Tuesday, February 20, 2018,

Menu

 
Back

ಕರ್ನಾಟಕ ರಾಜ್ಯದೊಳಗಿನ ವಾಹನ ವಿಳಾಸ ಬದಲಾವಣೆ ನಮೂದು

(ಮೋಟಾರು ವಾಹನ ಕಾಯ್ದೆ 1988 ರ ಕಲ 49 & ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 59 ಗಮನಿಸಿ)

ಲಗತ್ತಿಸಬೇಕಾದ ದಾಖಲೆಗಳು

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಕಛೇರಿಯ ನೋಂದಣಿ ವಿಭಾಗದಲ್ಲಿ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಬೇಕು. ವಿಳಾಸ ಬದಲಾವಣೆ ನಮೂದಿಸಿದ ನಂತರ "ಸಕಾಲ" ನಿಯಮದಡಿ ನಿಗದಿಪಡಿಸಿರುವ ನಿರ್ಧಿಷ್ಟ ಸಮಯದಲ್ಲಿ ನೋಂದಣಿದಾರರಿಗೆ ಸ್ಟೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು ಇದನ್ನು ಸಕಾಲ ವೆಬ್ ಸೈಟ್ನಲ್ಲಿಯೂ ಸಹ ವೀಕ್ಷಿಸಬಹುದು.

 
  1. ನಮೂನೆ 33 ಸಿಎಂವಿಆರ್
  2. ಪೈನಾನ್ಸ್ ಇದ್ದಲ್ಲಿ ಮೂರು ಪ್ರತಿಗಳಲ್ಲಿ ಅರ್ಜಿ ಸಲ್ಲಿಸಬೇಕು.
  3. ಶುಲ್ಕ ರೂ.25/- ತಡವಾಗಿದ್ದಲ್ಲಿ ದಂಡ ಶುಲ್ಕ ರೂ.100/-
  4. ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
  5. ನೋಂದಣಿ ಪತ್ರ, ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ, ಅರ್ಹತಾ ಪತ್ರ (ಸಾರಿಗೆ ವಾಹನವಾಗಿದ್ದಲ್ಲಿ)
  6. ವಿಳಾಸ ಪುರಾವೆ (ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 4 ರಲ್ಲಿ ತಿಳಿಸಿರುವಂತೆ)

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.    

© Content Owned & Site maintained by Transport Department, Karnataka State Government.
Visitors Count :: 3099403 | Site Last updated on :: 20-02-2018