Sunday, August 25, 2019,

Menu

 
Back

ಅಂತರಾಷ್ಟ್ರೀಯ ಚಾಲನಾ ಪರವಾನಿಗೆ ಪಡೆಯುವ ವಿಧಾನ

ನಮೂನೆ-ಎ - ಸಿ.ಎಂ.ವಿ.ಆರ್.  ಅರ್ಜಿಯನ್ನು ಕಛೇರಿಯಲ್ಲಿ ಅಥವಾ ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. http://transport.karnataka.gov.in/

ಐ.ಡಿ.ಪಿ. ಶುಲ್ಕ ರೂ. 500/- (ಕಛೇರಿಯ ನಗದು ಕೌಂಟರ್ ನಲ್ಲಿ ಪಾವತಿಸಬೇಕು)

ಸಲ್ಲಿಸಬೇಕಾದ ದಾಖಲೆಗಳು

  • ಚಾಲನ ಅನುಜ್ಞಾ ಪತ್ರ
  • ಪಾಸ್ ಪೊರ್ಟ್
  • ವಿಮಾನ ಪ್ರಯಾಣದ ಟಿಕೇಟ್  

ಎಲ್ಲಾ ದಾಖಲೆಗಳು ದೃಡೀಕೃತವಾಗಿರಬೇಕು.

  • ನಮೂನೆ-1 3ರಲ್ಲಿ ಸರ್ಕಾರಿ ವೈದ್ಯರಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ
  • 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು.
  • ಕಛೇರಿಗೆ ಖುದ್ದಾಗಿ ಹಾಜರಾಗಿ ಸಹಿ ಮಾಡಬೇಕು.
  • ಭಾರತೀಯ ಪ್ರಜೆಯಾಗಿರಬೇಕು
  • ಚಾಲನಾ ಅನುಜ್ಞಾನ ಪತ್ರ ಪಡೆದು 3 ತಿಂಗಳ ಒಳಗೆ ಆಗಿದ್ದಲ್ಲಿ ಅರ್ಜಿದಾರನು ಮರು ಪರೀಕ್ಷೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು.
  • ಚಾಲನಾ ಅನುಜ್ಞಾನ ಪತ್ರ ಹೊಂದಿರುವ ವ್ಯಾಪ್ತಿ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಅಂತರ ರಾಷ್ಟ್ರೀಯ ಚಾಲನಾ ಅನುಜ್ಞಾ ಪತ್ರದ ಅವಧಿ ಮತ್ತು ವಿತರಣೆ

ಅಂತರ ರಾಷ್ಟ್ರೀಯ ಚಾಲನಾ ಅನುಜ್ಞಾ ಪತ್ರವನ್ನು ಒಂದು ವರ್ಷದ ಅವಧಿಗೆ ನೀಡಲಾಗುವುದು ಮತ್ತು ಸಕಾಲದಡಿ 7 ದಿನಗಳೊಳಗೆ ವಿತರಿಸಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ / ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

© Content Owned & Site maintained by Transport Department, Karnataka State Government.
Visitors Count :: 5886525 | Site Last updated on :: 23-08-2019