- ಕಲಿಕಾ ಅನುಜ್ಞಾ ಪತ್ರ ಪಡೆದು 30 ದಿನಗಳು ಪೂರ್ಣಗೊಂಡ ನಂತರ ಖಾಯಂ ವಾಹನಾ ಚಾಲನಾ ಅನುಜ್ಞಾ ಪತ್ರ ಪಡೆಯಲು ಇಚ್ಚಿಸುವ ಅಭ್ಯರ್ಥಿಯು ಚಾಲನಾ ಕೌಶಲ್ಯ ಪರೀಕ್ಷೆಗೆ ಹಾಜರಾಗಬಹುದು.
- ಸಾರಿಗೆ ವಾಹನಗಳಿಗೆ ಖಾಯಂ ವಾಹನ ಚಾಲನಾ ಅನುಜ್ಞಾ ಪತ್ರ ಪಡೆಯಲು ಇಚ್ಚಿಸುವ ಅಭ್ಯರ್ಥಿಯು ಅಧಿಕೃತ ಮೋಟಾರ್ ವಾಹನ ಚಾಲನಾ ತರಬೇತಿ ಶಾಲೆಯ ಮೂಲಕ ಪ್ರಶಿಕ್ಷಣವನ್ನು ಪಡೆದು ಪ್ರಮಾಣ ಪತ್ರ ದೊoದಿಗೆ ಚಾಲನಾ ಕೌಶಲ್ಯ ಪರೀಕ್ಷೆಗೆ ಹಾಜರಾಗಬಹುದು.
- ಸಾರಿಗೆ ವಾಹನದ ವರ್ಗಕ್ಕೆ ಲೈಸೆನ್ಸ ಪಡೆಯಲು ಇಚ್ಚಿಸುವ ಅರ್ಜಿದಾರರು ಕನಿಷ್ಠ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. (CMV Rule 8).
1.ಚಾಲನಾ ಅನುಜ್ಞಾ ಪತ್ರ ಪಡೆಯುವ ವಿಧಾನ ಕೆಳಕಂಡಂತೆ ಇವೆ
ಅರ್ಜಿಗಳು
- ಹೊಸದಾಗಿ ಚಾಲನಾ ಅನುಜ್ಞಾ ಪತ್ರಕ್ಕೆ ಅರ್ಜಿ ಸಲ್ಲಿಸುವವರು ನಿಗದಿತ ನಮೂನೆ -4 (CMVR) ರಲ್ಲಿ ಅರ್ಜಿ ಸಲ್ಲಿಸಬೇಕು. ಇದನ್ನು ಆನ್ ಲೈನ್ ನಲ್ಲಿ ವೆಬ್ ಸೈಟ್ http://www.transport.karnataka.gov.in ಮೂಲಕ ಸಲ್ಲಿಸುವುದು.
- ಇತ್ತೀಚಿನ 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು ಅಡಕಗೊಳಿಸತಕ್ಕದ್ದು.
- ಸಿಂಧುತ್ವವುಳ್ಳ ಕಲಿಕಾ ಅನುಜ್ಞಾನ ಪತ್ರದ ಮೂಲ ಪ್ರತಿ ಅಡಕಗೊಳಿಸತಕ್ಕದ್ದು.
ಶುಲ್ಕ
ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ನಗದು ಕೌಂಟರ್ ನಲ್ಲಿ
- ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
- ಪ್ರತಿ ವರ್ಗದ ವಾಹನದ ಪರೀಕ್ಷಾ ಶುಲ್ಕ ರೂ.50/-
ಅವಶ್ಯಕ ದಾಖಲಾತಿಗಳು
- ಸಿಂಧುತ್ವವುಳ್ಳ ಕಲಿಕಾ ಅನುಜ್ಞಾನ ಪತ್ರ
- ಅಭ್ಯರ್ಥಿಯು ಯಾವ ವರ್ಗದ ವಾಹನಕ್ಕಾಗಿ ಕೌಶಲ್ಯ ಪರೀಕ್ಷೆಗಾಗಿ ಹಾಜರಾಗಲು ಇಚ್ಚಿಸುತ್ತಾರೆ. ಆ ವರ್ಗದ ವಾಹನಕ್ಕೆ ಸಂಬಂಧಿಸಿದ ಸಿಂಧುತ್ವವುಳ್ಳ ದಾಖಲೆಗಳಾದ ನೋಂದಣಿ ಪ್ರಮಾಣ ಪತ್ರ ವಿಮಾ ಪ್ರಮಾಣ ಪತ್ರ, ತೆರಿಗೆ ಚೀಟಿ ಮತ್ತು ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹಾಜರುಪಡಿಸತಕ್ದದ್ದು. ಸಾರಿಗೆ ವಾಹನಗಳ ಪ್ರಕರಣದಲ್ಲಿ ಮೇಲಿನ ದಾಖಲೆಗಳೊಂದಿಗೆ ಅರ್ಹತಾ ಪ್ರಮಾಣ ಪತ್ರ ಸಹ ಸಲ್ಲಿಸತ್ಕದ್ದು.
