Tuesday, February 20, 2018,

Menu

Back

ವಾಹನ ತಪಾಸಣೆ ಮಾಡಲು ಮೋಟರ್ ವಾಹನ ನಿರೀಕ್ಷಕರಿಗೆ ನೀಡಲಾದ ಅಧಿಕಾರಗಳು

ಮೋಟಾರು ವಾಹನ ಅಧಿಕಾರಿಗಳ ನೇಮಕ

  1. ರಾಜ್ಯ ಸರ್ಕಾರವು, ಈ ಅಧಿನಿಯಮದ ುಪಬಂಧಗಳನ್ನು ಕಾರ್ಯಗತಗೊಳಿಸುವ ಉದ್ದೇಶಕ್ಕಾಗಿ, ಮೋಟಾರು ವಾಹನಗಳ ಇಲಾಖೆಯನ್ನು ಸ್ಥಾಪಿಸಬಹುದು ಮತ್ತು ತಾನು ಸೂಕ್ತವೆಂದು ಆಲೋಚಿಸುವಂಥ ವ್ಯಕ್ತಿಗಳನ್ನು ಅದರ ಅಧಿಕಾರಗಳನ್ನಾಗಿ ನೇಮಕ ಮಾಡಬಹುದು.
  2. ಅಂಥ ಪ್ರತಿಯೊಬ್ಬ ಅಧಿಕಾರಿಯನ್ನು ಭಾರತ ದಂಡ ಸಂಹಿತೆಯ ಅರ್ಥವ್ಯಾಪ್ತಿಯಲ್ಲಿ ಸರ್ಕಾರಿ ನೌಕರನೆಂದು ಭಾವಿಸತಕ್ಕದ್ದು.
  3. ರಾಜ್ಯ ಸರ್ಕಾರವು ಮೋಟಾರು ವಾಹನಗಳ ಇಲಾಖೆಯ ಅಧಿಕಾರಿಗಳು ತಮ್ಮ ಪ್ರಕಾರ್ಯಗಳನ್ನು ನಿರ್ವಹಿಸುವ ಬಗ್ಗೆ ಮತ್ತು ವಿಶೇಷತ: ಅವರು ಧರಿಸಬೇಕಾದ ಸಮವಸ್ತ್ರವನ್ನು ಅವರು ಯಾವ ಪ್ರಾಧಿಕಾರಗಳಿಗೆ ಅಧೀನರಾಗಿರಬೇಕು, ಆ ಪ್ರಾಧಿಕಾರಿಗಳು ಅವರು ನಿರ್ವಹಿಸಬೇಕಾದ ಕರ್ತವ್ಯಗಳು, ಅವರು ಚಲಾಯಿಸಬೇಕಾದ ಈ ಅಧಿನಿಯಮದ ಮೇರೆಗೆ ಪೊಲೀಸು ಅಧಿಕಾರಿಗಳು ಚಲಾಯಿಸಬೇಕಾದ ಅಧಿಕಾರಿಗಳನ್ನೊಳಗೊಂಡು ಅಧಿಕಾರಗಳನ್ನು ಮತ್ತು ಅಂಥ ಅಧಿಕಾರಗಳನ್ನು ಚಲಾಯಿಸುವುದಕ್ಕೆ ಅನ್ವಯಿಸುವ ಷರತ್ತುಗಳನ್ನು ನಿಯಮಿಸುವ ಹಿಂದೆ ಹೇಳಿದ ಅಧಿಕಾರದ ಸಾಮಾನ್ಯತೆಗೆ ಭಾದಕವಾಗದಂತೆ ನಿಯಮಗಳನ್ನು ರಚಿಸಬಹುದು.
  4. ಈ ಅಧಿನಿಯಮದ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆಯ ಮೂಲಕ ಸದರಿ ಅಧಿಕಾರಿಗಳ ಅಥವಾ ಅಂಥ ಅಧಿಕಾರಿಗಳ ಯಾವುದೇ ವರ್ಗವು ಹೇಗೆ ನೇಮಕಗೊಳ್ಳಲು ಹೊಂದಿರತಕ್ಕ ಕನಿಷ್ಠ ಅರ್ಹತೆಯನ್ನು ನಿಗದಿಪಡಿಸಬಹುದು.
  5. ಈ ಬಗ್ಗೆ ರಾಜ್ಯ ಸರ್ಕಾರವು ಅಧಿಕಾರ ಕೊಡಬಹುದಾದಂಥ ಅಧಿಕಾರಿಯು, (3)ನೇ ಉಪಪ್ರಕರಣದ ಮೇರೆಗೆ ಮೋಟಾರು ವಾಹನಗಳ `ಇಲಾಖೆಯ ಯಾರೇ ಅಧಿಕಾರಿಗೆ ಪ್ರಧಾನ ಮಾಡಬಹುದಾದ ಅಧಿಕಾರಿಗಳ ಜೊತೆಗೆ.
    1. (ಎ) ಅಧಿನಿಯಮದ ಉಪಬಂಧಗಳನ್ನು ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ, ಹೇಗೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತಾನು ಸೂಕ್ತವೆಂದು ಆಲೋಚಿಸುವಂಥ ಪರೀಕ್ಷೆ ಮತ್ತು ವಿಚಾರಣೆಯನ್ನು ಮಾಡಲು,
    2. (ಬಿ) ತನಗೆ ಯುಕ್ತವೆಂದು ತೋರಿದಂಥ ಯಾವುದೇ ಸಹಾಯದೊಂದಿಗೆ ಈ ಅಧಿನಿಯಮದ ಮೇರೆಗಿನ ಒಂದು ಅಪರಾಧವನ್ನು ಮಾಡಿರುವ ವ್ಯಕ್ತಿಯ ಅತಿಭೋಗದಲ್ಲಿರುವ ಅಥವಾ ಅಂಥ ಅಪರಾಧಕ್ಕೆ ಸಂಬಂಧಿಸಿದ ಮೋಟಾರು ವಾಹನವನ್ನು ಇರಿಸಲಾಗಿದೆಯೆಂದು ನಂಬಲು ತನಗೆ ಕಾರಣವಿರುವ ಯಾವುದೇ ಆವರಣವನ್ನು ಪ್ರವೇಶಿಸಲು ಪರಿಶೀಲಿಸಲು ಮತ್ತು ಶೋಧಿಸಲು ಅಧಿಕಾರ ಹೊಂದಿರತಕ್ಕದ್ದು.
