Wednesday, October 17, 2018,

Menu

 
Back

Transport Minister's Message

      ಶ್ರೀ ಡಿ.ಸಿ.ತಮ್ಮಣ್ಣ
   

    ಸಾರಿಗೆ ಇಲಾಖೆಯು ನಿಯಮಿತವಾಗಿ ಸಾರ್ವಜನಿಕ ಸ್ನೇಹಿ ಸೇವೆಗಳನ್ನು ಸಾರ್ವಜನಿಕ ಉಪಯೋಗಕ್ಕೆ ಸಮರ್ಪಿಸುತ್ತಿರುವ ಈ ಸಂದರ್ಭದಲ್ಲಿ ಅಂತರ್ಜಾಲ ವ್ಯವಸ್ಥೆಯು ಇಂದು ಸಾರ್ವಜನಿಕ ಬದುಕಿನ ಒಂದು ಭಾಗವಾಗಿದ್ದು, ಈ ವ್ಯವಸ್ಥೆಯಿಂದ ಪ್ರತಿಯೊಬ್ಬರೂ ತಾವು ಇರುವಲ್ಲಿಯೇ ಮಾಹಿತಿಯನ್ನು ಪಡೆಯಬಹುದಾಗಿದ್ದು, ಸಾರಿಗೆ ಇಲಾಖೆಗೆ ಸಂಬಂಧಿಸಿದ ಅನೇಕ ಸೇವೆಗಳು ಹಾಗು ಮಾಹಿತಿಯನ್ನು ಸಾರ್ವಜನಿಕರು ನೇರವಾಗಿ ಜಾಲತಾಣದ ಮೂಲಕ ಪಡೆಯಬಹುದಾಗಿರುತ್ತದೆ. ಇದರಿಂದ ಸಾರ್ವಜನಿಕರು ಮಾಹಿತಿಗಾಗಿ ಕಛೇರಿಗೆ ಸುತ್ತಾಡುವ ಹಾಗೂ ಮೂರನೇ ವ್ಯಕ್ತಿಯ ಆಮಿಷಕ್ಕೆ ಒಳಗಾಗುವ ಸನ್ನಿವೇಶ ಉದ್ಭವಿಸುವುದಿಲ್ಲ.

   ಆದಕಾರಣ ಸಾರಿಗೆ ಇಲಾಖೆಯು ಒದಗಿಸಿರುವ ಸಾರ್ವಜನಿಕ ಸ್ನೇಹಿ, ಪಾರದರ್ಶಕ ತಂತ್ರಾಂಶ ಸಂಬಂಧಿತ ಸೇವೆಗಳನ್ನು ಸಾರ್ವಜನಿಕರು ಪರಿಣಾಮಕಾರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕಾಗಿ ಕೋರುತ್ತೇನೆ.
 

                                                 
ಶ್ರೀ ಡಿ.ಸಿ.ತಮ್ಮಣ್ಣ
      ಮಾನ್ಯ ಸಾರಿಗೆ ಸಚಿವರು
      ಕರ್ನಾಟಕ ಸರ್ಕಾರ.
       
© Content Owned & Site maintained by Transport Department, Karnataka State Government.
Visitors Count :: 4458961 | Site Last updated on :: 16-10-2018