Monday, August 26, 2019,

Menu

 
Back

ಹಾಲಿ ಇರುವ ಚಾಲನಾ ಅನುಜ್ಞಾ ಪತ್ರದಲ್ಲಿ ಇನ್ನೊಂದು ಶ್ರೇಣಿಯ ವಾಹನ ಚಾಲನಾ ಅನುಜ್ಞಾ ಸೇರಿಸುವ ರೀತಿ

ಸಾಮಾನ್ಯ

ಯಾವುದೇ ವ್ಯಕ್ತಿಯು ಒಂದು ಚಾಲನಾ ಅನುಜ್ಞಾ ಪತ್ರದ ಹೊರತು ಇತರ ಚಾಲನಾ ಅನುಜ್ಞಾ ಪತ್ರವನ್ನು ಹೊಂದುವಂತಿಲ್ಲ. ಒಂದೇ ಚಾಲನಾ ಅನುಜ್ಞಾ ಪತ್ರದಲ್ಲಿ ಬೇರೆ ವರ್ಗದ ವಾಹನಗಳನ್ನು ಸೇರಿಸಲು ನಿಯಮಗಳಲ್ಲಿ ಅವಕಾಶವಿರುತ್ತದೆ. (endorsement in existing driving licence).

1.ಅರ್ಜಿ ಮತ್ತು ದಾಖಲೆಗಳು

 • ನಿಗದಿತ ನಮೂನೆ 8 (CMVR) -  ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ. http://transport.karnataka.gov.in/
 • ಸಿಂಧುತ್ವವಿರುವ ಚಾಲನಾ ಅನುಜ್ಞಾ ಪತ್ರ. 
 • ಬೇರೆ ವರ್ಗದ ವಾಹನಕ್ಕೆ ಪಡೆದ ಕಲಿಕಾ ಚಾಲನಾ ಅನುಜ್ಞಾ ಪತ್ರ
 • ಚಾಲನಾ ಕೌಶಲ್ಯಕ್ಕೆ ಹಾಜರು ಪಡಿಸುವ ವಾಹನದ ದಾಖಲೆಗಳನ್ನು (ನೊಂದಣಿ ಪ್ರಮಾಣ ಪತ್ರ, ತೆರಿಗೆ ಪತ್ರ, ವಿಮಾ ಪತ್ರ, ವಾಯು ಮಾಲಿನ್ಯ ಪ್ರಮಾಣ ಪತ್ರ) ಲಗತ್ತಿಸಬೇಕು. (ಸಾರಿಗೆ ವಾಹನವಾದರೆ ವಾಹನ ಅರ್ಹತಾ ಪ್ರಮಾಣ ಪತ್ರ ಸಲ್ಲಿಸಬೇಕು).
 • ಅರ್ಜಿದಾರರು ಸಾರಿಗೆ ವಾಹನ ಸೇರಿಸಲು ಅರ್ಜಿ ಸಲ್ಲಿಸಿದರೆ ಅವರು ಮೋಟಾರು ವಾಹನ ತರಬೇತಿ ಶಾಲೆಯಿಂದ ಪಡೆದ ತರಬೇತಿ/ಕೌಶಲ್ಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಮೋಟಾರ್ ಕ್ಯಾಬ್, ಆಟೋರಿಕ್ಷಾ, ಟ್ರಾಕ್ಟರ್ – ಟ್ರೈಲರ್ ಇವುಗಳಿಗೆ ಮೋಟಾರು ವಾಹನ ತರಬೇತಿ ಶಾಲೆಯ ಪ್ರಮಾಣ ಪತ್ರದ ಅವಶ್ಯಕತೆ ಇರುವುದಿಲ್ಲ.  ಇದೇ ರೀತಿ ದ್ವಿಚಕ್ರ ವಾಹನ ಮತ್ತು ಲಘು ಮೋಟಾರು ವಾಹನಗಳಿಗೆ ಮೋಟಾರು ವಾಹನ ತರಬೇತಿ ಶಾಲೆಯ ಪ್ರಮಾಣ ಪತ್ರದ ಅವಶ್ಯಕತೆ ಇರುವುದಿಲ್ಲ.

ಕೆಳಕಂಡ ವಾಹನಗಳಿಗೆ ಅರ್ಜಿದಾರರು ನಮೂನೆ-6 (KMVR) ರಲ್ಲಿ ಬ್ಯಾಡ್ಜ್ ಪಡೆಯಲು ಅರ್ಜಿ ಸಲ್ಲಿಸಬೇಕು.  http://transport.karnataka.gov.in/

 1. ಆಟೋ ರಿಕ್ಷಾ
 2. ಮೋಟಾರ್ ಕ್ಯಾಬ್
 3. ಮಧ್ಯಮ ಪ್ರಯಾಣಿಕರ ವಾಹನಗಳು ಮತ್ತು
 4. ಬಾರೀ ವರ್ಗದ ಪ್ರಯಾಣಿಕರ ವಾಹನಗಳು.