      1. ವಾರೆಂಟಿಲ್ಲದೆಯೆ ಅಂಥ ಯಾವುದೇ ಶೋಧನೆಯನ್ನು ಗೆಜೆಟೆಡ್ ದರ್ಜೆಯ ಅಧಿಕಾರಿ ಮಾತ್ರವೇ ಮಾಡತಕ್ಕದ್ದು.
      2. ಜುಲ್ಮಾನೆಯಿಂದ ಮಾತ್ರವೇ ದಂಡನೀಯವಾದ ಅಪರಾಧವಾಗಿರುವಲ್ಲಿ ಸೂರ್ಯಾಸ್ತದ ಅನಂತರ ಮತ್ತು ಸೂರ್ಯೋದಕ್ಕೆ ಮುನ್ನ ಶೋಧನೆಯನ್ನು ಮಾಡತಕ್ಕದ್ದಲ್ಲ
      3. ವಾರೆಂಟ್ ಅಲ್ಲದೇ ಶೋಧನೆಯನ್ನು ಮಾಡಲಾಗಿರುವಲ್ಲಿ ಸಂಬಂಧಪಟ್ಟ ಗೆಜೆಟೆಡ್ ಅಧಿಕಾರಿಯು ವಾರೆಂಟ್ ಪಡೆಯದೇ ಇರುವುದಕ್ಕೆ ಇರುವ ಕಾರಣಗಳನ್ನು ಬರಹದಲ್ಲಿ ದಾಖಲು ಮಾಡತಕ್ಕದ್ದು ಮತ್ತು ಅಂಥ ಶೋಧನೆಯನ್ನು ಮಾಡಲಾಗಿದೆ ಎಂದು ತನ್ನ ನಿಕಟ ವರಿಷ್ಠಾಧಿಕಾರಿಗೆ ವರದಿ ಮಾಡತಕ್ಕದ್ದು.
    3. (ಸಿ) ಯಾರೇ ವ್ಯಕ್ತಿಯನ್ನು ವಿಚಾರಣೆ ಮಾಡಲು ಮತ್ತು ಅಧಿನಿಯಮಕ್ಕೆ ಅನುಸಾರವಾಗಿ ಇಟ್ಟ ಯಾವುದೇ ರಿಜಿಸ್ಟರು ಅಥವಾ ಇತರ ದಸ್ತಾವೇಜನ್ನು ಹಾಜರು ಪಡಿಸಲು ಮತ್ತು ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ, ತಾನು ಅವಶ್ಯಕವೆಂದು ಪರಿಗಣಿಸಬಹುದಂಥ ಯಾರೇ ವ್ಯಕ್ತಿಯ ಹೇಳಿಕೆಗಳನ್ನು ಆ ಸ್ಥಳದಲ್ಲಿಯೇ ಅಥವಾ ಅನ್ಯತಾ ತೆಗೆದುಕೊಳ್ಳಲು
    4. (ಡಿ) ಈ ಅಧಿನಿಯಮದ ಮೇರೆಗಿನ ಯಾವ ಅಪರಾಧವನ್ನು ಎಸಗಲಾಗಿದೆಯೆಂದು ಅವನು ನಂಬಲು ಕಾರಣವಿದೆಯೇ, ಅಪರಾಧಕ್ಕೆ ಸಂಬಂಧಿಸಿದಂತೆ ಸುಸಂಬ್ದವೆಂದು ತಾನು ಪರಿಗಣಿಸಬಹುದಾದ ಯಾವುವೇ ರಿಜಿಸ್ಟ್ರುಗಳನ್ನು ಅಥವಾ ದಸ್ತಾವೇಜುಗಳನ್ನು ಅಥವಾ ಅದರ ಭಾಗಗಳನ್ನು ವಶಪಡಿಸಿಕೊಳ್ಳಲು ಅಥವಾ ಅದರ ಪ್ರತಿಗಳನ್ನು ತೆಗೆದುಕೊಳ್ಳಲು,
    5. (ಇ) ಈ ಅಧಿನಿಯಮದ ಮೇರೆಗಿನ ಯಾವುದೇ ಅಪರಾಧಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನನ್ನು ಹೂಡಲು ಮತ್ತು ಯಾವುದೇ ನ್ಯಾಯಾಲಯದ ಮುಂದೆ ಅಪರಾಧಿಯು ಹಾಜರಾಗುವುದನ್ನು ಖಚಿತಪಡಿಸುವುದಕ್ಕಾಗಿ ಒಂದು ಪತ್ರವನ್ನು ತೆಗೆದುಕೊಳ್ಳಲು;
    6. (ಎಫ್) ನಿಯಮಿಸಬಹುದಂಥ ಇತರ ಅಧಿಕಾರಗಳನ್ನು ಚಲಾಯಿಸಲು ಅಧಿಕಾರ ಹೊಂದಿರತಕ್ಕದ್ದು.
  6. ದಂಡ ಪ್ರಕ್ರಿಯಾ ಸಂಹಿತೆ 1973ರ (1974ರ 2) ರ ಉಪಬಂಧಗಳು ಆ ಸಂಹಿತೆಯ 94ನೇ ಪ್ರಕರಣದ ಮೇರೆಗೆ ಹೊರಡಿಸಿದ ಯಾವುದೇ ವಾರೆಂಟಿನ ಪ್ರಾಧಿಕಾರದ ಮೇರೆಗೆ ಯಾವುದೇ ಶೋಧನೆ ಅಥವಾ ಜಪ್ತಿಗೆ ಅನ್ವಯಿಸುವಂತೆ ಸಾಧ್ಯವಾಗಬಹುದಾದ ಮಟ್ಟಿಗೆ, ಈ ಪ್ರಕರಣದ ಮೇರೆಗಿನ ಯಾವುದೇ ಶೋಧನೆ ಅಥವಾ ಜಪ್ತಿಗೆ ಅನ್ವಯಿಸತಕ್ಕದ್ದು.

