Monday, August 26, 2019,

Menu

 
Back

ಚಾಲನಾ ಅನುಜ್ಞಾ ಪತ್ರ ಮತ್ತು ವಾಹನ ನೊಂದಣಿ ಸಂಬಂಧಿತ ಶುಲ್ಕಗಳು

ಕೇಂದ್ರ ಸರ್ಕಾರದ ಸುತ್ತೋಲೆ GSR1183 (E) ದಿನಾಂಕ 29-12-2016 ರಲ್ಲಿ ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 32 ರ ಕೋಷ್ಠಕದಲ್ಲಿ ಈ ಕೆಳಕಂಡಂತೆ ಶುಲ್ಕ ಪರಿಷ್ಕರಿಸಲಾಗಿರುತ್ತದೆ.

ಕಛೇರಿಯ ನಗದು ಕೌಂಟರ್ ಸಮಯ: ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30 ರ ವರೆಗೆ, ಶನಿವಾರ (2ನೇ ಶನಿವಾರ ಹೊರತುಪಡಿಸಿ) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ರ ವರೆಗೆ.

ಕ್ರಮ.ಸಂ. ಉದ್ದೇಶ ಮೊತ್ತ
1 ನಮೂನೆ 3 ರಲ್ಲಿ ಪ್ರತಿಯೊಂದು ವರ್ಗದ ಕಲಿಕಾ ಚಾಲನಾ ಅನುಜ್ಞಾ ಪತ್ರ ನೀಡಿಕೆಗೆ ಶುಲ್ಕ ರೂ. 150
2 ಕಲಿಕಾ ಅನುಜ್ಞಾ ಪತ್ರ ಪರೀಕ್ಷಾ ಶುಲ್ಕ ಅಥವಾ ಪುನರ್ ಪರೀಕ್ಷಾ ಶುಲ್ಕ ರೂ. 50
3 ಚಾಲನಾ ಅನುಜ್ಞಾ ಪತ್ರ ಪರೀಕ್ಷಾ ಶುಲ್ಕ ಅಥವಾ ಪುನರ್ ಪರೀಕ್ಷಾ ಶುಲ್ಕ (ವಾಹನದ ಪ್ರತಿ ವರ್ಗಕ್ಕೆ) ರೂ. 300
4 ಚಾಲನಾ ಅನುಜ್ಞಾ ಪತ್ರ ನೀಡಿಕೆಗೆ       ರೂ. 200
5 ಅಂತರ ರಾಷ್ಟ್ರೀಯ ಚಾಲನಾ ಪರವಾನಗಿ ನೀಡಿಕೆಗೆ ರೂ. 1000
6 ಚಾಲನಾ ಅನುಜ್ಞಾ ಪತ್ರದಲ್ಲಿ ಮತ್ತೊಂದು ವಾಹನದ ವರ್ಗ ಸೇರ್ಪಡಿಸುವಿಕೆ ರೂ. 500
7 ಚಾಲನಾ ಅನುಜ್ಞಾ ಪತ್ರದಲ್ಲಿ ಮತ್ತೊಂದು ವಾಹನದ ವರ್ಗ ನಮೂದು (endorsement ) ಅಥವಾ ಸ್ಫೋಟಕ ಸಾಗಾಣಿಕೆ ವಾಹನ ಸೇರ್ಪಡಿಸುವಿಕೆ ರೂ. 100
8 ಚಾಲನಾ ಅನುಜ್ಞಾ ಪತ್ರ ನವೀಕರಣ ರೂ. 200
9 ನಿಗಧಿತ ರಿಯಾಯಿತಿ ಅವಧಿ ಮುಗಿದ ನಂತರ ಚಾಲನಾ ಅನುಜ್ಞಾ ಪತ್ರ ನವೀಕರಣಕ್ಕೆ ತಡವಾಗಿ ಅರ್ಜಿ ಸಲ್ಲಿಸಿದಲ್ಲಿ

ರೂ. 300

ಟಿಪ್ಪಣಿ : ತಡವಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಪ್ರತಿ ವರ್ಷಕ್ಕೆ / ಅದರ ಭಾಗಕ್ಕೆ ಹೆಚ್ಚುವರಿ ಶುಲ್ಕ ರೂ 1000

