Tuesday, October 17, 2017,

Menu

 
Back

ಕಲಿಕಾ ಚಾಲನಾ ಅನುಜ್ಞಾ ಪತ್ರ ಪಡೆಯುವ ವಿಧಾನ

ಮುಖ್ಯ ಸೂಚನೆ: ಅ) ನೂತನ ಕಲಿಕಾ ಚಾಲನಾ ಅನುಜ್ಞಾ ಪತ್ರ / ಚಾಲನಾ ಅನುಜ್ಞಾ ಪತ್ರ ಕ್ಕಾಗಿ ಆನ್ ಲೈನ್ ಅರ್ಜಿಗಳನ್ನು ಬೆಂಗಳೂರಿನ ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ (ನೆಲಮಂಗಲ ಕಛೇರಿಯನ್ನು ಹೊರೆತುಪಡಿಸಿ) ಸಾರಥಿ-4 ಮೂಲಕವೇ ಸ್ವೀಕರಿಸಲಾಗುವುದು.

ಆ) ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಅ.ಕ ಬೆಂಗಳೂರು, (ಕೇಂದ್ರ) ಕೆಎ-01 ರಲ್ಲಿ ದಿ: 06/12/2016 ರಿಂದ ಕಲಿಕಾ ಚಾಲನಾ ಅನುಜ್ಞಾಪತ್ರ / ಚಾಲನಾ ಅನುಜ್ಞಾ ಪತ್ರ ಸಾರಥಿ-3ಯ ಮೂಲಕ ಪಡೆಯುವುದನ್ನು ನಿಲ್ಲಿಸಿ ಹೊಸ ವ್ಯವಸ್ಥೆಯಾದ ಸಾರಥಿ-4 ಆನ್ಲೈನ್ ಸೇವೆಗಳ ಮೂಲಕವೇ ಕಲಿಕಾ ಚಾಲನಾ ಅನುಜ್ಞಾಪತ್ರ / ಚಾಲನಾ ಅನುಜ್ಞಾ ಪತ್ರ ಗಳ ಸೇವೆಗಳಿಗೆ  ಅರ್ಜಿ ಸ್ವೀಕರಿಸಲಾಗುತ್ತದೆ.

ಇ) ಈ ಕೆಳಕಂಡ 6 ಕಛೇರಿಗಳಲ್ಲಿ ದಿನಾಂಕ 22-9-2017ರಿಂದ ಕಲಿಕಾ ಚಾಲನಾ ಅನುಜ್ಞಾಪತ್ರ / ಚಾಲನಾ ಅನುಜ್ಞಾ ಪತ್ರಗಳ ಸೇವೆಗಳಿಗೆ ಅರ್ಜಿಗಳನ್ನು ಸಾರಥಿ-3ಯ ಮೂಲಕ ಪಡೆಯುವುದನ್ನು ನಿಲ್ಲಿಸಿ ಹೊಸ ವ್ಯವಸ್ಥೆಯಾದ ಸಾರಥಿ-4 ಆನ್ಲೈನ್ ಸೇವೆಗಳ ಮೂಲಕವೇ ಕಲಿಕಾ ಚಾಲನಾ ಅನುಜ್ಞಾಪತ್ರ / ಚಾಲನಾ ಅನುಜ್ಞಾ ಪತ್ರ ಗಳ ಸೇವೆಗಳಿಗೆ  ಅರ್ಜಿ ಸ್ವೀಕರಿಸಲಾಗುತ್ತದೆ.
 
1.ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಕ. ಬೆಂಗಳೂರು (ಪಶ್ಚಿಮ) - ಕೆಎ02, ರಾಜಾಜಿನಗರ, 
2.ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಕ. ಬೆಂಗಳೂರು (ಉತ್ತರ) - ಕೆಎ04, ಯಶವಂತಪುರ 
3. ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಕ. ಬೆಂಗಳೂರು (ದಕ್ಷಿಣ) - ಕೆಎ05 ಜಯನಗರ,
4.ಉ.ಸಾ.ಆ ಮತ್ತು  ಹಿ.ಪ್ರಾ.ಸಾ.ಕ. ಎಲೆಕ್ಟ್ರಾನಿಕ್ ಸಿಟಿ - ಕೆಎ51, 
5. ಪ್ರಾ.ಸಾ.ಕ. ಯಲಹಂಕ, ಬೆಂಗಳೂರು- ಕೆಎ.50 ಮತ್ತು
6.ಸ.ಪ್ರಾ.ಸಾ.ಕ. ದೇವನಹಳ್ಳಿ- ಕೆಎ.43.