ಪರಂತು, ಈ ಉಪಪ್ರಕತಣದ ಮೇರೆಗೆ ಯಾವ ವ್ಯಕ್ತಿಯನ್ನೂ ಯಾವುದೇ ಪ್ರಶ್ನೆಗೆ ಉತ್ತರಿಸಲು ಅಥವಾ ತನಗೆ ತಾನೆ ಅಪರಾಧಕ್ಕೆ ಸಿಕ್ದಿಕೊಳ್ಳುವಂತೆ ಮಾಡುವ ಯಾವುದೇ ಹೇಳಿಕೆಯನ್ನು ಕೊಡಲು ಒತ್ತಾಯ ಮಾಡತಕ್ಕದಲ್ಲ.

ವಿಭಾಗ 114 - ವಾಹನವನ್ನು ತೂಕ ಮಾಡಿಸಲು ಅಧಿಕಾರ

  1. ರಾಜ್ಯ ಸರ್ಕಾರದಿಂದ ಈ ಸಂಬಂಧದಲ್ಲಿ ಅಧಿಕೃತನಾದ ಮೋಟಾರು ವಾಹನ ಇಲಾಖೆಯ ಯಾರೇ ಅಧಿಕಾರಿಗೆ, 113ನೇ ಪ್ರಕರಣವನ್ನು ಉಲ್ಲಂಘಿಸಿ ಆ ಸರಕು ವಾಹನವನ್ನು ಅಥವಾ ಟ್ರೈಲರನ್ನು ಬಳಸಲಾಗುತ್ತಿದೆ ಎಂದು ನಂಬಲು ಕಾರಣವಿರುವಲ್ಲಿ, ಮುನ್ನಡೆ ಮಾರ್ಗದಲ್ಲಿರುವ ಯಾವುದೇ ಸ್ಥಳದಿಂದ ಹತ್ತು ಕಿಲೋ ಮೀಟರುಗಳ ಅಂತರದಲ್ಲಿ ಅಥವಾ ವಾಹನದ ಗಮ್ಯ ಸ್ಥಾನದಿಂದ ಇಪ್ಪತ್ತು ಕಿಲೋ ಮೀಟರುಗಳ ಅಂತರದಲ್ಲಿ ತೂಕದ ಸಾಧನ ಯಾವುದಾದರೂ ಇದ್ದರೆ, ಅಲ್ಲಿಗೆ ತೂಕ ಮಾಡುವ ಸಲುವಾಗಿ ವಾಹನವನ್ನು ಸಾಗಿಸುವಂತೆ ಚಾಲಕನನ್ನು ಅಗತ್ಯಪಡಿಸಬಹುದು; ಮತ್ತು ಹಾಗೆ ತೂಕ ಮಾಡಿದ ಅನಂತರ, ತೂಕಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ 113ನೇ ಪ್ರಕರಣದ ಉಪಬಂಧಗಳ ಉಲ್ಲಂಘನೆ ಯಾಗಿರುವುದು ಕಂಡು ಬಂದರೆ, ಅವನು ಲಿಖಿತ ಆದೇಶದ ಮೂಲಕ, ಚಾಲಕನ ಸ್ವಂತ ಜವಾಬ್ದಾರಿಯ ಮೇಲೆ ಅಧಿಕ ಭಾರವನ್ನು ಕಡಿಮೆ ಮಾಡುವಂತೆ ಮತ್ತು ಭರ್ತಿಯಾದ ವಾಹನದ ತೂಕವನ್ನು ಕಡಿಮೆ ಮಾಡುವವರೆಗೆ ಅಥವಾ ವಾಹನ ಅಥವಾ ಹಿಂಬಂಡಿಯ ವಿಷಯದಲ್ಲಿ 113ನೇ ಪ್ರಕರಣವನ್ನು ಪಾಲಿಸುವಂತೆ ಅನ್ಯಥಾ ವ್ಯವಹರಿಸುವವರೆಗೆ ಆ ಸ್ಥಳದಿಂದ ಆ ವಾಹನವನ್ನು ಅಥವಾ ಹಿಂಬಂಡಿಯನ್ನು ಕದಲಿಸದಂತೆ ಚಾಲಕನಿಗೆ ನಿರ್ದೇಶಿಸಬಹುದು ಮತ್ತು ಚಾಲಕನು ಅಂಥ ನೋಟೀಸನ್ನು ಸ್ವೀಕರಿಸಿದ ಮೇಲೆ ಅಂಥ ನಿರ್ದೇಶನಗಳನ್ನು ಪಾಲಿಸತಕ್ಕದ್ದು.
  2. ನೇ ಉಪಪ್ರಕರಣದ ಮೇರೆಗೆ ಅಧಿಕೃತನಾದ ವ್ಯಕ್ತಿಯು ಸದರಿ ಲಿಖಿತ ಆದೇಶವನ್ನು ಮಾಡಿರುವಲ್ಲಿ, ಅವನು, ಸರಕು ವಾಹನದ ಪರ್ಮಿಟ್ಟಿನ ಮೇಲೆ ಅತಿ ಭಾರದ ಸಂಬಂಧಪಟ್ಟ ವಿವರಗಳನ್ನು ಸಹ ಹಿಂಬರೆಯತಕ್ಕದ್ದು ಮತ್ತು ಆ ಪರ್ಮಿಟ್ಟನ್ನು ನೀಡಿದ ಪ್ರಾಧಿಕಾರಕ್ಕೆ ಸಹ ಅಂಥ ಹಿಂಬರಹದ ಸಂಗತಿಯನ್ನು ತಿಳಿಸತಕ್ಕದ್ದು.
 
ಲೈಸೆನ್ಸನ್ನು ಮತ್ತು ನೋಂದಣಿ ಪ್ರಮಾಣ ಪತ್ರವನ್ನು ಹಾಜರುಪಡಿಸುವ ಕರ್ತವ್ಯ

  1. ಮೋಟಾರು ವಾಹನದ ಚಾಲಕನು ಯಾವುದೇ ಸಾರ್ವಜನಿಕ ಸ್ಥಳದಲ್ಲಿ, ಸಮವಸ್ತ್ರದಲ್ಲಿರುವ ಯಾರೇ ಪೊಲೀಸ್ ಅಧಿಕಾರಿಯು ಕೇಳಿದಾಗ ತನ್ನ ಲೈಸನ್ಸ್.ನ್ನು ಪರೀಕ್ಷೆಗಾಗಿ ಹಾಜರುಪಡಿಸ ತಕ್ಕದ್ದು:
  2. ಪರಂತು. ಚಾಲಕನು ತನ್ನ ಲೈಸನ್ಸ್.ನ್ನು ಈ ಅಧಿನಿಯಮ ಅಥವಾ ಇತರೆ ಯಾವುದೇ ಅಧಿನಿಯಮದ ಮೇರೆಗೆ ಯಾರೇ ಅಧಿಕಾರಿ ಅಥವಾ ಪ್ರಾಧಿಕಾರಿಗೆ ಒಪ್ಪಿಸಿರುವಲ್ಲಿ ಅಥವಾ ಪ್ರಾಧಿಕಾರದಿಂದ ಅದು ಜಪ್ತಿಯಾಗಿರುವಲ್ಲಿ, ಆ ಲೈಸನ್ಸಿಗೆ ಬದಲಾಗಿ ಅದಕ್ಕೆ ಸಂಬಂಧಿಸಿ ಅಂಥ ಅಧಿಕಾರಿ ಅಥವಾ ಪ್ರಾಧಿಕಾರವು ಕೊಟ್ಟ ರಸೀದಿ ಅಥವಾ ಇತರ ಸ್ವೀಕೃತಿಯನ್ನು ಹಾಜರುಪಡಿಸ ಬಹುದು ಮತ್ತು ಆ ತರುವಾಯ ಕೇಂದ್ರ ಸರ್ಕಾರವು ನಿಯಮಿಸಬಹುದಾದಂಥ ಅವಧಿಯೊಳಗೆ ಮತ್ತು ರೀತಿಯಲ್ಲಿ ಲೈಸನ್ಸ್.ನ್ನು ಕೇಳುವ ಪೊಲೀಸ್ ಅಧಿಕಾರಿಗೆ ಅದನ್ನು ಹಾಜರುಪಡಿಸತಕ್ಕದ್ದು.
 
