಮವಹಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.

© Content Owned & Site maintained by Transport Department, Karnataka State Government.
Visitors Count :: 3099355 | Site Last updated on :: 20-02-2018