ಕರ್ನಾಟಕ ಸರ್ಕಾರ
(ಸಾರಿಗೆ ಇಲಾಖೆ)
TC/EST-05/PR-127/ 13-14 |
ಸಾರಿಗೆ ಮತ್ತು ರಸ್ತೆ ಸುರಕ್ಷತೆ
ಆಯುಕ್ತರ ಕಛೇರಿ, 1ನೇ ಮಹಡಿ,
ಟಿ.ಟಿ.ಎಂ.ಸಿ. ಕಟ್ಟಡ, ಶಾಂತಿನಗರ,
ಬೆಂಗಳೂರು-27.
ದಿನಾಂಕ:30-7-2014
|
ಪ್ರಕಟಣೆ
I. ಸಾರಿಗೆ ಇಲಾಖೆಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳು
ಸಾರಿಗೆ ಇಲಾಖೆಯು ರಾಜ್ಯದಲ್ಲಿ ಒಂದು ಪ್ರಮುಖ ಇಲಾಖೆಯಾಗಿರುತ್ತದೆ. ಇಲಾಖೆಯು ರಾಜ್ಯಾದ್ಯಂತ ಅಧೀನ ಕಛೇರಿಗಳಾದ ಪ್ರಾದೇಶಿಕ ಸಾರಿಗೆ ಕಛೇರಿಗಳು ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಗಳನ್ನು ಹೊಂದಿದ್ದು, ಅವುಗಳ ಮುಖೇನ ಸಾರ್ವಜನಿಕ ಸೇವೆಗಳನ್ನು ನಿರ್ವಹಿಸಿರುತ್ತದೆ, ಇಲಾಖೆಯು ಮೊದಲನೇ ಮಹಡಿ, ಟಿ.ಟಿ.ಎಂ.ಸಿ. ಕಟ್ಟಡ, ಶಾಂತಿನಗರ, ಬೆಂಗಳೂರು ಇಲ್ಲಿ ಕೇಂದ್ರ ಕಛೇರಿ ಯನ್ನು ಹೊಂದಿರುತ್ತದೆ.
ಇಲಾಖೆಯು ಈ ಕೆಳಗಿನಂತೆ ಆಡಳಿತ ವ್ಯವಸ್ಥೆಯನ್ನು ಹೊಂದಿರುತ್ತದೆ
ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ನಂತರ ಕೇಂದ್ರ ಕಛೇರಿಯಲ್ಲಿ ಈ ಕೆಳಗಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
- ಅಪರ ಸಾರಿಗೆ ಆಯುಕ್ತರು (ಆಡಳಿತ)
- ಅಪರ ಸಾರಿಗೆ ಆಯುಕ್ತರು (ಪ್ರವರ್ತನ ದಕ್ಷಿಣ)
- ಅಪರ ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು
- ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ), ಬೆಂಗಳೂರು
- ಕಾನೂನು ಅಧಿಕಾರಿ
- ಆರ್ಥಿಕ ಸಲಹೆಗಾರರ (ಲೆಕ್ಕ)
- ಆರ್ಥಿಕ ಸಲಹೆಗಾರರು (ಆಡಿಟ್)
- ಸಹಾಯಕ ನಿರ್ದೇಶಕರು, ಅಂಕಿ ಅಂಶ
- ಇಬ್ಬರು ಸಹಾಯಕ ಕಾನೂನು ಅಧಿಕಾರಿಗಳು
- ನಾಲ್ಕು ಜನ ಸಹಾಯಕ ಕಾರ್ಯದರ್ಶಿಗಳು
ಹಾಗೂ ವಿಭಾಗೀಯ ಮಟ್ಟದಲ್ಲಿ ಈ ಕೆಳಗಿನ ಕಛೇರಿ ಮತ್ತು ಅಧಿಕಾರಿಗಳನ್ನು ಹೊಂದಿರುತ್ತದೆ
ಇವರುಗಳು ವಲಯ, ವಿಭಾಗೀಯ ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಕಛೇರಿಗಳ ಮುಖ್ಯಸ್ಥರಾಗಿರುತ್ತಾರೆ. ಸಾರಿಗೆ ಇಲಾಖೆಯು ಮುಖ್ಯವಾಗಿ ಈ ಕೆಳಗಿನ ಕರ್ತವ್ಯಗಳನ್ನು ನಿರ್ವಹಿಸುತ್ತದೆ.