ವಿಭಾಗ 132 - ಲೈಸೆನ್ಸ.ನ್ನು ಮತ್ತು ನೋಂದಣಿ ಪ್ರಮಾಣ ಪತ್ರವನ್ನು ಹಾಜರುಪಡಿಸುವ ಕರ್ತವ್ಯ

  1. ಮೋಟಾರು ವಾಹನದ ಚಾಲಕನು ಯಾವುದೇ ಸಾರ್ವಜನಿಕ ಸ್ಥಳದಲ್ಲಿ, ಸಮವಸ್ತ್ರದಲ್ಲಿರುವ ಯಾರೇ ಪೊಲೀಸ್ ಅಧಿಕಾರಿಯು ಕೇಳಿದಾಗ ತನ್ನ ಲೈಸನ್ಸ್.ನ್ನು ಪರೀಕ್ಷೆಗಾಗಿ ಹಾಜರುಪಡಿಸ ತಕ್ಕದ್ದು. ಪರಂತು ಚಾಲಕನು ತನ್ನ ಲೈಸನ್ಸ್.ನ್ನು ಈ ಅಧಿನಿಯಮ ಅಥವಾ ಇತರೆ ಯಾವುದೇ ಅಧಿನಿಯಮದ ಮೇರೆಗೆ ಯಾರೇ ಅಧಿಕಾರಿ ಅಥವಾ ಪ್ರಾಧಿಕಾರಿಗೆ ಒಪ್ಪಿಸಿರುವಲ್ಲಿ ಅಥವಾ ಪ್ರಾಧಿಕಾರದಿಂದ ಅದು ಜಪ್ತಿಯಾಗಿರುವಲ್ಲಿ, ಆ ಲೈಸನ್ಸಿಗೆ ಬದಲಾಗಿ ಅದಕ್ಕೆ ಸಂಬಂಧಿಸಿ ಅಂಥ ಅಧಿಕಾರಿ ಅಥವಾ ಪ್ರಾಧಿಕಾರವು ಕೊಟ್ಟ ರಸೀದಿ ಅಥವಾ ಇತರ ಸ್ವೀಕೃತಿಯನ್ನು ಹಾಜರುಪಡಿಸ ಬಹುದು ಮತ್ತು ಆ ತರುವಾಯ ಕೇಂದ್ರ ಸರ್ಕಾರವು ನಿಯಮಿಸಬಹುದಾದಂಥ ಅವಧಿಯೊಳಗೆ ಮತ್ತು ರೀತಿಯಲ್ಲಿ ಲೈಸನ್ಸ್.ನ್ನು ಕೇಳುವ ಪೊಲೀಸ್ ಅಧಿಕಾರಿಗೆ ಅದನ್ನು ಹಾಜರುಪಡಿಸತಕ್ಕದ್ದು.
  2. ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇರುವ ಮೋಟಾರು ವಾಹನದ ನಿರ್ವಾಹಕರು ಯಾರಾದರೂ ಇದ್ದರೆ ಅವರು, ಈ ಬಗ್ಗೆ ಅಧಿಕೃತನಾದ ಮೋಟಾರು ವಾಹನಗಳ ಇಲಾಖೆಯ ಯಾರೇ ಅಧಿಕಾರಿಯು ಕೇಳಿದಾಗ ಲೈಸನ್ಸ್.ನ್ನು ಪರೀಕ್ಷೆಗಾಗಿ ಹಾಜರುಪಡಿಸತಕ್ಕದ್ದು.
  3. 60ನೇ ಪ್ರಕರಣದ ಮೇರೆಗೆ ನೋಂದಾಯಿತವಾದ ವಾಹನಕ್ಕೆ ಹೊರತಾದ ಮೋಟಾರು ವಾಹನದ ಒಡೆಯನು ಅಥವಾ ಅವರ ಗೈರುಹಾಜರಿಯಲ್ಲಿ ಚಾಲಕನು ಅಥವಾ ವಾಹನದ ಪ್ರಭಾರವನ್ನು ಹೊಂದಿರುವ ಇತರ ವ್ಯಕ್ತಿಯು ನೋಂದಣಿ ಪ್ರಾಧಿಕಾರ ಅಥವಾ ಈ ಸಂಬಂಧದಲ್ಲಿ ಮೋಟಾರು ವಾಹನಗಳ ಇಲಾಖೆಯು ಅಧಿಕೃತಗೊಳಿಸಿದ ಇತರ ಯಾರೇ ಅಧಿಕಾರಿಯು ಕೇಳಿದಾಗ, ವಾಹನದ ವಿಮಾ ಪ್ರಮಾಣ ಪತ್ರವನ್ನು ಮತ್ತು ವಾಹನವು ಸಾರಿಗೆ ವಾಹನವಾಗಿರು ವಲ್ಲಿ 56ನೇ ಪ್ರಕರಣದಲ್ಲಿ ಉಲ್ಲೇಖಿಸಲಾದ ಅರ್ಹತಾ ಪ್ರಮಾಣ ಪತ್ರವನ್ನು ಮತ್ತು ಪರ್ಮಿಟ್ಟನ್ನು ಸಹ ಹಾಜರುಪಡಿಸತಕ್ಕದ್ದು; ಮತ್ತು ಯಾವುದೇ ಅಥವ ಎಲ್ಲಾ ಪ್ರಮಾಣ ಪತ್ರಗಳು ಮತ್ತು ಪರ್ಮಿಟ್ಟು ಅವನ ಬಳಿ ಇಲ್ಲದಿದ್ದರೆ, ತಗಾದೆ ಮಾಡಿದ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಅವುಗಳ ಫೋಟೋ ಪ್ರತಿಗಳಿಗೆ ಸೂಕ್ತವಾಗಿ ದೃಢೀಕರಣ ಮಾಡಿಸಿ ಅದನ್ನು ಹಾಜರು ಪಡಿಸುವಂತೆ ತಗಾದೆ ಮಾಡಿದಂಥ ಅಧಿಕಾರಿಗೆ ಖುದ್ದಾಗಿ ಒಪ್ಪಿಸತಕ್ಕದ್ದು ಅಥವಾ ಅದನ್ನು ನೋಂದಾಯಿತ ಅಂಚೆಯ ಮೂಲಕ ಕಳುಹಿಸಿಕೊಡತಕ್ಕದ್ದು.
    ವಿವರಣೆ:- ಈ ಉಪಪ್ರಕರಣದ ಉದ್ದೇಶಗಳಿಗಾಗಿ, "ವಿಮಾ ಪ್ರಮಾಣ ಪತ್ರ'' ಎಂದರೆ 147ನೇ ಪ್ರಕರಣದ (3)ನೇ ಉಪಪ್ರಕರಣದ ಮೇರೆಗೆ ನೀಡಲಾದ ಪ್ರಮಾಣ ಪತ್ರ.
  4. ಸಂದರ್ಭಾನುಸಾರ, (2)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿದ ಲೈಸನ್ಸು ಅಥವಾ (3)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿದ ಪ್ರಮಾಣ ಪತ್ರಗಳು ಅಥವಾ ಪರ್ಮಿಟ್ಟು, ಅವುಗಳನ್ನು ಕೇಳಲಾದ ಸಮಯದಲ್ಲಿ ವ್ಯಕ್ತಿಯ ಸ್ವಾಧೀನದಲ್ಲಿ ಇಲ್ಲದಿದ್ದರೆ, ಅಂಥ ವ್ಯಕ್ತಿಯು ಅದನ್ನು ಕೇಳಿದ ಪೊಲೀಸ್ ಅಧಿಕಾರಿಗೆ ಅಥವಾ ಪ್ರಾಧಿಕಾರಿಗೆ, ಕೇಂದ್ರ ಸರ್ಕಾರವು ನಿಯಮಿಸಬಹುದಾದಂಥ ರೀತಿಯಲ್ಲಿ ಅಂಥ ಅವಧಿಯೊಳಗೆ ಲೈಸನ್ಸು ಅಥವಾ ಪ್ರಮಾಣ ಪತ್ರಗಳು ಅಥವಾ ಪರ್ಮಿಟ್ಟನ್ನು ಹಾಜರುಪಡಿಸಿದರೆ ಅದು ಈ ಪ್ರಕರಣದ ಪಾಲನೆಗೆ ಸಾಕಷ್ಟಾಗಿರತಕ್ಕದ್ದು:
    ಪರಂತು, ನಿಯಮಿಸಬಹುದಾದಷ್ಟು ಮಟ್ಟಿಗೆ ಮತ್ತು ಅಂಥ ಮಾರ್ಪಾಟುಗಳನ್ನುಳಿದು, ಈ ಉಪಪ್ರಕರಣದ ಉಪಬಂಧಗಳು, ಸಾರಿಗೆ ವಾಹನದ ನೋಂದಣಿ ಪ್ರಮಾಣ ಪತ್ರವನ್ನು ಅಥವಾ ಅರ್ಹತಾ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕಾದ ವ್ಯಕ್ತಿಗೆ ಅನ್ವಯವಾಗತಕ್ಕದ್ದಲ್ಲ.
 
