Monday, August 20, 2018,

Menu

 
Back

ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ನಿರ್ವಹಿಸುವ ಕೆಲಸಗಳ ಬಗ್ಗೆ ಸಾಮಾನ್ಯ ಮಾರ್ಗದರ್ಶನ

ಕೆಲಸದ ವೇಳೆ: ಪೂರ್ವಾಹ್ನ 10-00 ರಿಂದ ಅಪರಾಹ್ನ 5-30 (ಅಪರಾಹ್ನ 1-30 ರಿಂದ 2-15 ಊಟದ ವೇಳೆ) ಸೋಮವಾರದಿಂದ ಶನಿವಾರ ಪ್ರತಿ ಎರಡನೇ ಶನಿವಾರ ಮತ್ತು ರಾಜ್ಯ ಸರ್ಕಾರದಿಂದ ಪ್ರಕಟಿಸಲ್ಪಟ್ಟ ಎಲ್ಲಾ ಸಾರ್ವತ್ರಿಕ ರಜಾ ದಿನಗಳಂದು ಕಛೇರಿಗಳನ್ನು ಮುಚ್ಚಲಾಗುತ್ತದೆ.

ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿನ ವಿವಿಧ ವಿಭಾಗಗಳು ಕೆಳಗಿನಂತಿವೆ.

  1. ಚಾಲನಾ ಅನುಜ್ಞಾ ಪತ್ರ ವಿಭಾಗ ಈ ವಿಭಾಗವು ಕಲಿಕಾ ಅನುಜ್ಞಾ ಪತ್ರ, ಚಾಲನಾ ಅನುಜ್ಞಾ ಪತ್ರ, ಅಂತರ ರಾಷ್ಟ್ರೀಯ ಚಾಲನಾ ಪರವಾನಗಿ, ನಿರ್ವಾಹಕರ ಅನುಜ್ಞಾ ಪತ್ರ ನೀಡುವಿಕೆ ಮತ್ತು ಇವುಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದು.
  2. ನೋಂದಣಿ ವಿಭಾಗ ಈ ವಿಭಾಗವು ಸಾರಿಗೆ, ಸಾರಿಗೇತರ, ತಾತ್ಕಾಲಿಕ ನೋಂದಣಿ, ಮರು ನೋಂದಣಿ, ನೋಂದಣಿ ನವೀಕರಣ, ಅಡಮಾನ ಒಪ್ಪಂದವನ್ನು ನಮೂದಿಸುವುದು/ರದ್ದುಪಡಿಸುವುದು/ಕಂತು ಖರೀದಿ/ಗುತ್ತಿಗೆ (ಲೀಸ್), ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ತೀರುವಳಿ ಪ್ರಮಾಣ ಪತ್ರ ಆಕ್ಷೇಪಣಾರಹಿತ ಪ್ರಮಾಣ ಪತ್ರ ಮತ್ತು ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದು.
  3. ಖಜಾನೆ ವಿಭಾಗ ಈ ವಿಭಾಗವು ಶುಲ್ಕಗಳು ಮತ್ತು ತೆರಿಗೆ ವಸೂಲಾತಿಯನ್ನು ನಿರ್ವಹಿಸುವುದು. ( ಪೂರ್ವಾಹ್ನ 10.30 ರಿಂದ ಅಪರಾಹ್ನ  2.30 ರ ವರೆಗೆ )
  4. ರಹದಾರಿ ವಿಭಾಗ ಈ ವಿಭಾಗವು ಸಾರಿಗೆ ವಾಹನಗಳಿಗೆ ಸಂಬಂಧಿಸಿದ ವಿವಿಧ ಬಗೆಯ ರಹದಾರಿಗಳ ಕೆಲಸಗಳನ್ನು ನಿರ್ವಹಿಸುವುದು.
  5. ಈ ವಿಭಾಗವು ಸಾರಿಗೆ ವಾಹನಗಳಿಗೆ ಸಂಬಂಧಿಸಿದ ವಿವಿಧ ಬಗೆಯ ರಹದಾರಿಗಳ ಕೆಲಸಗಳನ್ನು ನಿರ್ವಹಿಸುವುದು. ಈ ವಿಭಾಗವು ಅರ್ಹತಾ ಪ್ರಮಾಣ ಪತ್ರ ನೀಡುವುದು ಮತ್ತು ನವೀಕರಿಸುವುದು, ಹೊಸ ನೋಂದಣಿಗಾಗಿ/ವಲಸೆ ಬಂದ/ನೋಂದಣಿ ಪ್ರಮಾಣ ಪತ್ರದ ನವೀಕರಣಕ್ಕಾಗಿ ವಾಹನ ತಪಾಸಣೆ, ಅಪಘಾತ ತಪಾಸಣೆ ಮತ್ತು ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದು.
  6. ಸಾರ್ವಜನಿಕ ಸಂಪರ್ಕ ಮತ್ತು ಸಹಾಯ ಮೇಜು ಈ ವಿಭಾಗವು ಅರ್ಜಿಗಳು, ನೆರವು ಮತ್ತು ಮಾಹಿತಿ ಒದಗಿಸುವ ಕೆಲಸವನ್ನು ನಿರ್ವಹಿಸುವುದು. ಸಾರ್ವಜನಿಕರು ಈ ಮೇಲೆ ತಿಳಿಸಿರುವ ವಿವಿಧ ಕೆಲಸಗಳ ತ್ವರಿತ ವಿಲೇವಾರಿಗಾಗಿ ಸಂಬಂಧಪಟ್ಟ ವಿಭಾಗಗಳನ್ನು ಕಛೇರಿಯ ಕೆಲಸದ ವೇಳೆಯಲ್ಲಿ ಪೂರ್ವಾಹ್ನ 10-00 ರಿಂದ ಅಪರಾಹ್ನ 2-30 ರ ವರೆಗೆ ಸಂಪರ್ಕಿಸಬೇಕಾಗಿ ಕೋರಲಾಗಿದೆ. ಪ್ರತಿಯೊಂದು ಕೆಲಸಕ್ಕೆ ಅನುಸರಿಸಬೇಕಾದ ಕಾರ್ಯವಿಧಾನವನ್ನು ಈ ಜಾಲತಾಣದಲ್ಲಿ ವಿವರಿಸಲಾಗಿದೆ.
 
  • ಪ್ರತಿಯೊಂದು ಕಛೇರಿಯಲ್ಲಿ ಮಾರ್ಗದರ್ಶನಕ್ಕಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಲಭ್ಯವಿರುತ್ತಾರೆ. ಕುಂದು-ಕೊರತೆಗಳನ್ನು ಆಲಿಸಲು ಮೂರು ತಿಂಗಳಿಗೊಮ್ಮೆ ನಡೆಸಲಾಗುವ ಸಾರಿಗೆ ಅದಾಲತ್ ನಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಹಾಗೂ ಸಲಹೆಗಳನ್ನು ನೀಡಬಹುದು.
© Content Owned & Site maintained by Transport Department, Karnataka State Government.
Visitors Count :: 4162183 | Site Last updated on :: 14-08-2018