Wednesday, November 14, 2018,

Menu

 
Back

ಅಪಾಯಕಾರಿ ಸಾಮಾನು-ಸರಂಜಾಮು ಸಾಗಿಸುವ ಸರಕು ಸಾಗಣೆ ವಾಹನಗಳ ಚಾಲಕರಿಗೆ ಹಿಂಬರಹ ನೀಡುವಿಕೆ

  • ಹಾಳೆಯ ಮೇಲೆ ಕೈಬರಹದಿಂದ ತಯಾರಿಸಿದ  ಅರ್ಜಿ
  • ವಿದ್ಯಾರ್ಹತೆ  10ನೇ ತರಗತಿ ಅಥವಾ ತತ್ಸಮಾನ ತರಗತಿ ಉತ್ತೀರ್ಣರಾಗಿರಬೇಕು.
  • ಭಾರತೀಯ  ಅಧಿಕೃತ ಭಾಷೆಗಳ ಪೈಕಿ ಒಂದು ಭಾಷೆ ಮತ್ತು ಆಂಗ್ಲ ಭಾಷೆ ಓದಲು ಹಾಗೂ ಬರೆಯಲು ಸಮರ್ಥನಾಗಿರುವ ಬಗ್ಗೆ ಪುರಾವೆಯನ್ನು ಲಗತ್ತಿಸಬೇಕು.
  • ಹಾಗೂ ಅನಾಹುತಕಾರಿ ಸರಕು ಸಾಗಾಣಿಕೆ ಕೇಂದ್ರ ಮೋಟಾರು ನಿಯಮಾವಳಿ 1989ರ ನಿಯಮ-9ರ  ಅಡಿಯಲ್ಲಿ ನಿರೂಪಿಸಿರುವ ಪಠ್ಯ ಕ್ರಮದ ಪ್ರಕಾರ   ಅಭ್ಯರ್ಥಿಯು ಅಧಿಕೃತ ಮಾನ್ಯತೆ ಪಡೆದಿರುವ ಸಂಸ್ಥೆಯ ಪ್ರಮಾ ಪತ್ರವನ್ನು ಲಗತ್ತಿಸಬೇಕು.
  • ರೂ.200+30 =230/-ಗಳನ್ನು ಕಛೇರಿಯ ನಗದು ಶಾಖೆಯಲ್ಲಿ ಪಾವತಿಸತಕ್ಕದ್ದು.
  • ಹಿಂಬರಹ 1 ವರ್ಷದ  ಅವಧಿಗೆ ಸಿಂಧುತ್ವ ಹೊಂದಿರುತ್ತದೆ.
  • ಸಿದ್ಧಪಡಿಸಿರುವ ಚಾಲನಾ ಅನುಜ್ಞಾ ಪತ್ರ ನೋಂದಣಿ ಪತ್ರವನ್ನು ಅರ್ಜಿ ಸಲ್ಲಿಸಿರುವ ದಿನಾಂಕದಿಂದ 30 ದಿನಗಳೊಳಗಾಗಿ ಸಕಾಲ ಸೇವೆಯ  ಅಡಿಯಲ್ಲಿ 30 ದಿನಗಳೊಳಗಾಗಿ ರವಾನಿಸಲಾಗುತ್ತದೆ. ಅದಕ್ಕೆ ಸಮಬಂಧಿಸಿದಂತೆ ಸ್ವಯಂ ವಿಳಾಸ ಬರೆದಿರುವ ಹಾಗೂ ಸೂಕ್ತ ಪೋಸ್ಟಲ್ ಸ್ಟ್ಯಾಂಪ್ ವುಳ್ಳ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸುವುದು ಅವಶ್ಯಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ / ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
© Content Owned & Site maintained by Transport Department, Karnataka State Government.
Visitors Count :: 4576583 | Site Last updated on :: 13-11-2018