ವಿಭಾಗ 132 - ಕೆಲವು ಸಂದರ್ಭಗಳಲ್ಲಿ ವಾಹನವನ್ನು ನಿಲ್ಲಿಸುವುದು ಚಾಲಕನ ಕರ್ತವ್ಯ

  1. ಮೋಟಾರು ವಾಹನದ ಚಾಲಕನು,
    1. (ಎ) ವ್ಯಕ್ತಿಗೆ, ಪ್ರಾಣಿಗೆ ಅಥವಾ ವಾಹನಕ್ಕೆ ಅಪಘಾತ ಉಂಟಾಗಿರುವಲ್ಲಿ ಅಥವಾ ಸ್ವತ್ತಿಗೆ ಹಾನಿ ಸಂಭವಿಸಿರುವಲ್ಲಿ, ಒಂದು ವಾಹನವು ಕಾರಣವಾದ ಸಂದರ್ಭದಲ್ಲಿ ಸಮವಸ್ತ್ರದಲ್ಲಿರುವ ಸಬ್.ಇನ್ಸ್.ಪೆಕ್ಟರ್ ದರ್ಜೆಗಿಂತ ಕಡಿಮೆ ದರ್ಜೆಯವನಲ್ಲದ ಯಾರೇ ಪೊಲೀಸ್ ಅಧಿಕಾರಿಯು ವಾಹನವನ್ನು ಹಾಗೆ ಮಾಡಲು ಅಗತ್ಯಪಡಿಸಿದಾಗ, ಅಥವಾ
    2. (ಬಿ) ಒಂದು ಪ್ರಾಣಿಯನ್ನು ಸ್ವಾಧೀನಲ್ಲಿ ಹೊಂದಿರುವ ಯಾರೇ ವ್ಯಕ್ತಿಯು, ಆ ಪ್ರಾಣಿಯು ವಾಹನದ ಕಾರಣದಿಂದಾಗಿ ಬೆದರಿರುವುದರಿಂದ ಅಥವಾ ಬೆದರಬಹುದಾಗಿರುವುದರಿಂದ ಹತೋಟಿ ತಪ್ಪುವುದೆಂದು ಶಂಕಿಸಿ ವಾಹನವನ್ನು ನಿಲ್ಲಿಸಿ ನಿಶ್ಚಲಗೊಳಿಸಲು ಅಗತ್ಯಪಡಿಸಿದಾಗ;
    3. (ಸಿ) ಆ ವಾಹನವನ್ನು ಅವಶ್ಯವಾಗಬಹುದಾದಷ್ಟು ಯುಕ್ತ ಕಾಲದೊಳಗೆ, ಆದರೆ ಇಪ್ಪತ್ತ ನಾಲ್ಕು ಗಂಟೆಗಳನ್ನು ಮೀರದ ಸಮಯದವರೆಗೆ ಹಾಗೆ ನಿಲ್ಲಿಸಿ ನಿಶ್ಚಲಗೊಳಿಸತಕ್ಕದ್ದು ಮತ್ತು ಅಂಥ ಯಾವುದೇ ಅಪಘಾತ ಅಥವಾ ಹಾನಿಯಿಂದ ಬಾಧಿತನಾದ ಯಾರೇ ವ್ಯಕ್ತಿಯು ಕೇಳಿದರೆ, ಪರಂತು ಅಂಥ ವ್ಯಕ್ತಿಯು ತನ್ನ ಹೆಸರು ಮತ್ತು ವಿಳಾಸಗಳನ್ನು ಒದಗಿಸಿದರೆ, ಅವನಿಗೆ ತನ್ನ ಹೆಸರು, ವಿಳಾಸ ಮತ್ತು ವಾಹನದ ಒಡೆಯನ ಹೆಸರು ಮತ್ತು ವಿಳಾಸವನ್ನು ನೀಡತಕ್ಕದ್ದು.
  2. ಒಬ್ಬವ್ಯಕ್ತಿಯು ತನ್ನ ಹೆಸರು ಮತ್ತು ವಿಳಾಸವನ್ನು ಕೊಟ್ಟು, 184ನೇ ಪ್ರಕರಣದ ಮೇರೆಗೆ ದಂಡನೀಯ ಅಪರಾಧವನ್ನು ಚಾಲಕನು ಮಾಡಿದ್ದಾನೆಂದಯ ಆಪಾದಿಸಿ, ಕೇಳಿದರೆ, ಮೋಟಾರು ವಾಹನದ ಆ ಚಾಲಕನು ಆ ವ್ಯಕ್ತಿಗೆ ತನ್ನ ಹೆಸರು ಮತ್ತು ವಿಳಾಸವನ್ನು ನೀಡತಕ್ಕದ್ದು.
  3. ಈ ಪ್ರಕರಣದಲ್ಲಿ 'ಪ್ರಾಣಿ' ಎಂದರೆ ಕುದುರೆ, ದನ, ಆನೆ, ಒಂಟೆ, ಕತ್ತೆ, ಹೇಸರಗತ್ತೆ, ಕುರಿ ಅಥವಾ ಆಡು.
 
ವಿಭಾಗ 133 - ಮಾಹಿತಿಯನ್ನು ಕೊಡುವುದು ಮೋಟಾರು ವಾಹನದ ಒಡೆಯನ ಕರ್ತವ್ಯ

ಈ ಅಧಿನಿಯಮದ ಮೇರೆಗಿನ ಯಾವುದೇ ಅಪರಾಧಕ್ಕಾಗಿ ಯಾವ ವಾಹನದ ಚಾಲಕ ಅಥವಾ ನಿರ್ವಾಹಕನು ಆಪಾದಿತನಾಗಿರುವನೋ ಆ ಮೋಟಾರು ವಾಹನದ ಒಡೆಯನು, ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಪೊಲೀಸ್ ಅಧಿಕಾರಿಯು ಕೇಳಿದಾಗ, ಚಾಲಕ ಅಥವ ನಿರ್ವಾಹಕನ ಹೆಸರು ಮತ್ತು ವಿಳಾಸದ ಮತ್ತು ಅವನು ಹೊಂದಿದ್ದು, ಅವರ ಸ್ವಾಧೀನ ದಲ್ಲಿರುವ ಲೈಸನ್ಸಿನ ಅಥವಾ ತಾನು ಸೂಕ್ತ ಎಚ್ಚರಿಕೆ ವಹಿಸಿ ಖಚಿತಪಡಿಸಿಕೊಂಡ ಎಲ್ಲಾ ಮಾಹಿತಿಯನ್ನು ನೀಡತಕ್ಕದ್ದು.

