Sunday, August 25, 2019,

Menu

 
Back

ವಿದೇಶಿ ಚಾಲನಾ ಅನುಜ್ಞಾ ಪತ್ರ ಇರುವಂಥವರಿಗೆ ಚಾಲನಾ ಅನುಜ್ಞಾ ಪತ್ರ ನೀಡುವಿಕೆ

ವಿದೇಶಿಯ ವಾಹನ ಚಾಲನಾ ಅನುಜ್ಞಾನ ಪತ್ರಧಾರಕರಿಗೆ ಭಾರತೀಯ ವಾಹನ ಚಾಲನಾ ಅನಜ್ಞಾನ ಪತ್ರ ನೀಡುವಾಗ ಅನುಸರಿಸಬೇಕಾದ ವಿಧಾನದ ಬಗ್ಗೆ.

ಹೊರ ರಾಜ್ಯಗಳ ಸಕ್ಷಮ್ಮ ಪ್ರಾಧಿಕಾರವು ನೀಡಿರುವ ವಾಹನ ಚಾಲನಾ ಅನುಜ್ಞಾನ ಪತ್ರಧಾರಕರು ಭಾರತೀಯ ವಾಹನ ಚಾಲನಾ ಅನುಜ್ಞಾನ ಪತ್ರ ಪಡೆಯಲು ಅರ್ಹರಾಗಿರುತ್ತಾರೆ.

 1. ಅರ್ಜಿದಾರರು ನಿಯಮಾನುಸಾರ ಅವಶ್ಯಕವಾದ ಕಲಿಕಾ ಚಾಲನಾ ಅನುಜ್ಞಾಪತ್ರ ಪಡೆಯಬೇಕು. (ಇದಕ್ಕೆ ಅವಶ್ಯಕವಾದ ವಿವರಗಳನ್ನು ಕಲಿಕಾ ಅನುಜ್ಞಾ ಪತ್ರ ಪಡೆಯುವ ವಿಧಾನದ ವಿವರ ಹೊಂದಿರುವ ವೆಬ್ ಸೈಟ್ ನಿಂದ ಪಡೆಯಬಹುದಾಗಿದೆ.
 2. ವಿದೇಶಿಯ ಸಕ್ಷಮ್ಮ ಪ್ರಾಧಿಕಾರವು ನೀಡಿರುವ ವಾಹನ ಚಾಲನಾ ಅನುಜ್ಞಾನ ಪತ್ರ ಬಂದಿರುವ ಅಭ್ಯರ್ಥಿಗಳಿಗೆ ಖಾಯಂ ಚಾಲನಾ ಅನುಜ್ಞಾ ಪತ್ರ ನೀಡುವಾಗ ಒಳಗಾಗಬೇಕಾಧ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಲಾಗುತ್ತದೆ.
 3. ವಿದೇಶಿ ಪ್ರಾಧಿಕಾರವು ನೀಡಿರುವ ವಾಹನ ಚಾಲನಾ ಅನುಜ್ಞಾನ ಪತ್ರ ಧಾರಕನು ಭಾರತೀಯ ವಾಹನ ಚಾಲನಾ ಅನುಜ್ಞಾನ ಪತ್ರ ಹೊಂದಲು ಅನುಸರಿಸಬೇಕಾದ ವಿಧಾನ ಈ ಕೆಳಕಂಡಂತೆ ಇರುವುದು.
 1. ಪ್ರಪತ್ರ ಸಂಖ್ಯೆ: ಸಿಎಂವಿ-4 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
 2. ಪ್ರಪತ್ರ ಸಂಖ್ಯೆ: ಸಿಎಂವಿ-3 ರಲ್ಲಿ ಪಡೆದಿರುವ ಕಲಿಕಾ ಚಾಲನಾ ಅನುಜ್ಞಾ ಪತ್ರ ಲಗತ್ತಿಸಬೇಕು.
 3. ದೈಹಿಕ ಸದೃಢತೆ ಘೋಷವಾರ ಕುರಿತು ಸರಿಯಾಗಿ ಭರ್ತಿಸಿದ ಪ್ರಪತ್ರ ಸಂಖ್ಯೆ:ಸಿ.ಎಂ.ವಿ-4 ಲಗತ್ತಿಸಬೇಕು.
 4. ನೋಂದಾಯಿತ ವೈದ್ಯಾಧಿಕಾರಿ ರವರು ಪ್ರಪತ್ರ ಸಂಖ್ಯೆ: ಸಿ.ಎಂ.ವಿ-1(ಎ) ರಲ್ಲಿ ದೃಢಿಕರಿಸಿರುವ ವೈಧ್ಯಕೀಯ ಪ್ರಮಾಣ ಪತ್ರ ಲಗತ್ತಿಸಬೇಕು.
 5. ಪಾಸ್ ಪೋರ್ಟ್ ನ/ವಿಸಾ ಜೆರಾಕ್ಸ್ ಪತ್ರಿ ಲಗತ್ತಿಸಬೇಕು.
 6. ಪೋಲಿಸ್ ಆಯುಕ್ತರವರಿಂದ ನೀಡಲ್ಪಟ್ಟಿರುವ ಪರವಾನಿಗೆ ಲಗತ್ತಿಸಬೇಕು.(Stay Certificate)
 7. ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 4ರಲ್ಲಿ ನಿರೂಪಿಸಿರುವಂತೆ ಸ್ಥಳೀಯ ವಾಸದ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
 8. ವಿದೇಶಿಯ ವಾಹನ ಚಾಲನಾ ಅನುಜ್ಞಾನ ಪತ್ರದ 2 ಕಲರ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು.
 9. ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಛೇರಿಯ ನಗದು ಶಾಖೆಯಲ್ಲಿ ನಿಗದಿತ ಶುಲ್ಕ ರೂ. 220/- ಪಾವತಿಸಿದ ರಸೀದಿ ಲಗತ್ತಿಸಬೇಕು.
 10. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳನ್ನು ಅಡಕಗೊಳಿಸಬೇಕು
 11. ಅವಶ್ಯಕವಾದ ಪೋಸ್ಟಲ್ ಸ್ಟಾಂಪ್ ಹೊಂದಿದ ಸ್ವಯಂ ವಿಳಾಸದ ಲಕೋಟೆಯನ್ನು ಲಗತ್ತಿಸಬೇಕು. ಸಿದ್ಧವಾದ ಅನುಜ್ಞಾನ ಪತ್ರ ಸಕಾಲ ಸೇವೆ ಅಡಯಲ್ಲಿ 30 ದಿನಗಳಗೊಳಗಾಗಿ ರವಾನಿಸಲಾಗುತ್ತದೆ.

