Wednesday, November 14, 2018,

Menu

 
Back

ಕಂಡಕ್ಟರ್ ಲೈಸೆನ್ಸ್ ಪಡೆಯುವ ವಿಭಾಗ

1.ಅರ್ಜಿ ಮತ್ತು ಅವಶ್ಯಕವಾದ ದಾಖಲೆಗಳು

  • ಪ್ರಪತ್ರ ಸಂಖ್ಯೆ: ಕೆಎಂವಿ-12 (KMVR 1989) ರಲ್ಲಿ ಭರ್ತಿಸಿರುವ ಅರ್ಜಿ (ಇದು ಪ್ರಾದೇಶಿಕ ಸಾರಿಗೆ ಕಛೇರಿಯ ಸಹಾಯ ಮೇಜಿನಲ್ಲಿ ಲಭ್ಯವಿರುತ್ತದೆ.
  • ಪ್ರಪತ್ರ ಸಂಖ್ಯೆ: ಕೆಎಂವಿ-13 (KMVR 1989) ರಲ್ಲಿ ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಮೂಲ ಭಾವಚಿತ್ರಗಳು
  • ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಪಡದಿರುವ ಬಗ್ಗೆ ಪ್ರಮಾಣ ಪತ್ರ
  • ಸ್ಕೂಲ್ /ಕಾಲೇಜು / ಎಂ.ಎಲ್.ಎ/ ಎಂ.ಪಿ / ಪತ್ರಾಂಕಿತ ಅಧಿಕಾರಿಯವರು ನೀಡಿರುವ ನಡವಳಿಕೆ ಪ್ರಮಾಣ ಪತ್ರ (Character Certificate)
  • ಸೇಂಟ್ ಜಾನ್ಸ್ ಆಂಬುಲೆನ್ಸ್ ಅಸೋಸಿಯೇಷನ್ ಆಫ್ ಇಂಡಿಯಾರವರಿಂದ ಪಡೆದಿರುವ ಪ್ರಥಮ ಚಿಕಿತ್ಸಾ ಪ್ರಮಾಣ ಪತ್ರ.
  • ಕಾರ್ಯನಿರ್ವಹಿಸಲು ಇಚ್ಚಿಸುವ ಪ್ರದೇಶಕ್ಕೆ ಸಂಬಂಧಿಸಿದ ಪ್ರಾದೇಶಿಕ ಭಾಷೆಯ ಬಗ್ಗೆ ಕನಿಷ್ಠ ಜ್ಞಾನದ ಅರಿವು ಕುರಿತು ದಾಖಲೆ ಲಗತ್ತಿಸಬೇಕು.

ವಿಳಾಸದ ಪುರಾವೆ (ಯಾವುದಾದರೂ ಒಂದು)

2.ಶುಲ್ಕ (ಪ್ರಾ.ಸಾ.ಅ ಕಛೇರಿಯ ನಗದು ಕೌಂಟರ್ ನಲ್ಲಿ ಪಾವತಿಸಬೇಕು)

  • ನಿರ್ವಾಹಕ ಅನುಜ್ಞಾ ಪತ್ರ ರೂ.20/- + ಪರೀಕ್ಷಾ ಶುಲ್ಕ ರೂ.50/-
  • ಬ್ಯಾಡ್ಜ್ ರೂ.25/- 

3.ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಜಿದಾರರು ಮೇಲೆ ತಿಳಿಸಿದ ದಾಖಲೆಗಳೊಂದಿಗೆ ಚಾಲನಾ ಅನುಜ್ಞಾ ಪ್ರಾಧಿಕಾರದ ಸಮಕ್ಷಮ ಮೌಖಿಕ ಪರೀಕ್ಷೆಗೆ ಹಾಜರಾಗಬೇಕು. 

4.ಪರೀಕ್ಷೆಯ ವಿವರಗಳು

ಮೋಟಾರು ವಾಹನ ಕಾಯ್ದೆ 1988 ನಿಯಮಗಳ ಪ್ರಕಾರ ನಿರ್ವಾಹಕರ ಹುದ್ದೆಗೆ ಸಂಬಂಧಿಸಿದ ಕರ್ತವ್ಯಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕು.  ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989ರ ನಿಯಮ 25ರಲ್ಲಿ ನಿರೂಪಿಸಿರುವ ನಿರ್ವಾಹಕರ ನಡವಳಿಕೆ ಮತ್ತು ಕರ್ತವ್ಯಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು.

ಈ ರೀತಿಯ ನಿಯಮಗಳ ಪರಿಜ್ಞಾನವಿಲ್ಲದೇ ಇರುವ ಅರ್ಜಿದಾರರಿಗೆ ನಿರ್ವಾಹಕ ಅನುಜ್ಞಾ ಪತ್ರವನ್ನು ನೀಡಲಾಗುವುದಿಲ್ಲ. (ನಿಯಮ 25 ಕೆ.ಎಂ.ವಿ.ಆರ್. 1989)

5.ನಿರ್ವಾಹಕ ಅನುಜ್ಞಾ ಪತ್ರ ವಿತರಣೆ

     ನಿರ್ವಾಹಕ   ಅನುಜ್ಞಾ ಪತ್ರ ಮ್ತತ್ತು ಬ್ಯಾಡ್ಜ್ ಪರೀಕ್ಷೆಯಲ್ಲಿ ಉರ್ತೀಣರಾದ ಅಭ್ಯರ್ಥಿಗೆ ಸಕಾಲ ಪ್ರಕಾರ 30 ದಿವಸದೊಳಗಾಗಿ ನೀಡಲಾಗುವುದು. (Sakala (KGSC Act 2011)).

6.ನಿರ್ವಾಹಕ ಅನುಜ್ಞಾ ಪತ್ರ ಸಿಂಧುತ್ವ

    ನಿರ್ವಾಹಕ ಅನುಜ್ಞಾ ಪತ್ರವು 3 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತವೆ.  ನಂತರ ಪ್ರತಿ 3 ವರ್ಷದ ಅವಧಿಗೆ ನವೀಕರಿಸಲಾಗುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ / ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

© Content Owned & Site maintained by Transport Department, Karnataka State Government.
Visitors Count :: 4576513 | Site Last updated on :: 13-11-2018