ವಿಭಾಗ 134 - ಒಬ್ಬ ವ್ಯಕ್ತಿಗೆ ಅಪಘಾತ ಮತ್ತು ಕ್ಷತಿಯುಂಟಾದ ಸಂದರ್ಭದಲ್ಲಿ ಚಾಲಕನ ಕರ್ತವ್ಯ

ಮೋಟಾರು ವಾಹನವು ಒಳಗಾಗಿರುವ ಅಪಘಾತದ ಪರಿಣಾಮವಾಗಿ ಯಾರೇ ವ್ಯಕ್ತಿಗೆ ಕ್ಷತಿಯುಂಟಾದಾಗ ಅಥವಾ ಆ ವಾಹನದ ಪ್ರಭಾರವನ್ನು ಹೊಂದಿರುವ ಇತರ ವ್ಯಕ್ತಿಯು,

  1. (ಎ) ಅವನ ನಿಯಂತ್ರಣ ಮೀರಿದ ಜನರ ರೋಷದ ನಿಮಿತ್ತ ಅಥವಾ ಇತರ ಯಾವುದೇ ಕಾರಣಕ್ಕಾಗಿ ಕ್ಷತಿಗೊಂಡ ವ್ಯಕ್ತಿಗೆ ವೈದ್ಯಕೀಯ ಉಪಚಾರ ದೊರಕಿಸುವುದು ಸಾಧ್ಯವಾಗದ ಹೊರತು, ಹಾಗೆ ಮಾಡಲು ಎಲ್ಲಾ ಯುಕ್ತ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಮತ್ತು ಕ್ಷತಿಗೊಂಡ ವ್ಯಕ್ತಿ ಅಥವಾ ಅವನು ಅಪ್ರಾಪ್ತ ವಯಸ್ಕನಾಗಿದ್ದರೆ. ಅವನ ಪಾಲಕನು ಅನ್ಯಥಾ ಇಚ್ಛಿಸಿದ ಹೊರತು ಅವನು ಆ ವ್ಯಕ್ತಿಯನ್ನು ಸಮೀಪದ ವೈದ್ಯ ವೃತ್ತಿಗನಲ್ಲಿ ಅಥವಾ ಆಸ್ತತ್ರೆಗೆ ಕರೆದೊಯ್ಯತಕ್ಕದ್ದು ಮತ್ತು ಯಾವುದೇ ಕಾರ್ಯವಿಧಾನದ ಔಪಚಾರಿಕತೆಗಳಿಗೆ ಕಾಯದೆ ಗಾಯಗೊಂಡ ವ್ಯಕ್ತಿಗೆ ತಕ್ಷಣವೇ ಉಪಚರಿಸುವುದು ಮತ್ತು ವೈದ್ಯಕೀಯ ನೆರವು ಅಥವಾ ಚಿಕಿತ್ಸೆ ನೀಡುವುದು ಪ್ರತಿಯೊಬ್ಬ ನೋಂದಾಯಿತ ವೈದ್ಯ ವೃತ್ತಿಗರ ಅಥವಾ ಆಸ್ಪತ್ರೆಯಲ್ಲಿ ಕಾರ್ಯನಿರತ ವೈದ್ಯನ ಕರ್ತವ್ಯವಾಗಿರತಕ್ಕದ್ದು;
  2. (ಬಿ) ಪೊಲೀಸ್ ಅಧಿಕಾರಿಯು ಕೇಳಿದಾಗ, ಅವನಿಗೆ ಬೇಕಾದ ಮಾಹಿತಿಯನ್ನು ಕೊಡತಕ್ಕದ್ದು ಅಥವಾ ಯಾರೇ ಪೊಲೀಸ್ ಅಧಿಕಾರಿ ಅಲ್ಲಿ ಇರದಿದ್ದರೆ, (ಎ) ಖಂಡದ ಮೇರೆಗೆ ಅಗತ್ಯವಾದ ವೈದ್ಯಕೀಯ ಉಪಚಾರ ದೊರಕಿಸಲು ಯುಕ್ತ ಕ್ರಮಗಳನ್ನು ಕೈಗೊಳ್ಳದಿರುವ ಸಂದರ್ಭಗಳು ಯಾವುದಾದರೂ ಇದ್ದರೆ ಅವು ಸೇರಿ ಆ ಘಟನೆಯ ಸನ್ನಿವೇಶಗಳನ್ನು ಸಾಧ್ಯವಿರುವಷ್ಟು ಬೇಗನೆ ಮತ್ತು ಯಾವುದೇ ಸಂದರ್ಭದಲ್ಲಿ ಆ ಘಟನೆಯ 24 ಗಂಟೆಯೊಳಗಾಗಿ ಅತೀ ಸಮೀಪದ ಪೊಲೀಸ್ ಠಾಣೆಗೆ ವರದಿ ಮಾಡತಕ್ಕದ್ದು;
  3. (ಸಿ) ವಿಮಾ ಪ್ರಮಾಣ ಪತ್ರವನ್ನು ನೀಡಿರುವಂಥ ವಿಮಾಕರ್ತನಿಗೆ ಅಪಘಾತ ಸಂಭವಿಸಿದ ಬಗ್ಗೆ ಈ ಕೆಳಕಂಡ ಮಾಹಿತಿಯನ್ನು ಲಿಖಿತದಲ್ಲಿ ನೀಡತಕ್ಕದ್ದು, ಎಂದರೆ:-
    1. ವಿಮಾ ಪಾಲಿಸಿಯ ಸಂಖ್ಯೆ ಮತ್ತು ಅದು ಸಿಂಧುವಾಗಿರುವ ಅವಧಿ;
    2. ಅಪಘಾತ ನಡೆದ ದಿನಾಂಕ, ಸಮಯ ಮತ್ತು ಸ್ಥಳ;
    3. ಅಪಘಾತದಲ್ಲಿ ಗಾಯಗೊಂಡ ಅಥವಾ ಮೃತ ವ್ಯಕ್ತಿಗಳ ವಿವರಗಳು;
    4. ಚಾಲಕನ ಹೆಸರು ಮತ್ತು ಅವನ ಚಾಲನೆ ಲೈಸನ್ಸಿನ ವಿವರಗಳು. ವಿವರಣೆ:- ಈ ಪ್ರಕರಣದ ಉದ್ದೇಶಗಳಿಗಾಗಿ "ಚಾಲಕ'' ಎಂಬ ಪದವು ವಾಹನದ ಒಡೆಯನನ್ನು ಒಳಗೊಳ್ಳುತ್ತದೆ.
    5. c
 