- ಸಾರಿಗೆ ವಾಹನಗಳ ಪ್ರಕರಣದಲ್ಲಿ ಅಧಿಕೃತ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಯಿಂದ ಪಡೆದಿರುವ ಪ್ರಪತ್ರ ಸಂಖ್ಯೆ. ಸಿ.ಎಂ.ವಿ-5 ಲಗತ್ತಿಸತಕ್ಕದ್ದು.
- ಸಿದ್ಧಪಡಿಸಿರುವ ಖಾಯಂ ವಾಹನ್ ಚಾಲನಾ ಅನುಜ್ಞಾನ ಪತ್ರ ಉತ್ತೀರ್ಣರಾದ ದಿನಾಂಕದಿಂದ ಸಕಾಲ ಸೇವೆಯ ಅಡಿಯಲ್ಲಿ 30 ದಿನಗಳೊಳಗಾಗಿ ರವಾನಿಸಲಾಗುತ್ತದೆ. ಅದಕ್ಕೆ ಸಂಬಂದಿಸಿದಂತೆ ಸ್ವಯಂ ವಿಳಾಸ ಬರೆದಿರುವ ಹಾಗೂ ಸೂಕ್ತ ಪೋಸ್ಟಲ್ ಸ್ಟ್ಯಾಂಪ್ ವುಳ್ಳ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸುವುದು ಅವಶ್ಯಕವಾಗಿರುತ್ತದೆ.
2.ಅರ್ಜಿಯನ್ನು ಸಲ್ಲಿಸುವ ವಿಧಾನ: -
ಚಾಲನಾ ಅನುಜ್ಞಾ ಪತ್ರದ ಪ್ರಾಧಿಕಾರದ ಸಮಕ್ಷಮ ಅರ್ಜಿದಾರರು ಖುದ್ದಾಗಿ ಹಾಜರಾಗಬೇಕು.
3.ಚಾಲನಾ ಕೌಶಲ್ಯ ಪರೀಕ್ಷೆ
- ಮೋಟಾರು ವಾಹನ ನಿಯಮಾವಳಿ 1989ರ ನಿಯಮ-15ರಲ್ಲಿ ನಿರೂಪಿಸಿರುವಂತೆ ಮೋಟಾರು ವಾಹನ ನಿರೀಕ್ಷಕರು ಚಾಲನಾ ಕೌಶಲ್ಯ ಪರೀಕ್ಷೆಗೆ ಅಭ್ಯರ್ಥಿಗಳನ್ನು ಒಳಪಡಿಸುತ್ತಾರೆ. (ಹೆಚ್ಚಿನ ಮಾಹಿತಿಗಾಗಿ http://morth.nic.in ಕ್ಕೆ ಸಂಪರ್ಕಿಸಬಹುದು) ಅಭ್ಯರ್ಥಿಯ ವಾಹನ ಚಾಲನಾ ಕೌಶಲ್ಯದಿಂದ ತೃಪ್ತಿ ಹೊಂದಿದ ಪಕ್ಷದಲ್ಲಿ ಸಂಬಂಧಪಟ್ಟ ಅನುಜ್ಞಾಪತ್ರ ಪ್ರಾಧಿಕಾರ ಸಕ್ಷಮ ಅಭ್ಯರ್ಥಿಗೆ ಅನುಜ್ಞಾ ಪತ್ರವನ್ನು ನೀಡಲು ಆದೇಶವನ್ನು ಹೊರಡಿಸುತ್ತಾರೆ.