ಟಿಪ್ಪಣ : ಮೇಲೆ ತಿಳಿಸಿರುವಂತೆ ಅರ್ಜಿಯನ್ನು ತಯಾರಿಸಿ ನಂತರ ಅಭ್ಯರ್ಥಿಯು ಪೋಟೋಗಾಗಿ ಹಾಗೂ ಬಯೋಮೆಟ್ರಿಕ್ ಹಾಗೂ ಡಾಟಾ ಭರ್ತಿಗಾಗಿ ಸಂಬಂಧಪಟ್ಟ ಮೇಜಿನವರಿಗೆ ಸಂಪರ್ಕಿಸಬೇಕು ಹಾಗೂ ಮೂಲ ದಾಖಲಾತಿಗಳನ್ನು ಪರಿಶೀಲನೆಗಾಗಿ ಅನುಜ್ಞಾಪತ್ರ ಪ್ರಾಧಿಕಾರದ ಮುಂದೆ ಹಾಜರಾಗಬೇಕು. ಪರಿಶೀಲನೆ ನಂತರ ಅರ್ಜಿಯನ್ನು ಸಂಬಂಧಪಟ್ಟವರಿಗೆ ಸಲ್ಲಿಸಬೇಕು.

© Content Owned & Site maintained by Transport Department, Karnataka State Government.
Visitors Count :: 5886445 | Site Last updated on :: 23-08-2019