ವಿಭಾಗ 136 - ಅಪಘಾತಕ್ಕೀಡಾದ ವಾಹನದ ಪರಿಶೀಲನೆ

ಮೋಟಾರು ವಾಹನವು ಒಳಗಾಗಿರುವ ಯಾವುದೇ ಅಪಘಾತ ಸಂಭವಿಸಿದಾಗ, ರಾಜ್ಯ ಸರ್ಕಾರವು ಈ ಸಂದರ್ಭದಲ್ಲಿ ಅಧಿಕೃತಗೊಳಿಸಿದ ಯಾರೇ ವ್ಯಕ್ತಿಯು, ಅಗತ್ಯಪಡಿಸಿದಾಗ ತನ್ನ ಅಧಿಕಾರ ಪತ್ರವನ್ನು ತೋರಿಸಿ, ವಾಹನವನ್ನು ಪರಿಶೀಲಿಸಬಹುದು ಮತ್ತು ಆ ಉದ್ದೇಶಕ್ಕಾಗಿ ಯಾವುದೇ ಯುಕ್ತ ಸಮಯದಲ್ಲಿ ವಾಹನವಿರ ಬಹುದಾದ ಯಾವುದೇ ಆವರಣವನ್ನು ಪ್ರವೇಶಿಸಬಹುದು ಮತ್ತು ಪರಿಶೀಲನೆಗಾಗಿ ಆ ವಾಹವನ್ನು ಸ್ಥಳಾಂತರಿಸಬಹುದು:

ಪರಂತು, ಆ ವಾಹನವನ್ನು ಹಾಗೆ ಸ್ಥಳಾಂತರಿಸಲಾದ ಸ್ಥಳದ ವಾಹನದ ಒಡೆಯನಿಗೆ ತಿಳಿಸತಕ್ಕದ್ದು ಮತ್ತು ಆ ವಾಹನವನ್ನು ಇಪ್ಪತ್ತನಾಲ್ಕು ಗಂಟೆಯೊಳಗೆ ವಾಹನದ ಒಡೆಯನಿಗೆ, ಚಾಲಕನಿಗೆ ಅಥವಾ ಪ್ರಭಾರದಲ್ಲಿರುವ ವ್ಯಕ್ತಿಗೆ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ತರುವಾಯ ಹಿಂದಿರುಗಿಸತಕ್ಕದ್ದು.

ವಿಭಾಗ 153 - ಕೆಲವು ಪ್ರಕರಣಗಳಲ್ಲಿ ಕೆಲವು ಪ್ರಮಾಣ ಪತ್ರಗಳು, ಲೈಸನ್ಸು ಮತ್ತು ಪರ್ಮಿಟ್ಟುಗಳನ್ನು ಹಾಜರುಪಡಿಸುವುದು

ವಿಭಾಗ 203 - ಉಸಿರು ಪರೀಕ್ಷೆ

ವಿಭಾಗ 204 - ಪ್ರಯೋಗಶಾಲಾ ಪರೀಕ್ಷೆ

ವಿಭಾಗ 205 - ಓಡಿಸಲು ಅನರ್ಹತೆ ಭಾವನೆ .

ವಾಹನ ನಡೆಸಲು ಅಸಮರ್ಥತೆಯ ಬಗ್ಗೆ ಪೂರ್ವಭಾವನೆ, 185ನೇ ಪ್ರಕರಣದ ಮೇರೆಗೆ ದಂಡನೀಯವಾದ ಯಾವುದೊಂದು ಅಪರಾಧದ ಬಗೆಗಿನ ಯಾವುದೇ ವ್ಯವಹಾರಣೆಯಲ್ಲಿ ಆಪಾದಿತನು ಉಸಿರಾಟದ ಪರೀಕ್ಷೆಗಾಗಿ ಅವನ ಉಸಿರಿನ ಮಾದರಿಯನ್ನು ಅಥವಾ ಪ್ರಯೋಗಶಾಲಾ ಪರೀಕ್ಷೆಗಾಗಿ ಅವನ ರಕ್ತದ ಮಾದರಿಯನ್ನು ತೆಗೆದುಕೊಳ್ಳಲು ಅಥವಾ ಒದಗಿಸಲು ಯಾವುದೇ ಸಮಯದಲ್ಲಿ ಪೊಲೀಸ್ ಅಧಿಕಾರಿಯು ಸಮ್ಮತಿ ನೀಡುವಂತೆ ಕೋರಿದಾಗ, ಹಾಗೆ ಮಾಡಲು ನಿರಾಕರಿಸಿದರೆ, ಲೋಪಿಸಿದರೆ ಅಥವಾ ತಪ್ಪಿದರೆ ಅವನ ನಿರಾಕರಣೆ ಲೋಪ ಅಥವಾ ತಪ್ಪುವಿಕೆಗೆ ಸಮಂಜಸವಾದ ಕಾರಣವನ್ನು ಕೊಟ್ಟೆ ಹೊರತು ಅದು ಆ ಸಮಯದಲ್ಲಿ ಅವನ ಸ್ಥಿತಿಗೆ ಸಂಬಂಧಿಸಿ ಪ್ರಾಸಿಕ್ಯೂಷನ್ ಪರವಾಗಿ ಕೊಟ್ಟ ಯಾವುದೇ ಸಾಕ್ಷ್ಯವನ್ನು ಸಮರ್ಥಿಸುವ ಅಥವಾ ಪರವಾಗಿ ಕೊಟ್ಟ ಯಾವುದೇ ಸಾಕ್ಷ್ಯವನ್ನು ಕಂಡಿಸುವ ಪರಿಸ್ಥಿತಿಯಾಗಿರುವುದಾಗಿ ಪೂರ್ವಭಾವನೆ ವಾಡತಕ್ಕದ್ದು.

ವಿಭಾಗ 206 - ಪೊಲೀಸದಸ್ತಾವೇಜನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಯ ಅಧಿಕಾರ

ನೋಂದಣಿ ಪ್ರಮಾಣ ಪತ್ರ, ಪರ್ಮಿಟ್ಟು ಇತ್ಯಾದಿಗಳು ಇಲ್ಲದೇ ಉಪಯೋಗಿಸಲಾದ ವಾಹನಗಳನ್ನು ತಡೆಹಿಡಿದಿಡುವ, ಅಧಿಕಾರ