- ಚಾಲನಾ ಕೌಶಲ್ಯ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಹಾಗೂ ಸ್ಮಾರ್ಟ್ ಕಾರ್ಡ್ ಗಾಗಿ ಶುಲ್ಕವನ್ನು ಪಾವತಿಸುವ ಅಭ್ಯರ್ಥಿಗಳು ಬಯೋಮೆಟ್ರಿಕ್ ವಿಧಾನದಲ್ಲಿ ಬಾವಚಿತ್ರ ಹಾಗೂ ಮಾದರಿ ಸಹಿಯನ್ನು ಅಳವಡಿಸುವ ತಂತ್ರಜ್ಞಾನ ವಿಭಾಗಕ್ಕೆ ಖುದ್ದಾಗಿ ಹಾಜರಾಗಬೇಕು.
4.ವಾಹನ ಚಾಲನಾ ಕೌಶಲ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಚಾಲನ ಅನುಜ್ಞಾ ಪತ್ರವನ್ನು ಎಲ್ಲಿ ಪಡೆಯಬೇಕು.
“ಸಕಾಲ” (KGSC Act-2011) ರ ಪ್ರಕಾರ ಚಾಲನಾ ಅನುಜ್ಞಾ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ರವಾನಿಸಲಾಗುವುದು.
5.ವಾಹನ ಚಾಲನಾ ಕೌಶಲ್ಯ ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಅಭ್ಯರ್ಥಿಗಳ ವಿಷಯದಲ್ಲಿ:
- ಪರೀಕ್ಷೆಯಲ್ಲಿ ಅನುತ್ತೀರ್ಣವಾಗುವ ಅಭ್ಯರ್ಥಿಗಳು ಹಾಜರುಪಡಿಸಿರುವ ತಮ್ಮ ಅರ್ಜಿ ಹಾಗೂ ದಾಖಲೆಗಳು ಹಿಂಪಡೆದು, ಅನುತ್ತೀರ್ಣವಾಗಿರುವ ದಿನಾಂಕದಿಂದ 7 ದಿನಗಳ ನಂತರ ಪುನರ್ ಪರೀಕ್ಷೆಗಾಗಿ ರೂ.50/- ಪಾವತಿಸಿ ಪುನ: ಹಾಜರಾಗಬಹುದು.
- 3 ಬಾರಿಯು ಹಾಜರಾಗಿ ಅನುತ್ತೀರ್ಣರಾದ ಅಭ್ಯರ್ಥಿಗಲು ಕೊನೆಯ ಅನುತ್ತೀರ್ಣವಾದ ದಿನಾಂಕದಿಂದ 60 ದಿನಗಳ ಕಾಲಾವಧಿಯವರೆಗೆ ಪುನರ್ ಪರೀಕ್ಷೆಗೆ ಹಾಜರಾಗಲು ಅರ್ಹರಿರುವುದಿಲ್ಲ.
6.ಚಾಲನಾ ಅನುಜ್ಞಾ ಪತ್ರದ ಸಿಂಧುತ್ವ
- ವಾಹನ ಅನುಜ್ಞಾ ಪತ್ರ ಭಾರತ ದೇಶ್ಯಾದ್ಯಂತ ಸಿಂಧುತ್ವ ಹೊಂದಿರುತ್ತದೆ.
- ಸಾರಿಗೇತರ ವಾಹನಗಳಾದ ಮೋಟಾರು ಸೈಕಲ್, ಕಾರು, ಜೀಪ್, ಟ್ರಾಕ್ಟರ್ ಇತ್ಯಾದಿ ನೀಡಲ್ಪಟ್ಟಿರುವ ವಾಹನ ಚಾಲನಾ ಅನುಜ್ಞಾ ಪತ್ರ ಪ್ರಥಮವಾಗಿ 20 ವರ್ಷ ಅವಧಿಗೆ ಅಥವಾ ವಯಸ್ಸಿನ 50 ವರ್ಷದವರಿಗೆ ನೀಡಲಾಗುತ್ತದೆ (ಯಾವುದು ಮೊದಲು).
- ವಾಹನಗಳಿಗೆ ನೀಡಲ್ಪಟ್ಟಿರುವ ಅನುಜ್ಞಾ ಪತ್ರ 3 ವರ್ಷದವರೆಗೆ ಸಿಂಧುತ್ವವನ್ನು ಹೊಂದಿರುತ್ತದೆ. ಹಾಗೂ ನಂತರದ 3 ವರ್ಷ ಅವಧಿಗೆ ನವೀಕರಣ ಪಡೆಯಬಹುದು;
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ. / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.