Saturday, October 19, 2019,

Menu

 
Back

ಪರಿಚಯ

      ಸಾರಿಗೆ ಇಲಾಖೆಯನ್ನು ಸರ್ಕಾರದ ಆದೇಶ ಸಂಖ್ಯೆ: ಟಿ6811-6865:ಆರ್‍ಟಿ:53:54:10, ದಿನಾಂಕ:3-3-1955 ರಲ್ಲಿ ರಚಿಸಲಾಗಿದೆ ಮತ್ತು ಸರ್ಕಾರದ ಅಧಿಸೂಚನೆ ಸಂ:4285:98:ಎಂವಿ: 23:56:57, ದಿನಾಂಕ:27-8-1956 ರಂದು ಮೋಟಾರು ವಾಹನಗಳ ಇಲಾಖೆ ಎಂದು ನಾಮಾಂಕಿತ ಗೊಳಿಸಲಾಯಿತು. ತದನಂತರ ಸಾರಿಗೆ ಇಲಾಖೆಯೆಂದು ಪುನರ್-ನಾಮಾಂಕಿತ ಗೊಳಿಸಲಾಯಿತು. ಇಲಾಖೆಯು ಉಗಮ ವಾದಾಗಿನಿಂದ ಇಲಾಖೆಯ ಪ್ರಾಥಮಿಕ ಒತ್ತು ನೀಡತಕ್ಕ ಕ್ಷೇತ್ರವೆಂದರೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಜಾರಿಗೊಳಿಸುವುದು ಹಾಗೂ ರಾಜಸ್ವ ಸಂಗ್ರಹಣೆ. ಯಾವುದೇ ರಾಷ್ಡ್ರವು ಆರ್ಥಿಕವಾಗಿ ಅಭಿವೃದ್ಧಿಹೊಂದ ಬೇಕಾದಲ್ಲಿ ಸಾರಿಗೆ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ರಸ್ತೆ ಸಾರಿಗೆಯು ಕೇವಲ ಸಾರ್ವಜನಿಕ ವಲಯದ ಮುಷ್ಟಿಯಲ್ಲಿರುವುದಿಲ್ಲ. ಖಾಸಗಿ ವಲಯವೂ ಸಹ ದೇಶದಾದ್ಯಂತ ಸಮರ್ಪಕ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿ ಹೊರ ಹೊಮ್ಮಿದೆ.

     ರಸ್ತೆ ಸುರಕ್ಷತೆ, ಸಂಚಾರ ನಿಯಂತ್ರಣ, ವಾಯುಮಾಲಿನ್ಯ, ಶಬ್ದಮಾಲಿನ್ಯ ನಿಯಂತ್ರಣ ಮತ್ತು ಮೋಟಾರು ವಾಹನಗಳಿಂದ ತೆರಿಗೆ ಸಂಗ್ರಹಣಾ ಕಾರ್ಯವನ್ನು ಕೆಳಕಂಡ ಕಾಯಿದೆ ಹಾಗೂ ನಿಯಮಗಳನ್ನು ಜಾರಿ ಮಾಡುವ ಮೂಲಕ ಕ್ರಮಬದ್ಧವಾಗಿ ನಿಯಂತ್ರಿಸುವ ಅಧಿಕಾರ ಹೊಂದಿರುತ್ತದೆ.

  1. ಮೋಟಾರು ವಾಹನಗಳ ಕಾಯ್ದೆ, 1988 (1988ನೇ ಕೇಂದ್ರ ಕಾಯ್ದೆ 59)
  2. ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989.
  3. ಕರ್ನಾಟಕ ಮೋಟಾರು ವಾಹನ ನಿಯಮಗಳು, 1989.
  4. ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ, 1957 (1957 ನೇ ಕರ್ನಾಟಕ ಕಾಯ್ದೆ, 35)
  5. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿಯಮಗಳು, 1957.

ಆಡಳಿತ ವ್ಯವಸ್ಥೆ

    ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಇವರು ಸಾರಿಗೆ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ.  ಅವರಿಗೆ ಕೇಂದ್ರ ಕಛೇರಿಯಲ್ಲಿ ನೆರವಾಗಲು ಈ ಕೆಳಕಂಡ ಅಧಿಕಾರಿಗಳು ಇರುತ್ತಾರೆ.

     1.   ಅಪರ ಸಾರಿಗೆ ಆಯುಕ್ತರು (ಆಡಳಿತ)
     2.   ಅಪರ ಸಾರಿಗೆ ಆಯುಕ್ತರು (ಪ್ರವರ್ತನ-ದಕ್ಷಿಣ)
     3.   ಅಪರ ಸಾರಿಗೆ ಆಯುಕ್ತರು ಮತ್ತು ಕಾರ್ಯದರ್ಶಿ (ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ)
     4.   ಅಪರ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ)
     5.   ಕಾನೂನು ಸಲಹೆಗಾರರು   
     6.   ಆರ್ಥಿಕ ಸಲಹೆಗಾರರು-1 (ಲೆಕ್ಕ ಪತ್ರ)
     7.   ಆರ್ಥಿಕ ಸಲಹೆಗಾರರು-2 (ಲೆಕ್ಕ ಪರಿಶೋಧನೆ)
     8.   ಸಹಾಯಕ ನಿರ್ದೇಶಕರು (ಸಾಂಖ್ಯಿಕ)
     9.   ಸಹಾಯಕ ಕಾನೂನು ಅಧಿಕಾರಿಗಳು (ಇಬ್ಬರು)
     10.   ಸಹಾಯಕ ಕಾರ್ಯದರ್ಶಿಗಳು(ನಾಲ್ವರು)

ಮೇಲಿನ ಅಧಿಕಾರಿಗಳಲ್ಲದೆ, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಪ್ರವರ್ತನ ಕಾರ್ಯಗಳ ಮೇಲುಸ್ತುವಾರಿಯನ್ನು ಧಾರವಾಡದಲ್ಲಿರುವ ಅಪರ ಸಾರಿಗೆ ಆಯುಕ್ತರು (ಪ್ರವರ್ತನ) (ಉತ್ತರ) ಇವರು ನಿರ್ವಹಿಸುತ್ತಿದ್ದಾರೆ.

 

© Content Owned & Site maintained by Transport Department, Karnataka State Government.
Visitors Count :: 6314106 | Site Last updated on :: 16-10-2019