  1. ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮೋಟಾರು ವಾಹನವನ್ನು ನಡೆಸುವ ಯಾರೇ ವ್ಯಕ್ತಿಯು, ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯು ವಾಹನ ಉಪಯೋಗಕ್ಕೆ ಸಂಬಂಧಿಸಿದ,
    1. ವಿಮಾ ಪ್ರಮಾಣ ಪತ್ರ;
    2. ನೋಂದಣಿ ಪ್ರಮಾಣ ಪತ್ರ;
    3. ಚಾಲನ ಲೈಸನ್ಸು; ಮತ್ತು
    4. ಸಾರಿಗೆ ವಾಹನದ ಸಂಬಂಧದಲ್ಲಿ, 56ನೇ ಪ್ರಕರಣದಲ್ಲಿ ಉಲ್ಲೇಖಿಸಿದ ಅರ್ಹತಾ ಪ್ರಮಾಣ ಪತ್ರವನ್ನು ಮತ್ತು ಪರ್ಮಿಟ್ಟನ್ನು ಹಾಜರುಪಡಿಸತಕ್ಕದ್ದು.
  2. ಸಾರ್ವಜನಿಕ ಸ್ಥಳದಲ್ಲಿ ಮೋಟಾರು ವಾಹನವು ಇರುವ ಕಾರಣದಿಂದ, ಇನ್ನೊಬ್ಬ ವ್ಯಕ್ತಿಯ ಮರಣ ಅಥವಾ ದೈಹಿಕ ಕ್ಷತಿಯನ್ನೊಳಗೊಂಡ ಅಪಘಾತವು ಸಂಭವಿಸಿದಲ್ಲಿ, ವಾಹನದ ಚಾಲಕನು ಆ ಸಮಯದಲ್ಲಿ (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿದ ಪ್ರಮಾಣ ಪತ್ರಗಳು. ಚಾಲನ ಲೈಸನ್ಸು ಮತ್ತು ಪರ್ಮಿಟ್ಟು ಇವುಗಳನ್ನು ಪೊಲೀಸ್ ಅಧಿಕಾರಿಗೆ ಹಾಜರುಪಡಿಸದಿದ್ದರೆ, ಅವನು 134ನೇ ಪ್ರಕರಣದ ಮೂಲಕ ಅಗತ್ಯಪಡಿಸಲಾದ ವರದಿಯನ್ನು ಯಾವ ಪೊಲೀಸ್ ಠಾಣೆಯಲ್ಲಿ ಮಾಡುವನೋ ಅಲ್ಲಿ ಸದರಿ ಪ್ರಮಾಣ ಪತ್ರಗಳು, ಲೈಸನ್ಸು ಮತ್ತು ಪರ್ಮಿಟ್ಟು ಇವುಗಳನ್ನು ಹಾಜರುಪಡಿಸತಕ್ಕದ್ದು.

    ವಿಭಾಗ 200 - ಕೆಲವು ಅಪರಾಧಗಳ ಬಗ್ಗೆ

    ವಿಭಾಗ 202 - ವಾರೆಂಟಿಲ್ಲದೆ ದಸ್ತಗಿರಿ ಮಾಡುವ ಅಧಿಕಾರ

      1. - (1) 177ನೇ ಪ್ರಕರಣ, 178ನೇ ಪ್ರಕರಣ , 179ನೇ ಪ್ರಕರಣ, 180ನೇ ಪ್ರಕರಣ, 181ನೇ ಪ್ರಕಣ, 182ನೇ ಪ್ರಕರಣ, 183ನೇ ಪ್ರಕರಣದ (1)ನೇ ಉಪಪ್ರಕರಣ ಅಥವಾ (2)ನೇ ಉಪಪ್ರಕರಣ, 184ನೇ ಪ್ರಕರಣ, 186ನೇ ಪ್ರಕರಣ, 189ನೇ ಪ್ರಕರಣ , 190ನೇ ಪ್ರಕರಣದ (2)ನೇ ಉಪಪ್ರಕರಣ , 191ನೇ ಪ್ರಕರಣ, 192ನೇ ಪ್ರಕರಣ, 194ನೇ ಪ್ರಕರಣ, 196ನೇ ಪ್ರಕರಣ, ಅಥವಾ 198ನೇ ಪ್ರಕರಣದ ಮೇರಗೆ ದಂಡನೀಯವಾಗಿದ್ದು ಅಧಿನಿಯಮದ ಪ್ರಾರಂಭಕ್ಕೆ ಮುಂಚೆಯಾಗಲಿ ಅಥವಾ ಆ ತರುವಾಯವಾಗಲಿ ಎಸಗಲ್ಪಟ್ಟಿರುವ ಯಾವುದೇ ಅಪರಾಧದ ಸಂಬಂಧದಲ್ಲಿ ಪ್ರಾಸಿಕ್ಯೂಷನ್ನನ್ನು ಹೂಡುವುದಕ್ಕೆ ಮುಂಚೆಯೇ ಅಥವಾ ತರುವಾಯ ರಾಜ್ಯ ಸಕ೵ರವು ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಸಂಬಂಧದಲ್ಲಿ ನಿರ್ದಿಷ್ಟ ಪಡಿಸಬಹುದಾದಂಥ ಅಧಿಕಾರಿಗಳು ಅಥವಾ ಪ್ರಾಧಿಕಾರಗಳು ಅಂಥ ಮೊಬಲಗಿಗೆ ರಾಜಿ ಮಾಡಿಕೊಳ್ಳಬಹುದು.
      2. (1)ನೇ ಪ್ರಕರಣ ದ ಮೇರೆಗೆ ಅಪರಾಧದ ಸಂಬಂಧದಲ್ಲಿ ರಾಜಿ ಮಾಡಿಕೊಂಡಿರುವಲ್ಲಿ ಅಪರಾಧಿಯು ಅಭಿರಕ್ಷೆಯಲ್ಲಿದ್ದರೆ, ಅವನನ್ನು ಬಿಡುಗಡೆ ಮಾಡತಕ್ಕದ್ದು ಮತ್ತು ಅಂಥ ಅಪರಾಧಕ್ಕೆ ಸಂಬಂಧಿಸ ಅವನ ವಿರುದ್ದ ಆ ತರುವಾಯ ಯಾವುದೇ ವ್ಯವಹರಣೆಯನ್ನು ಕೈಗೊಳ್ಳತಕ್ಕದ್ದಲ್ಲ.
      1. (1) 177ನೇ ಪ್ರಕರಣ, 178ನೇ ಪ್ರಕರಣ , 179ನೇ ಪ್ರಕರಣ, 180ನೇ ಪ್ರಕರಣ, 181ನೇ ಪ್ರಕಣ, 182ನೇ ಪ್ರಕರಣ, 183ನೇ ಪ್ರಕರಣದ (1)ನೇ ಉಪಪ್ರಕರಣ ಅಥವಾ (2)ನೇ ಉಪಪ್ರಕರಣ, 184ನೇ ಪ್ರಕರಣ, 186ನೇ ಪ್ರಕರಣ, 189ನೇ ಪ್ರಕರಣ , 190ನೇ ಪ್ರಕರಣದ (2)ನೇ ಉಪಪ್ರಕರಣ , 191ನೇ ಪ್ರಕರಣ, 192ನೇ ಪ್ರಕರಣ, 194ನೇ ಪ್ರಕರಣ, 196ನೇ ಪ್ರಕರಣ, ಅಥವಾ 198ನೇ ಪ್ರಕರಣದ ಮೇರಗೆ ದಂಡನೀಯವಾಗಿದ್ದು ಅಧಿನಿಯಮದ ಪ್ರಾರಂಭಕ್ಕೆ ಮುಂಚೆಯಾಗಲಿ ಅಥವಾ ಆ ತರುವಾಯವಾಗಲಿ ಎಸಗಲ್ಪಟ್ಟಿರುವ ಯಾವುದೇ ಅಪರಾಧದ ಸಂಬಂಧದಲ್ಲಿ ಪ್ರಾಸಿಕ್ಯೂಷನ್ನನ್ನು ಹೂಡುವುದಕ್ಕೆ ಮುಂಚೆಯೇ ಅಥವಾ ತರುವಾಯ ರಾಜ್ಯ ಸಕ೵ರವು ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಸಂಬಂಧದಲ್