Tuesday, September 25, 2018,

Menu

 
Back

ಬಿ ವಹಿ ಪ್ರತಿ ನೀಡಿಕೆ

ಬಿ ವಹಿ ಪ್ರತಿ ನೀಡಿಕೆ:

(ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 48 ಗಮನಿಸಿ)

ಶುಲ್ಕ ರೂ.10/-ಪಾವತಿಸಿ ಸಾದಾ ಬಿಳಿ ಹಾಳೆಯ ಅರ್ಜಿಯಲ್ಲಿ ವಾಹನ ಸಂಖ್ಯೆ ನಮೂದಿಸಿ ಕೋರಿದಲ್ಲಿ ಬಿ-ವಹಿ ಪ್ರತಿ ನೀಡಲಾಗುವುದು. ಇದರಲ್ಲಿ ವಾಹನದ ನೋಂದಣಿ ವಿವರ, ಮಾಲೀಕರ ವಿವರ, ಅರ್ಹತಾ ಪತ್ರ, ತೆರಿಗೆ ಪಾವತಿಸಿದ ವಿವರ ಮತ್ತು ಬಿ ವಹಿ ಪ್ರತಿ ಯಾವಾಗ ನೀಡಲಾಯಿತು ಎಂಬ ಎಲ್ಲಾ ವಿವರಗಳ ಮಾಹಿತಿ ಅರ್ಜಿದಾರರಿಗೆ ನೀಡಲಾಗುತ್ತದೆ. ಈ ಬಿ ವಹಿ ಪ್ರತಿಯನ್ನು ಅರ್ಜಿದಾರರು ಬೆಂಗಳೂರು ಒನ್ ಸೆಂಟರ್ನಲ್ಲಿಯೂ ಸಹ ನಿಗದಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ. ಬಿ ವಹಿ ಪ್ರತಿಯನ್ನು "ಸಕಾಲ'ದಲ್ಲಿ ನಿಗದಿ ಪಡಿಸಿದ ಅವಧಿಯೊಳಗೆ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.  
© Content Owned & Site maintained by Transport Department, Karnataka State Government.
Visitors Count :: 4353704 | Site Last updated on :: 24-09-2018