ಕಲಿಕಾ ಚಾಲನಾ ಅನುಜ್ಞಾನಪತ್ರವನ್ನು ಎರಡು ರೀತಿಯಲ್ಲಿ ಆನ್ ಲೈನ್ ಮೂಲಕ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

1. ಸಾರಥಿ - 3 - (ಚಾಲ್ತಿಯಲ್ಲಿರುವ ಇರುವ ವ್ಯವಸ್ಥೆ)

2. ಸಾರಥಿ - 4 - (ಪರೀಕ್ಷಾ ಹಂತದಲ್ಲಿದೆ)

ಸಾರಥಿ - 3 ರ ಮೂಲಕ ಕಲಿಕಾ ಚಾಲನಾ ಅನುಜ್ಞಾಪತ್ರ ಪಡೆಯಲು ಈಗ ಮಾಡಿರುವ ವ್ಯವಸ್ಥೆಯ ಜೊತೆಗೆ ಸಾರಥಿ-4 (centeralised web based application) ಮೂಲಕವು ಸಹ ಪಡೆಯಲು ಬೆಂಗಳೂರಿನ ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ಪರೀಕ್ಷಾ ಹಂತದಲ್ಲಿ ವ್ಯವಸ್ಥೆ ಮಾಡಲಾಗಿದೆ.  

ಸಾರಥಿ - 4 ಪ್ರಕಾರ ಕಲಿಕಾ ಚಾಲನಾ ಅನುಜ್ಞಾಪತ್ರಕ್ಕೆ ಅರ್ಜಿ ಸಲ್ಲಿಸುವವರು ಸಾರಥಿ - 4 ಕ್ಲಿಕ್ ಮಾಡಲು ಸೂಚಿಸಿದೆ.

ಸಾರಥಿ - 3 (ಚಾಲ್ತಿಯಲ್ಲಿರುವ ವ್ಯವಸ್ಥೆ) ಪ್ರಕಾರ ಕಲಿಕಾ ಚಾಲನಾ ಅನುಜ್ಞಾಪತ್ರವನ್ನು ಪಡೆಯಲು ಕೆಳಕಂಡ ವಿಧಾನವನ್ನು ಪಾಲಿಸಬೇಕು.

1.ಸಲ್ಲಿಸಬೇಕಾಗಿರುವ ಅರ್ಜಿ ಮತ್ತು ದಾಖಲೆಗಳು

  1. ವಯಸ್ಸಿನ ಪ್ರಮಾಣ ಪತ್ರ
  2. ವಿಳಾಸ ಪುರಾವೆ
  3. ಪಾಸ್ ಪೋರ್ಟ್ ಅಳತೆಯ 3 ಭಾವಚಿತ್ರಗಳು
  4. ನಿಗದಿತ ಶುಲ್ಕ ರೂ.30/- (Rule 32 of CMV Rules 1989).  ಈ ಶುಲ್ಕವನ್ನು ಸಂಬಂಧಿಸಿದ ಆರ್.ಟಿ.ಒ. ಕಛೇರಿಯ ನಗದು ಕೌಂಟರ್ನಲ್ಲಿ ಪಾವತಿ ಮಾಡಬೇಕು.
  5. ನಮೂನೆ -2 (CMVR-2):   ಆನ್ ಲೈನ್ ಅರ್ಜಿ ತುಂಬಿದ ನಂತರ ಮುದ್ರಿತ ಪ್ರತಿಯನ್ನು (Print out) ತೆಗೆದುಕೊಳ್ಳಬೇಕು. 
  6. ನಮೂನೆ – 1 (CMVR-1) : ಅರ್ಜಿ ಹಾಗೂ ದೇಹದಾಡ್ಯತೆ ಪ್ರಮಾಣ ಪತ್ರ
  7. ನಮೂನೆ -1ಎ (CMVR-1A) : ನೊಂದಾಯಿತ ವೈದ್ಯಾಧಿಕಾರಿ ಇವರು ನೀಡಿರುವ ಪ್ರಮಾಣ ಪತ್ರ.
  • 40 ವರ್ಷ ವಯಸ್ಸು ಪೂರ್ಣಗೊಂಡಿರುವ ಅಭ್ಯರ್ಥಿಗಳು ನೊಂದಾಯಿತ ವೈದ್ಯಾಧಿಕಾರಿರವರು ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ ಅರ್ಜಿಯೊಂದಿಗೆ ಲಗತ್ತಿಸಬೇಕು.  (ಇದು ಸಾರಿಗೇತರ ವಾಹನಗಳಿಗೆ ಸಂಬಂಧಿಸಿರುತ್ತದೆ).
  • ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾನಪತ್ರ ಸಲ್ಲಿಸುವವರು ವಯಸ್ಸಿನ ಲೆಕ್ಕ ಮಿತಿಯಿಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.

2.ವಯೋ ಮಿತಿ:

ಸಾರಿಗೇತರ ವಾಹನಗಳು (ಗೇರ್ ಮತ್ತು ಗೇರ್ ಇಲ್ಲದೆ ಇರುವ ವಾಹನಗಳು, ಲಘು ಮೋಟಾರು ವಾಹನಗಳು ಮತ್ತು ಇತರ ನಿರ್ದಿಷ್ಟ ವಾಹನಗಳು.

  • 18 ವರ್ಷ ತುಂಬಿದ ಮತ್ತು ಮೇಲ್ಪಟ್ಟ ಅರ್ಜಿದಾರರು ಅರ್ಹರಾಗಿರುತ್ತಾರೆ.

ಸಾರಿಗೆ ವಾಹನಗಳು (ಮೋಟಾರ್ ಕ್ಯಾಬ್, ಆಟೋ ರಿಕ್ಷಾ ಕ್ಯಾಬ್ ಸಾರ್ವಜಿನಿಕ ಸೇವಾ ವಾಹನಗಳು (ಪಿ. ಎಸ್. ವಿ), ಭಾರಿ ಸಾರಿಗೆ ವಾಹನಗಳು (ಹೆಚ್.ಟಿ. ವಿ) ಮತ್ತು ಇತರ ನಿರ್ದಿಷ್ಟ ವಾಹನಗಳು.

  •  20 ವರ್ಷ ತುಂಬಿದ ಮತ್ತು ಮೇಲ್ಪಟ್ಟ ಅರ್ಜಿದಾರರು ಅರ್ಹರಾಗಿರುತ್ತಾರೆ.

4.ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ ಇತರ ಅವಶ್ಯಕ ಮಾಹಿತಿ.

  • ಸಾರಿಗೆ ವಾಹನಗಳಿಗೆ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಪಡೆಯಲು ಕನಿಷ್ಠ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು. (CMVR -8).

5.ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು

ಬೆಂಗಳೂರಿನ ಅರ್ಜಿದಾರರು ಅವರ ವಿಳಾಸ / ವ್ಯವಹಾರಗಳನ್ನು ಅವರ ವಿಳಾಸವನ್ನು ಲೆಕ್ಕಿಸದ ಬೆಂಗಳೂರಿನ ಯಾವುದಾದರು ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದು;

ಬೆಂಗಳೂರು ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಅರ್ಜಿದಾರರು ಆಯಾ ಜಿಲ್ಲೆಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು / ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಪರಿಶೀಲನೆಗಾಗಿ ಅರ್ಜಿ ಮತ್ತು ಮೂಲ ದಾಖಲೆಗಳೊಂದಿಗೆ ಅರ್ಜಿದಾರರು ಚಾಲನಾ ಅನುಜ್ಞಾ ಪ್ರಾಧಿಕಾರದ ಮುಂದೆ ಖುದ್ದಾಗಿ ಹಾಜರಾಗಬೇಕು.

ಪ್ರಾಥಮಿಕ ಪರೀಕ್ಷೆ

ಈಗಾಗಲೇ ಕಲಿಕಾ ಚಾಲನಾ ಅನುಜ್ಞಾ ಪತ್ರ / ಚಾಲನಾ ಅನುಜ್ಞಾ ಪತ್ರ ಹೊಂದಿರುವವರಿಗೆ ಪ್ರಾಥಮಿಕ ಪರೀಕ್ಷೆಯಿಂದ(ಲಿಖಿತ / ಮೌಖಿಕ) ವಿನಾಯಿತಿ ನೀಡಲಾಗಿದೆ. ಇದು ಇತರ ಹೊಸ ವರ್ಗ ವಾಹನಗಳಿಗೆ ಅರ್ಜಿ ಸಲ್ಲಿಸುವವರಿಗೆ ಅನ್ವಯಿಸುತ್ತದೆ.

ಪ್ರಾಧಮಿಕ ಪರೀಕ್ಷೆಯ ವಿಷಯಗಳು:

  • ಸಂಚಾರಿ ಚಿನ್ನೆಗಳು ಮತ್ತು ಸಿಗ್ನಲ್ ಗಳು, ಮೋಟಾರು ವಾಹನ ಕಾಯ್ದೆ 1989ರ ಅಧಿನಿಯಮ 118ರಲ್ಲಿ ನಮೂದಿಸಿರುವ ಸಂಚಾರಿ ನಿಯಂತ್ರಣ ನಿಯಮಗಳೂ
  • ವಾಹನವನ್ನು ಅಪಘಾತಕ್ಕೆ ಈಡಾಗಿದಾಗ ಅದರಿಂದ ಸಂಭವಿಸುವ ಪ್ರಾಣಾಪಾಯ ಹಾಗೂ ಗಾಯಗೊಳ್ಳುವಿಕೆ ಅಥವಾ ರಸ್ತೆಅಪಘಾತದ ಸಮಯದಲ್ಲಿ ವಾಹನ ಚಾಲಕ ನಿರ್ವಹಿಸಬೇಕಾದ ಕರ್ತವ್ಯಗಳು.
  • ಮಾನವ ರಹಿತ ರೈಲ್ವೇ ಕ್ರಾಸಿಂಗ್ ಗಳಲ್ಲಿ ವಾಹನ ಚಲಿಸುವಾಗ ಚಾಲಕರು ಕೈಗೊಳ್ಳಬೇಕಾದ ಪೂರ್ವ ಜಾಗರುಕತೆ ಬಗ್ಗೆ.
  • ವಾಹನ ಚಾಲನೆ ಸಮಯದಲ್ಲಿ ವಾಹನದಲ್ಲಿ ಕಡ್ಡಾಯವಾಗಿ ಇಡಬೇಕಾಗಿರುವ ದಾಖಲೆಗಳ ಬಗ್ಗೆ.

ಮಾದರಿ ಪ್ರಶ್ನೆಗಳು ಹಾಗೂ ಉತ್ತರಕ್ಕಾಗಿ ಇಲ್ಲಿ ಕ್ಲಿಕಿಸಿ. 

ತೇರ್ಗಡೆಯಾದ ನಂತರ ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು ಎಲ್ಲಿ ಪಡೆಯಬೇಕು?

  ತೇರ್ಗಡೆಯಾದ ಅರ್ಜಿದಾರರು ಕಲಿಕಾ ಚಾಲನಾ ಅನುಜ್ಞಾ ಪತ್ರವನ್ನು 7 ದಿನಗಳೊಳಗಾಗಿ ಕಛೇರಿಯಲ್ಲಿ ಪಡೆಯಬಹುದು. ವಿತರಣೆ ವೇಳೆ ಸಂಜೆ 4.30 ರಿಂದ 5.30ರ ಒಳಗೆ. 

ಪರೀಕ್ಷೆಯಲ್ಲಿ ಅನುರ್ತ್ತೀಣರಾದರೆ ಏನು ಮಾಡಬೇಕು?

  • ಪರೀಕ್ಷೆಯಲ್ಲಿ ಅನುರ್ತ್ತೀಣರಾದ ಅಭ್ಯರ್ಥಿಗಳಿಗೆ ಅರ್ಜಿಯನ್ನು ಹಿಂದಿರುಗಿಸಲಾಗುವುದು.
  • ನಂತರ ಅರ್ಜಿದಾರರು ಕಛೇರಿ ಕೆಲಸ ವೇಳೆಯಲ್ಲಿ ಪರೀಕ್ಷೆಗೆ ಮರುದಿನ ಹಾಜರಾಗಬಹುದು.

ಕಲಿಕಾ ಚಾಲನಾ ಪತ್ರದ ಅವಧಿ

ಕಲಿಕಾ ಚಾಲನಾ ಪತ್ರದ ಅವಧಿ 6 ತಿಂಗಳು ಮಾತ್ರ ಇರುತ್ತದೆ ಮತ್ತು ಇದನ್ನು ಮುಂದಿನ ಅವಧಿಗೆ ನವೀಕರಲು ಆಗುವುದಿಲ್ಲ ಹಾಗೂ ಹೊಸದಾಗಿ ಪಡೆಯಬೇಕು.  ಇದು ಭಾರತದ್ಯಾದಂತ ಸಿಂಧುತ್ವವನ್ನು ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ. / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.

© Content Owned & Site maintained by Transport Department, Karnataka State Government.
Visitors Count :: 2335246 | Site Last updated on :: 11-10-2017