10 ಚಾಲನಾ ತರಬೇತಿ ಶಾಲೆ ಅನುಜ್ಞಾ ಪತ್ರ ಹೊಸದಾಗಿ ಪಡೆಯಲು ಅಥವಾ ನವೀಕರಿಸಲು ರೂ. 10000
11 ನಕಲು ಚಾಲನಾ ತರಬೇತಿ ಶಾಲೆ ಅನುಜ್ಞಾ ಪತ್ರ ಪಡೆಯಲು ರೂ. 5000
12 ನಿಯಮ 29 ರಂತೆ ಚಾಲನಾ ಪರವಾನಗಿ ಪ್ರಾಧಿಕಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ರೂ. 500
13 ಯಾವುದೇ ಅರ್ಜಿಯಲ್ಲಿ ವಿಳಾಸ ಬದಲಾವಣೆ ಅಥವಾ ಇನ್ನಿತರೆ ವಿವರಗಳನ್ನು ಚಾಲನಾ ಅನುಜ್ಞಾ ಪತ್ರದಲ್ಲಿ ನಮೂದಿಸಲು. ರೂ. 200

ಟಿಪ್ಪಣಿ:  1. ಸ್ಮಾರ್ಟ್ ಕಾರ್ಡ್ ಪಡೆಯಲು ನಮೂನೆ 7 ರಲ್ಲಿ ಹೆಚ್ಚುವರಿ ಶುಲ್ಕ ರೂ.200 ಪಾವತಿಸಬೇಕು.

            2. ಕ್ರಮ ಸಂಖ್ಯೆ 1, 2 ಮತ್ತು 3 ಕ್ಕೆ ಸಂಬಂಧಿಸಿದಂತೆ ಕಲಿಕಾ ಚಾಲನಾ ಅನುಜ್ಞಾ ಪತ್ರ / ಚಾಲನಾ ಅನುಜ್ಞಾ ಪತ್ರ ಹಾಗೂ ಇತರೆ ವಾಹನ ವರ್ಗದ ಸೇರ್ಪಡೆಗೆ ಒಟ್ಟು ನಿಗಧಿತ ಶುಲ್ಕ ಪಾವತಿಸಬೇಕಾಗುತ್ತದೆ.";

ನಿಯಮ 81 ಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಶುಲ್ಕ ಪರಿಷ್ಕರಿಸಲಾಗಿದೆ.
ಕ್ರಮ.ಸಂ. ಉದ್ದೇಶ ಮೊತ್ತ
     
1

ಪ್ರತಿಯೊಂದು ವಾಹನದ ವರ್ಗದ ಟ್ರೇಡ್ ಸರ್ಟಿಫಿಕೇಟ್ (ವ್ಯಾಪಾರ ಪ್ರಮಾಣ ಪತ್ರ) ನೀಡಿಕೆ:

 

(ಅ) ಮೋಟಾರು ಸೈಕಲ್ (ದ್ವಿಚಕ್ರ ವಾಹನ)

ರೂ. 500

(ಆ) ಅಶಕ್ತರ ವಾಹನ (ಇನ್‍ವ್ಯಾಲಿಡ್ ಕ್ಯಾರೇಜ್)

ರೂ. 500

(ಇ) ಇತರೆ ವಾಹನಗಳು (ಅದರ್ಸ್)

ರೂ. 1000

2

ನಕಲು ಟ್ರೇಡ್ ಸರ್ಟಿಫಿಕೇಟ್ (ವ್ಯಾಪಾರ ಪ್ರಮಾಣ ಪತ್ರ) :

 

(ಅ) ಮೋಟಾರು ಸೈಕಲ್ (ದ್ವಿಚಕ್ರ ವಾಹನ)

ರೂ. 300

(ಆ) ಅಶಕ್ತರ ವಾಹನ (ಇನ್‍ವ್ಯಾಲಿಡ್ ಕ್ಯಾರೇಜ್)

ರೂ. 300

(ಇ) ಇತರೆ ವಾಹನಗಳು (ಅದರ್ಸ್)

ರೂ. 500

3 ನಿಯಮ 46 ರ ಮೇಲ್ಮನವಿ ರೂ. 1000
4

ಹೊಸದಾಗಿ ಅಥವಾ ನವೀಕರಿಸುವ ನೋಂದಣಿ ಪತ್ರ ಮತ್ತು ಹೊಸ ನೋಂದಣಿ ಸಂಖ್ಯೆ ನೀಡಿಕೆ

 

(ಅ) ಅಶಕ್ತರ ವಾಹನ (ಇನ್‍ವ್ಯಾಲಿಡ್ ಕ್ಯಾರೇಜ್)

ರೂ. 50

(ಆ) ಮೋಟಾರು ಸೈಕಲ್ (ದ್ವಿಚಕ್ರ ವಾಹನ)

ರೂ. 300

 

(ಇ) ತ್ರಿಚಕ್ರ /Quadricycle/ಲಘು ಮೋಟಾರು ವಾಹನ :

 

      i) ಸಾರಿಗೇತರ ವಾಹನಗಳು

ರೂ. 600

      ii) ಸಾರಿಗೆ ವಾಹನಗಳು (ವಾಣಿಜ್ಯ)

ರೂ. 1000

 