- ಮೋಟಾರು ವಾಹನಗಳ ನೋದಣಿ
- ಚಾಲನಾ ಅನುಜ್ಞಾ ಪತ್ರ ಮತ್ತು ನಿರ್ವಾಹಕ ಅನುಜ್ಞಾ ಪತ್ರಗಳ ನೀಡುವಿಕೆ
- ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳ ರಹದಾರಿ ನೀಡುವಿಕೆ
- ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆ
- ಮೋಟಾರು ವಾಹನಗಳ ಪ್ರವರ್ತನ ಮತ್ತು ತಪಾಸಣಾ ಕಾರ್ಯ.
- ರಸ್ತೆ ಸುರಕ್ಷತೆ ಕಾಪಾಡುವುದು
- ವಾಹನಗಳ ಮಾಲಿನ್ಯ ನಿಯಂತ್ರಣ ಮಾಡುವುದು
II. ಅಧಿಕಾರಿಗಳ ಮತ್ತು ನೌಕರರ ಅಧಿಕಾರ ಮತ್ತು ಕರ್ತವ್ಯಗಳು
ಸಾರಿಗೆ ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಆಯುಕ್ತರು ಇಲಾಖೆಗೆ ಸಂಬಂಧಿಸಿದಂತೆ ಮುಖ್ಯವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮತ್ತು ಆದೇಶ ನೀಡುವ ಅಧಿಕಾರ ಹೊಂದಿರುತ್ತಾರೆ ಹಾಗೂ ಸರ್ಕಾರದ ಮಟ್ಟದಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಮುಖ ಸಭೆಗಳಿಗೆ ಹಾಜರಾಗುತ್ತಾರೆ ಹಾಗೂ ಇಲಾಖೆಯು ಸಂಪೂರ್ಣ ಆಯುಕ್ತರ ನಿಯಂತ್ರಣದಲ್ಲಿರುತ್ತದೆ ಮತ್ತು ಆಯುಕ್ತರು ಇಲಾಖೆಯಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರರ ನೇಮಕಾತಿ ಮತ್ತು ತುರ್ತು ಪ್ರಾಧಿಕಾರ ಅಧಿಕಾರ ಹೊಂದಿರುತ್ತಾರೆ, ಆಯುಕ್ತರು ಇಲಾಖೆಗೆ ಸಂಬಂಧಿದಂತೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಚಲಾಯಿಸುವ ಅಧಿಕಾರ ಹೊಂದಿರು ತ್ತಾರೆ, ಆಯುಕ್ತರು, ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿರುತ್ತಾರೆ.
ವಲಯ ಮಟ್ಟದ ಅಪರ ಸಾರಿಗೆ ಆಯುಕ್ತರು, (ಉತ್ತರ ವಲಯ), ಧಾರವಾಡ ಜಂಟಿ ಸಾರಿಗೆ ಆಯುಕ್ತರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಜ್ಯದ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳು ಆಯುಕ್ತರ ನಿಯಂತ್ರಣದಲ್ಲಿರುತ್ತವೆ
ಅಪರ ಸಾರಿಗೆ ಆಯುಕ್ತರುಗಳು
- ಅಪರ ಸಾರಿಗೆ ಆಯುಕ್ತರು (ಆಡಳಿತ)
- ಎ) ಸಾಮಾನ್ಯ ಆಡಳಿತ.
- ಬಿ) ಕಟ್ಟಡ ಮತ್ತು ಪೀಠೋಪಕರಣಗಳ ವಿಭಾಗ.