ಸ್ವವಿಳಾಸ ಹೊಂದಿರುವ   ಅಂಚೆ ಲಕೋಟೆ “ಸಕಾಲ” ದ ಪ್ರಕಾರ 30 ದಿವಸಗಳೊಗಾಗಿ ಚಾಲನಾ ಅನುಜ್ಞಾ ಪತ್ರವನ್ನು ರವಾನಿಸಲಾಗುವುದು. (Sakala (KGSC Act 2011))

2.ಶುಲ್ಕ - (ಪ್ರಾ.ಸಾ.ಅ ಕಛೇರಿಯ ನಗದು ಕೌಂಟರ್ ನಲ್ಲಿ ಪಾವತಿಸಬೇಕು)

 • ಚಾಲನಾ ಅನುಜ್ಞಾ ಪತ್ರದ ಪರೀಕ್ಷೆಗೆ ರೂ.50/- (ಬೇರೆ ವರ್ಗದ ವಾಹನ ಸೇರ್ಪಡೆಗೆ - ಪ್ರತಿ ವಾಹನಕ್ಕೆ ಶುಲ್ಕ)
 • ಸ್ಮಾಟ್ ಕಾರ್ಡ್ ಶುಲ್ಕ ರೂ.200/-
 • ಬ್ಯಾಡ್ಜ್ ಶುಲ್ಕ ರೂ. 25/- (ಸಾರಿಗೆ ವಾಹನಕ್ಕೆ ಮಾತ್ರ ಅನ್ವಯಿಸುತ್ತದೆ)

3.ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

                ಅರ್ಜಿ ಮತ್ತು ದಾಖಲೆಗಳೊಂದಿಗೆ ಅರ್ಜಿದಾರರು ಅವರ ವ್ಯಾಪ್ತಿಗೆ ಸೇರಿರುವ ಚಾಲನಾ ಅನುಜ್ಞಾ ಪ್ರಾಧಿಕಾರದ ಸಮಕ್ಷಮ ಸಲ್ಲಿಸುವುದು.

4.ವಾಹನ ಚಾಲನಾ ಕೌಶಲ್ಯ ಪರೀಕ್ಷೆ ಬಗ್ಗೆ ವಿವರಗಳು.

ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 15ರ ಪ್ರಕಾರ ಮೋಟಾರು ವಾಹನ ನಿರೀಕ್ಷಕರು ವಾಹನ ಚಾಲನಾ ಕೌಶಲ್ಯವನ್ನು ಪರೀಕ್ಷೆ ಮಾಡುತ್ತಾರೆ. (conduct of test of competence to drive a vehicle). ವಿವರಗಳಿಗಾಗಿ ವೆಬ್ ಸೈಟ್  http://morth.nic.in/   ವಾಹನ ಚಾಲನಾ ಕೌಶಲ್ಯದಲ್ಲಿ ಅರ್ಜಿದಾರರು ತೇರ್ಗಡೆಯಾದರೆ ಮೋಟಾರು ವಾಹನ ನಿರೀಕ್ಷಕರು ಅದರಂತೆ ಅರ್ಜಿಯಲ್ಲಿ ಷರಾ ನೀಡುತ್ತಾರೆ.   ನಂತರ ಚಾಲನಾ ಅನುಜ್ಞಾ ಪ್ರಾಧಿಕಾರವು ಕೋರಿರುವ ಬೇರೊಂದು ವಾಹನದ ವರ್ಗದ ಸೇರ್ಪಡೆಗೆ ಆದೇಶಿಸುತ್ತಾರೆ.

5.ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಜಿದಾರರು ಚಾಲನಾ ಅನುಜ್ಞಾ ಪತ್ರವನ್ನು ಹೇಗೆ ಪಡೆಯಬಹುದು?

ಅರ್ಜಿದಾರರಿಗೆ ಚಾಲನಾ ಅನುಜ್ಞಾ ಪತ್ರವನ್ನು ಅವರು ಸಲ್ಲಿಸಿದ ಸ್ವವಿಳಾಸದ ಅಂಚೆ ಲಕೋಟೆಯಲ್ಲಿ ಸಕಾಲ ಪ್ರಕಾರ 30 ದಿವಸದೊಳಗಾಗಿ ರವಾನಿಸಲಾಗುತ್ತದೆ. (Sakala (KGSC Act 2011))

6.ಪರೀಕ್ಷೆಯಲ್ಲಿ ಅನುರ್ತೀಣರಾದ ಅಭ್ಯರ್ಥಿಗಳಿಗೆ ಮಾಹಿತಿ.

 • ಪರೀಕ್ಷೆಯಲ್ಲಿ ಅನುರ್ತೀಣರಾದ ಅರ್ಜಿದಾರರು ಅರ್ಜಿಯನ್ನು ಹಿಂಪಡೆದು 7 ದಿನಗಳ ನಂತರ ನಿಗದಿತ ಶುಲ್ಕ ರೂ.50/- ಪಾವತಿಸಿ ಮರು ಪರೀಕ್ಷೆಗೆ ಹಾಜರಾಗಬಹುದು. 
 • ಅರ್ಜಿದಾರರು ಸತತವಾಗಿ 3 ಸಲ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೆ ಅಂತಹವರು 60 ದಿವಸಗಳು ಕಳೆದ ನಂತರವಷ್ಟೇ ಮರು ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ. / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.

© Content Owned & Site maintained by Transport Department, Karnataka State Government.
Visitors Count :: 5886591 | Site Last updated on :: 23-08-2019