(ಈ) ಮಧ್ಯಮ ಸರಕು ವಾಹನ 

ರೂ. 1000

(ಉ) ಮಧ್ಯಮ ಪ್ರಯಾಣಿಕರ ವಾಹನ

ರೂ. 1000

(ಊ) ಭಾರಿ ಸರಕು ವಾಹನ

ರೂ. 1000

(ಋ) ಭಾರಿ ಪ್ರಯಾಣಿಕರ ವಾಹನ

ರೂ. 1000

(ಎ) ಆಮದು ವಾಹನ

ರೂ. 5000

(ಏ) ಆಮದು ದ್ವಿಚಕ್ರ ವಾಹನ

ರೂ. 2500

(ಐ) ಮೇಲೆ ತಿಳಿಸಿರುವ ವಾಹನಗಳ ಹೊರತುಪಡಿಸಿ ಇತರೆ ವಾಹನಗಳಿಗೆ

ರೂ. 3000

ಟಿಪ್ಪಣಿ 1. ಹೊಸ ನೋಂದಣಿ / ನೋಂದಣಿ ನವೀಕರಣ (ನಮೂನೆ 23A) ಸ್ಮಾರ್ಟ್ ಕಾರ್ಡ್ ಪಡೆಯಲು ಹೆಚ್ಚುವರಿ ಶುಲ್ಕ ರೂ 200 ಪಾವತಿಸಬೇಕು.

ಟಿಪ್ಪಣಿ 2. ನವೀಕರಣ ಅರ್ಜಿ ಸಲ್ಲಿಸಲು ತಡವಾದಲ್ಲಿ ಪ್ರತಿ ತಿಂಗಳು / ಅದರ ಭಾಗಕ್ಕೆ-

ದ್ವಿಚಕ್ರ ವಾಹನ  300 ರೂ.ಗಳು, ಇತರೆ ವಾಹನ  500 ರೂ.ಗಳು

 

5

ನಕಲು ನೋಂದಣಿ ಪತ್ರ ಪಡೆಯಲು    

ಕ್ರಮ ಸಂಖ್ಯೆ 4 ರಲ್ಲಿ ತಿಳಿಸಿದ ಅರ್ಧದಷ್ಟು ಶುಲ್ಕ

6 ಮಾಲೀಕತ್ವ ವರ್ಗಾವಣೆ

ಕ್ರಮ ಸಂಖ್ಯೆ 4 ರಲ್ಲಿ ತಿಳಿಸಿದ ಅರ್ಧದಷ್ಟು ಶುಲ್ಕ

ಟಿಪ್ಪಣಿ : ಮಾಲೀಕತ್ವ ವರ್ಗಾವಣೆಗೆ ಆಕ್ಷೇಪಣಾ ರಹಿತ ಪತ್ರ ಸಲ್ಲಿಸಲು ತಡವಾದಲ್ಲಿ ಪ್ರತಿ ತಿಂಗಳಿಗೆ / ಅದರ ಭಾಗಕ್ಕೆ-

ದ್ವಿಚಕ್ರ ವಾಹನ ರೂ.300,ಇತರೆ ವರ್ಗದ ಸಾರಿಗೇತರ ವಾಹನಗಳಿಗೆ ರೂ 500/-

7 ವಿಳಾಸ ಬದಲಾವಣೆ

ಕ್ರಮ ಸಂಖ್ಯೆ 4 ರಲ್ಲಿ ತಿಳಿಸಿದ ಅರ್ಧದಷ್ಟು ಶುಲ್ಕ

ಟಿಪ್ಪಣಿ : ವಿಳಾಸ ಬದಲಾವಣೆಗೆ ಆಕ್ಷೇಪಣಾ ರಹಿತ ಪತ್ರ ಸಲ್ಲಿಸಲು ತಡವಾದಲ್ಲಿ ಪ್ರತಿ ತಿಂಗಳಿಗೆ / ಅದರ ಭಾಗಕ್ಕೆ-

ದ್ವಿಚಕ್ರ ವಾಹನ ರೂ 300,ಇತರೆ ವರ್ಗದ ಸಾರಿಗೇತರ ವಾಹನಗಳಿಗೆ ರೂ 500.