- ಸಿ) ಸರ್ಕಾರದ ಮಟ್ಟದ ಸಭೆಗಳು, ಸಾರಿಗೆ ಇಲಾಖೆ ಮತ್ತು ಬೇರೆ ಇಲಾಖೆಗಳ ಸಭೆಗಳನ್ನು ಪ್ರತಿನಿಧಿಸುವುದು.
- ಡಿ) ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ನಿವಾರಣೆ ಮಾಡುವುದು.
- ಈ) ಇಲಾಖಾ ಮಟ್ಟದ ಸಭೆಗಳನ್ನು ಆಯೋಜಿಸುವುದು
- ಎಫ್) ಹೊಸ ವಾಹನಗಳ ನೋಂದಣಿಗೆ ಅನುಮೋದನೆ ನೀಡುವುದು.
- ಜಿ) ಇಲಾಖೆಯ ಅಂಕಿ ಅಂಶಗಳ ನಿರ್ವಹಣೆ.
- ಹೆಚ್) ಕಾನೂನು ವಿಭಾಗದ ಉಸ್ತುವಾರಿ ಮತ್ತು ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳ ತಿದ್ದುಪಡಿಗಳಿಗೆ ಸಂಬಂಧಿಸಿದ ಉಸ್ತುವಾರಿ.
- ಐ) ಇಲಾಖೆಯ ಸಿ ಗ್ರೂಫ್ ನೌಕರರ ವಾರ್ಷಿಕ ಗೌಪ್ಯ ವರದಿಗಳ ನಿರ್ವಹಣೆ,
- ಜೆ) ಸಿ ಗ್ರೂಫ್ ನೌಕರರ ಕಾಲಮಿತಿ ಮುಂಬಡ್ತಿ ಮಂಜುರಾತಿ ಹೆಚ್ಚುವರಿ ಬಡ್ತಿಗಳ ನಿರ್ವಹಣೆ.
- ಕೆ) ಇಲಾಖೆಯ ಲೇಖನ ಸಾಮಗ್ರಿಗಳ ನಿರ್ವಹಣೆ.
- ಎಲ್) ಇಲಾಖೆಗೆ ಸಂಬಂಧಿಸಿದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳ, ಸಕಾಲ ಸೇವೆಗಳ ನಿರ್ವಹಣೆ
- ಅಪರ ಸಾರಿಗೆ ಆಯುಕ್ತರು (ಪ್ರವರ್ತನ ದಕ್ಷಿಣ)
- ಎ) ಅಂತರ ರಾಷ್ಟ್ರೀಯ ಚಾಲನಾ ಅನುಜ್ಞಾ ಪತ್ರ ನೀಡುವುದು.
- ಬಿ) ಹೊಸ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ನಾಮಫಲಕಗಳ ಅನುಷ್ಠಾನಗೊಳಿಸುವುದು.
- ಸಿ) ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬೆಂಗಳೂರು (ಗ್ರಾಮಾಂತರ), ಮೈಸೂರು ಮತ್ತು ಶಿವಮೊಗ್ಗ ವಿಭಾಗಗಳಿಗೆ ಸಂಬಂಧಿಸಿದಂತೆ ಹಿರಿಯ ಮೋಟಾರು ವಾಹನ ತನಿಖಾಧಿಕಾರಿಗಳ ನಿಯೋಜನೆ ಮಾಡುವಿಕೆ ಮತ್ತು ತನಿಖಾ ಠಾಣೆಗಳ ಉಸ್ತುವಾರಿ ವಹಿಸುವುದು.
- ಡಿ) ಹೊಸ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಆಕರ್ಷಕ ನೋಂದಣಿ ಸಂಖ್ಯೆ ನೀಡುವುದು.
- ಇ) ರಸ್ತೆ ಸುರಕ್ಷತೆಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು.
- ಎಫ್) ರಾಜ್ಯಾದ್ಯಂತ ಪ್ರವರ್ತನ ಚಟುವಟಿಕೆಗಳನ್ನು ನಡೆಸುವುದು ಮತ್ತು ಸಮಸ್ಯೆಗಳನ್ನು ಬಗೆಹರಿಸುವುದು, ಪ್ರವರ್ತನಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವುದು.
- ಜಿ) ಜಂಟಿ ಸಾರಿಗೆ ಆಯುಕ್ತರುಗಳು ಮತ್ತು ಉಪ ಸಾರಿಗೆ ಆಯುಕ್ತರುಗಳ ಮಾಸಿಕ ದಿನಚರಿ ಪರಿಶೀಲನೆ ಮಾಡುವುದು ಅವರುಗಳಿಗೆ ಸಾಂದರ್ಭಿಕ ರಜೆ ಮತ್ತು ಇತರೆ ರಜೆಗಳ ಮಂಜೂರಾತಿ ಮತ್ತು ಉಸ್ತುವಾರಿ ನಿರ್ವಹಿಸುವುದು.
- ಹೆಚ್) ವಿಭಾಗಗಳಿಂದ ಬರುವ ದೂರುಗಳು ಮತ್ತು ಸಮಸ್ಯೆಗಳ ನಿರ್ವಹಣೆ ಮಾಡುವುದು.
- ಐ) ಚಾಲನಾ ತರಬೇತಿ ಶಾಲೆಗಳ ಉಸ್ತುವಾರಿ.
- ಜೆ) ಸಾರಿಗೆ ಅದಾಲತ್.
- ಅಪರ ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು
- ಎ) ರಾಜ್ಯ ಸಾರಿಗೆ ಪ್ರಾಧಿಕಾರದ ನಿರ್ವಹಣೆ ಮತ್ತು ಉಸ್ತುವಾರಿ.
- ಬಿ) ಮೋಟಾರು ವಾಹನ ತೆರಿಗೆಗೆ ಸಂಬಂಧಿಸಿದ ವಿಚಾರಗಳು.
- ಸಿ) ನಾಗರೀಕ ಸನ್ನದು ಮತ್ತು ಸಾರಿಗೆ ಅದಾಲತ್ ಮೇಲ್ವಿಚಾರಣೆ.
- ಡಿ) ಬಡ್ಜೆಟ್.ಗೆ ಸಂಬಂಧಿಸಿದಂತೆ.
- ಇ) ಆಡಿಟ್ ಮೇಲ್ವಿಚಾರಣೆ.
- ಎಫ್) ಭರವಸೆ ಸಮಿತಿಯ ಉಸ್ತುವಾರಿ.
- Outsourcing of the in respect of computerization
- ಜಿ) ವಿಧಾನ ಪರಿಷತ್ ಮತ್ತು ವಿಧಾನ ಸಭೆಯ ಪ್ರಶ್ನೆಗಳ ಉಸ್ತುವಾರಿ.
- ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ), ಬೆಂಗಳೂರು
- ಎ) ರಾಜ್ಯದ ವಾಯುಮಾಲಿನ್ಯ ನಿಯಂತ್ರಣ ತಪಾಸಣಾ ಕೇಂದ್ರಗಳಿಗೆ ಪರವಾನಿಗೆ ನೀಡುವುದು ಮತ್ತು ಅವುಗಳಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು.
- ಬಿ) ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ವಿಚಾರಗಳು.
- ಸಿ) ಗುಪ್ತ ಮಾಹಿತಿ ಸಂಗ್ರಹಿಸಿ, ನಿರ್ವಹಣೆ.
- ಡಿ) ಇಲಾಖೆಯ ಗಣಕೀಕರಣ ಮತ್ತು ವೆಬ್.ಸೈಟ್ ಉಸ್ತುವಾರಿ.
- ಇ) ವಾಹನಗಳ ವೇಗ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರಗಳು.
- ಎಫ್) ಎಲ್.ಪಿ.ಜಿ. ಇಂಧನ ಉಪಯೋಗಕ್ಕೆ ಸಂಬಂಧಿಸಿದ ವಿಚಾರಗಳು ಮತ್ತು ನಿರ್ವಹಣೆ.
- ಜಿ) ಇಲಾಖೆಯ ಗಣಕೀಕರಣಕ್ಕೆ ಸಂಬಂಧಿಸಿದ ವಿಚಾರಗಳು.
- ಕಾನೂನು ಅಧಿಕಾರಿ, ಆರ್ಥಿಕ ಸಲಹೆಗಾರರು-1 ಮತ್ತು 2, ಸಹಾಯಕ ಕಾರ್ಯದರ್ಶಿ 1, 2, 3, ಸಹಾಯಕ ನಿರ್ದೇಶಕರು ಅಂಕಿ ಅಂಶ ಇವರುಗಳು ಅವರ ವಿಭಾಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳ ನಿರ್ವಹಣೆ.
ವಿಭಾಗೀಯ ಮಟ್ಟದಲ್ಲಿ:
ಜಂಟಿ ಸಾರಿಗೆ ಆಯುಕ್ತರುಗಳು ಅವರ ವ್ಯಾಪ್ತಿಗೆ ಬರುವ ಪ್ರಾದೇಶಿಕ ಸಾರಿಗೆ ಕಛೇರಿಗಳ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಗಳ ಉಸ್ತುವಾರಿ ಮತ್ತು ಆಗ್ಗಿದಾಗ್ಗೆ ಕಛೇರಿಗಳ ತಪಾಸಣೆ ಮಾಡುವುದು ಮತ್ತು ಜಂಟಿ ಸಾರಿಗೆ ಆಯುಕ್ತರು ತೆರಿಗೆ ಮೇಲ್ಮನವಿ ಪ್ರಾಧಿಕಾರದ ಮುಖ್ಯಸ್ಥರಾಗಿರುತ್ತಾರೆ
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಬರುವ ವಾಹನಗಳ ನೋಂದಣಿ ಮಾಡುವುದು, ಚಾಲನಾ ಅನುಜ್ಞಾ ಪತ್ರ, ನಿರ್ವಾಹಕ ಅನುಜ್ಞಾ ಪತ್ರ ನೀಡುವುದು, ಸಾರಿಗೇತರ ವಾಹನಗಳ ನೋಂದಣಿ ನವೀಕರಣ ಮಾಡುವುದು, ವಾಹನಗಳ ಅರ್ಹತಾ ಪತ್ರ ನೀಡುವುದು ಮತ್ತು ತೆರಿಗೆ ಸಂಗ್ರಹಣೆ ಮಾಡುವುದು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನ ನೋಂದಣಿ ಪ್ರಾಧಿಕಾರ ಮತ್ತು ಚಾಲನಾ ಅನುಜ್ಞಾ ಪತ್ರ ಹಾಗೂ ಪ್ರಾಧಿಕಾರವಾಗಿದ್ದು, ಆ ಕಛೇರಿಯ ವ್ಯಾಪ್ತಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದು, ಸಾರಿಗೆ ವಾಹನಗಳಿಗೆ ಪರವಾನಿಗೆ ನೀಡುವ ಅಧಿಕಾರ ಹೊಂದಿರುತ್ತಾರೆ.
ಇಲಾಖೆಯಲ್ಲಿ ಹಿರಿಯ ಮೋಟಾರು ವಾಹನಗಳ ತನಿಖಾಧಿಕಾರಿಗಳು ಮತ್ತು ಮೋಟಾರು ವಾಹನ ಗಳ ತನಿಖಾಧಿಕಾರಿಗಳು ಇದ್ದು, ಕೇಂದ್ರ ಮೋಟಾರು ವಾಹನ ಕಾಯ್ದೆ 1988, 213(5) ಮತ್ತು ಕರ್ನಾಟಕ ಮೋಟಾರು ವಾಹನ ಕಾಯ್ದೆ ಮೋಟಾರು ವಾಹನ ನಿಯಮಾವಳಿ 1989, 259 (2)ರ ಅಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವುದು ಮತ್ತು ಪ್ರವರ್ತನ ಕಾರ್ಯ ನಿರ್ವಹಣೆ.
ಕಛೇರಿಗಳಲ್ಲಿ ಅಧೀಕ್ಷಕರುಗಳಿದ್ದು, ಕಛೇರಿಗೆ ಸಂಬಂಧಿಸಿದ ವಿಭಾಗಗಳಲ್ಲಿ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆ ಮತ್ತು ತೆರಿಗೆ ಸಂಗ್ರಹಣೆ ಮಾಡುವುದು.
ಕಛೇರಿಯಲ್ಲಿ ಶೀಘ್ರಲಿಪಿಗಾರರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಚಾಲಕರು ಮತ್ತು ಗ್ರೂಪ ಡಿ ನೌಕರರುಗಳು ಇದ್ದು, ಕಛೇರಿಯ ಮುಖ್ಯಸ್ಥರ ಸೂಚನೆಯಂತೆ ಕರ್ತವ್ಯ ನಿರ್ವಹಿಸುತ್ತಾರೆ.
III. ಇಲಾಖೆಯ ಆಡಳಿತಾತ್ಮಕ ತೀರ್ಮಾನ ಕ್ರಮ ಕೈಗೊಳ್ಳುವ ಕಾರ್ಯ ವಿಧಾನ, ನಿಯಂತ್ರಣ ಮತ್ತು ಜವಾಬ್ದಾರಿಗಳು
- ಸಾರಿಗೆ ಆಯುಕ್ತರ ಕಛೇರಿ: ಕಛೇರಿಯಲ್ಲಿ ಯಾವುದೇ ಅರ್ಜಿ ಅಥವಾ ಪತ್ರ ಬಂದಲ್ಲಿ ಸಂಬಂಧಿಸಿದ ವಿಷಯ ನಿರ್ವಾಹಕರು ಕಡತದಲ್ಲಿ ಮಂಡಿಸಿ ಅಧೀಕ್ಷಕರ ಮುಂದೆ ಪರಿಶೀಲನೆಗೆ ಮಂಡಿಸುತ್ತಾರೆ. ಅಧೀಕ್ಷಕರ ಷರಾ ಬರೆದ ನಂತರ ಸಂಬಂಧಿಸಿದ ಅಪರ ಸಾರಿಗೆ ಆಯುಕ್ತರ ಆದೇಶಕ್ಕೆ ಮಂಡಿಸಲಾಗುತ್ತದೆ. ನಂತರ ಅಂತಿಮ ಆದೇಶಕ್ಕೆ ಸಾರಿಗೆ ಆಯುಕ್ತರಿಗೆ ಕಳುಹಿಸಲಾಗುತ್ತದೆ. ಆದೇಶದಂತೆ ಮುಂದಿ ಕ್ರಮ ಕೈಗೊಳ್ಳಲಾಗುತ್ತದೆ.
- ಜಂಟಿ ಸಾರಿಗೆ ಆಯುಕ್ತರ ಕಛೇರಿ: ಕಛೇರಿಯಲ್ಲಿ ಯಾವುದೇ ಅರ್ಜಿ ಅಥವಾ ಪತ್ರ ಬಂದಲ್ಲಿ ಸಂಬಂಧಿಸಿದ ವಿಷಯ ನಿರ್ವಾಹಕರು ಕಡತದಲ್ಲಿ ಮಂಡಿಸಿ ಅಧೀಕ್ಷಕರ ಮುಂದೆ ಪರಿಶೀಲನೆಗೆ ಮಂಡಿಸುತ್ತಾರೆ. ಅಧೀಕ್ಷಕರ ಷರಾ ಬರೆದ ನಂತರ ಜಂಟಿ ಸಾರಿಗೆ ಆಯುಕ್ತರ ಆದೇಶಕ್ಕೆ ಮಂಡಿಸಲಾಗುತ್ತದೆ. ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
- ಪ್ರಾದೇಶಿಕ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಗಳು: ಕಛೇರಿಯಲ್ಲಿ ಯಾವುದೇ ಅರ್ಜಿ ಅಥವಾ ಪತ್ರ ಬಂದಲ್ಲಿ ಸಂಬಂಧಿಸಿದ ವಿಷಯ ನಿರ್ವಾಹಕರು ಕಡತದಲ್ಲಿ ಮಂಡಿಸಿ ಅಧೀಕ್ಷಕರ ಮುಂದೆ ಪರಿಶೀಲನೆಗೆ ಮಂಡಿಸುತ್ತಾರೆ. ಅಧೀಕ್ಷಕರ ಷರಾ ಬರೆದ ನಂತರ ಸಂಬಂಧಿಸಿದ ಪ್ರಾದೇಶಿಕ / ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆದೇಶಕ್ಕೆ ಮಂಡಿಸಲಾಗುತ್ತದೆ. ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಮೇಲೆ ತಿಳಿಸಿದ ಕಾರ್ಯಗಳ ಜೊತೆಗೆ ಇಲಾಖೆಯಲ್ಲಿ ಕೆಲವು ನೀತಿ ನಿಯಮಗಳು ಕಾರ್ಯರೂಪದಲ್ಲಿರುತ್ತವೆ. ಅದರಂತೆ ಇಲಾಖೆಯಲ್ಲಿ ತೆರಿಗೆ ಪ್ರಾಧಿಕಾರ, ಚಾಲನಾ ಅನುಜ್ಞಾ ಪ್ರಾಧಿಕಾರ, ಚಾಲನಾ ತರಬೇತಿ ಶಾಲೆಗೆ ಪರವಾನಿಗೆ ನೀಡುವುದು. ಅಂತರ ರಾಷ್ಠ್ರೀಯ ಚಾಲನಾ ಪರವಾನಿಗೆ ನೀಡುವುದು ಮತ್ತು ಇತರೆ ದಾಖಲಾತಿಗಳು ಇರುತ್ತವೆ.
VII. ಸಾರ್ವಜನಿಕ
- ಸಾರಿಗೆ ಆಯುಕ್ತರು, ಅಪರ ಸಾರಿಗೆ ಆಯುಕ್ತರು, ಜಂಟಿ ಸಾರಿಗೆ ಆಯುಕ್ತರು, ಕೇಂದ್ರ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾವಳಿ, ಕರ್ನಾಟಕ ರಾಜ್ಯ ತೆರಿಗೆ ಕಾಯ್ದೆ ಮತ್ತು ನಿಯಮ, ಕರ್ನಾಟಕ ನಾಗರೀಕ ಸೇವಾ ಸಂಹಿತೆ, ಹಣಕಾಸು ಮತ್ತು ಖಜಾನೆ ನಿಯಮ, ಸರ್ಕಾರದಲ್ಲಿ ಜಾರಿಯಾಗುವ ಅಧಿಸೂಚನೆಗಳು ಮುಂತಾದವುಗಳ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
- ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕೆಳಗೆ ಕಾಣಿಸಿದ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
- ಕೇಂದ್ರ ಮೋಟಾರು ವಾಹನ ಕಾಯ್ದೆ-1988
- ಕೇಂದ್ರ ಮೋಟಾರು ವಾಹನಗಳ ನಿಯಮಾವಳಿ 1989
- ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989
- ಮೋಟಾರು ವಾಹನ ತೆರಿಗೆ ಕಾಯ್ದೆ 1957.
- ಮೋಟಾರು ವಾಹನ ತೆರಿಗೆ ನಿಯಮಾವಳಿ 1957.
- ಕಾಲಕಾಲಕ್ಕೆ ಇಲಾಖೆ ಮತ್ತು ಸರ್ಕಾರದಿಂದ ಜಾರಿಯಾಗುವ ಅಧಿಸೂಚನೆಗಳು ಮತ್ತು ಸುತ್ತೋಲೆಗಳು.