Tuesday, December 12, 2017,

Menu

 
Back

ಸಂದೇಶ


ಬಿ. ದಯಾನಂದ,  ಭಾ.ಪೊ.ಸೇ.
   

ಸಾರಿಗೆ ವ್ಯವಸ್ಥೆಯು ದೇಶದ ಬೆನ್ನೆಲುಬು. ಯಾವುದೇ ದೇಶ ಅಥವಾ ರಾಜ್ಯವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾರಿಗೆ ವ್ಯವಸ್ಥೆಯು ಬಹಳ ಮುಖ್ಯವಾದ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.  ಸರ್ಕಾರ ಮತ್ತು ಸಾರಿಗೆ ಇಲಾಖೆಯು ವಿವಿಧ ಹೊಸ ಉಪಕ್ರಮಗಳನ್ನು ಮತ್ತು ಹೊಸ ಬಗೆಯ ಶೋಧನಾತ್ಮಕ ರೀತಿಗಳನ್ನು ರಾಜ್ಯಾದ್ಯಂತ ಇರುವ ಪ್ರಾದೇಶಿಕ ಸಾರಿಗೆ ಕಛೇರಿಗಳ ಮೂಲಕ ಅನುಷ್ಠಾನಗೊಳಿಸಿ ಉದ್ಯಮಗಳಿಗೆ, ವ್ಯವಸಾಯಕ್ಕೆ ಮತ್ತು ಸಾರ್ವಜನಿಕರಿಗೆ ಸಮರ್ಥವಾದ, ಮಿತವ್ಯಯವಾದ ಹಾಗೂ ಸಕಾಲಿಕವಾದ ಸಾರಿಗೆ ಸೇವೆಗಳ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುತ್ತಿವೆ.

    ಸಾರಿಗೆ ಇಲಾಖೆಯು ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಛೇರಿಗಳನ್ನು ಗಣಕೀಕರಣಗೊಳಿಸಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಹಾಗೂ ಇಲಾಖೆಯ ಸೇವೆಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.  ಸಾರ್ವಜನಿಕರು ಇಲಾಖೆಯ ಸೇವೆಗಳನ್ನು ಸುಲಭವಾಗಿ ಪಡೆಯಲು ಆನ್‍ಲೈನ್‍ ಅರ್ಜಿ / ಆನ್‍ಲೈನ್ ಶುಲ್ಕ ಹಾಗೂ ಇ-ತೆರಿಗೆ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.  ಇಲಾಖೆಯ ಆಯ್ದ ಸೇವೆಗಳನ್ನು ಬೆಂಗಳೂರು-ಒನ್, ಕರ್ನಾಟಕ-ಒನ್ ಹಾಗೂ ಕರ್ನಾಟಕ ಮೊಬೈಲ್-ಒನ್ ಮೂಲಕ ನೀಡಲಾಗುತ್ತಿದೆ.  

    ಸಾರ್ವಜನಿಕರು ಇಲಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಲು ಸಾರಿಗೆ ಇಲಾಖೆಯ ವೆಬ್‍ಸೈಟನ್ನು ಪುನರ್‍ ರಚಿಸಲಾಗಿದ್ದು, ಬೆರಳ ತುದಿಯಲ್ಲಿ ಜಗತ್ತು ಎಂಬಂತೆ ಸೇವೆಗಳನ್ನು ಇಲಾಖೆಯಲ್ಲಿ ನೀಡಲಾಗುತ್ತಿದೆ ಎಂಬ ಸಂದೇಶವನ್ನು ಸಾರಲು ಹರ್ಷಿಸುತ್ತೇನೆ.  

                                                  ಬಿ. ದಯಾನಂದ,  ಭಾ.ಪೊ.ಸೇ.
      ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ,
      ಬೆಂಗಳೂರು,
© Content Owned & Site maintained by Transport Department, Karnataka State Government.
Visitors Count :: 2669463 | Site Last updated on :: 07-12-2017