Menu

 
Back

ನಕಲಿ ಚಾಲನಾ ಅನುಜ್ಞಾ ಪತ್ರ ಪಡೆಯುವ ವಿಧಾನ

ಈ ಕೆಳಕಂಡ ಪ್ರಕರಣಗಳಲ್ಲಿ ನಕಲು ವಾಹನ ಚಾಲನಾ ಅನುಜ್ಞಾ ಪತ್ರವನ್ನು ಪಡೆಯಬಹುದು

  • ಕಳೆದು ಹೋದದಲ್ಲಿ
  • ಹಾಳಾದಲ್ಲಿ
  • ನಾಶವಾದಲ್ಲಿ
  • ಹರದು ಹೋದಲ್ಲಿ

1.ಅರ್ಜಿಯ ವಿಧಾನ

  • ಸಾರಿಗೆ ಕಛೇರಿಯ ಸಹಾಯ ಮೇಜಿನಲ್ಲಿ ಲಭ್ಯವಿದ್ದ ಅರ್ಜಿ ಪ್ರಮಾಣ ಪತ್ರ ಕೆ.ಎಂ. ವಿ-1 ಪಡೆದು ಭರ್ತಿಸಬೇಕು.
  • ವರದಿಯ ಸ್ವೀಕೃತಿ ಪತ್ರ ಲಗತ್ತಿಸಬೇಕು.
  • ದೃಡೀಕರಣದೊಂದಿಗೆ ಪ್ರಮಾಣ ಪತ್ರ (ಚಾಲನಾ ಅನುಜ್ಞಾ ಪತ್ರವನ್ನು ದುರುಪಯೋಗ ಪಡೆದಿರುವುದಿಲ್ಲ ಹಾಗೂ ನಂತರ ದೊರಕಿದರೆ ಅದನ್ನು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಛೇರಿಗೆ ಒಪ್ಪಿಸುತೆವೆಂದು ಘೋಷಿಸುವ ಮಾಹಿತಿ ಸೇರಿರಬೇಕು
  • ಹರಿದು ಹೋದ, ಅನುಜ್ಞಾ ಪತ್ರದ ಪ್ರಕರಣಗಳಲ್ಲಿ ಅರ್ಜಿಯೊಂದಿಗೆ ಆ ಅನುಜ್ಞಾ ಪತ್ರವನ್ನು ಲಗತ್ತಿಸಿ ಸಲ್ಲಿಸಬಹುದು.
  • ಹೊಂದಿರುವ ಅಂಚೆ ಚೀಟಿಯೊಂದಿಗೆ ಸ್ಪೀಡ್ ಪೋಸ್ಟ್ ಲಕೋಟೆ; ಲಕೋಟೆಯೊಂದಿಗೆ ಚಾಲನಾ ಪತ್ರವನ್ನು “ಸಕಾಲ” ಸೇವೆಯಡಿ

2.ಶುಲ್ಕ (ಸಂಬಂಧಿಸಿದ ಪ್ರಾ.ಸಾ.ಅ ಕಛೇರಿಯ ನಗದು  ಕೌಂಟರ್ ಗಳಲ್ಲಿ)

  • ಅನುಜ್ಞಾ ಪತ್ರ ಶುಲ್ಕ ರೂ.15/-
  • ಕಾರ್ಡ್ ಶುಲ್ಕ ರೂ.200/-

3.ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು

ನಿರೂಪಿಸಿರುವ ದಾಖಲೆಗಳನ್ನು ಲಗತ್ತಿಸಿ ಶುಲ್ಕ ಪಾವತಿಯೊಂದಿಗೆ ಸರಿಯಾಗಿ ಭರ್ತಿಸಿರುವ ಅರ್ಜಿಯನ್ನು ಪ್ರಥಮವಾಗಿ ಅನುಜ್ಞಾ ಪತ್ರ ನೀಡಿರುವ ಪ್ರಾದೇಶಿಕ ಸಾರಿಗೆ ಕಛೇರಿಗೆ ಸಲ್ಲಿಸತಕ್ಕದ್ದು.  ನಕಲಿ ಚಾಲನಾ ಅನುಜ್ಞಾ ಪತ್ರವನ್ನು “ಸಕಾಲ” ಸೇವೆಯಡಿ ಪ್ರಕಾರ 30 ದಿನಗಳೊಳಗಾಗಿ ರವಾನಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ. / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.

© Content Owned & Site maintained by Transport Department, Karnataka State Government.
Visitors Count :: 3634353 | Site Last updated on :: 25-05-2018