8 ನೋಂದಣಿ ಪತ್ರದಲ್ಲಿ ವಾಹನದ ಅಲ್ಪ ಪರಿವರ್ತನೆ ನಮೂದಿಸಲು      

ಕ್ರಮ ಸಂಖ್ಯೆ 4 ರಲ್ಲಿ ತಿಳಿಸಿದ ಅರ್ಧದಷ್ಟು ಶುಲ್ಕ

9

ಕಂತು-ಕರಾರು/ಲೀಸ್ ಒಪ್ಪಂದ ನಮೂದು-

 

(ಅ) ಮೋಟಾರು ಸೈಕಲ್ (ದ್ವಿಚಕ್ರ ವಾಹನ)

ರೂ. 500

(ಆ) ತ್ರಿಚಕ್ರ /Quadricycle/ಲಘು ಮೋಟಾರು ವಾಹನ

ರೂ. 800

(ಇ) ಮಧ್ಯಮ ಅಥವಾ ಭಾರಿ ಗಾತ್ರದ ವಾಹನಗಳು

ರೂ. 800

ಟಿಪ್ಪಣಿ : ಕಂತು-ಕರಾರು ರದ್ಧತಿ / ಲೀಸ್ ರದ್ದತಿಗೆ ಹಾಗೂ ಹೊಸ ನೋಂದಣಿ ಪತ್ರ ನೀಡಿಕೆಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ.

 
10

ವಾಹನದ ಅರ್ಹತಾ ಪತ್ರ ನೀಡಿಕೆ / ನವೀಕರಣ ಶುಲ್ಕ   

 

(ಅ) ಮೋಟಾರು ಸೈಕಲ್ (ದ್ವಿಚಕ್ರ ವಾಹನ)

(i) ಮಾನ್ಯುಲ್ :      ರೂ. 200

(ii) ಸ್ವಯಂಚಾಲಿತ: ರೂ. 400

(ಆ) ತ್ರಿಚಕ್ರ /Quadricycle/ಲಘು ಮೋಟಾರು ವಾಹನ

(i) ಮಾನ್ಯುಲ್ :      ರೂ. 400

(ii) ಸ್ವಯಂಚಾಲಿತ: ರೂ. 600

(ಇ) ಮಧ್ಯಮ ಅಥವಾ ಭಾರಿ ಗಾತ್ರದ ವಾಹನಗಳು

(i) ಮಾನ್ಯುಲ್ :      ರೂ.600

(ii) ಸ್ವಯಂಚಾಲಿತ: ರೂ.1000

11

ವಾಹನದ ಅರ್ಹತಾ ಪತ್ರ ನೀಡಿಕೆ / ನವೀಕರಣ ಶುಲ್ಕ

ರೂ. 200

 

12 ಅಧಿಕಾರ ಪತ್ರ ನೀಡಿಕೆ / ನವೀಕರಣಕ್ಕೆ ರೂ. 15000
13 ನಕಲು ಅಧಿಕಾರ ಪತ್ರ ನೀಡಿಕೆ ರೂ. 7500
14 ನಿಯಮ 70 ರಂತೆ ಅಪೀಲು ಸಲ್ಲಿಕೆ ರೂ. 3000
15 ಕ್ರಮ ಸಂಖ್ಯೆ 1 ರಿಂದ 14 ರಲ್ಲಿ ತಿಳಿಸಿರುವ ವಿಷಯಗಳ ಹೊರತಾಗಿ ಇತರೆ ವಿಷಯಗಳ ಅರ್ಜಿಗಳಿಗೆ ಶುಲ್ಕ ರೂ. 200

ಟಿಪ್ಪಣಿ 1: ಕ್ರಮ ಸಂಖ್ಯೆ 4 ರಲ್ಲಿನ ಮಧ್ಯಮ ಗಾತ್ರ ವಾಹನಗಳು, ಭಾರಿ ಗಾತ್ರದ ವಾಹನಗಳು, ಆಮದು ವಾಹನಗಳು ಸಾರಿಗೆ/ಸಾರಿಗೇತರ ವಾಹನಗಳಿಗೆ ಸಹ ಇದೇ ಶುಲ್ಕ ಅನ್ವಯವಾಗುತ್ತದೆ.

ಟಿಪ್ಪಣಿ 2: ಹೊಸ ನೋಂದಣಿ ಪತ್ರ / ಕಂತು-ಕರಾರು ನೋಂದಣಿ / ಕಂತು-ಕರಾರು ರದ್ಧತಿಗೆ ಸ್ಮಾರ್ಟ್ ಕಾರ್ಡ್ ನೀಡುವಾಗ ಪ್ರತ್ಯೇಕವಾಗಿ ಸ್ಮಾರ್ಟ್ ಕಾರ್ಡ್ ಶುಲ್ಕ ರೂ 200/- ವಿಧಿಸುವಂತಿಲ್ಲ. ಆದರೆ ಇನ್ನಿತರೆ ಕೆಲಸಗಳಿಗೆ ಸ್ಮಾರ್ಟ್ ಕಾರ್ಡ್ ಶುಲ್ಕ ರೂ 200/- ವಿಧಿಸಬಹುದಾಗಿರುತ್ತದೆ."

 

© Content Owned & Site maintained by Transport Department, Karnataka State Government.
Visitors Count :: 5886576 | Site Last updated on :: 23-08-2019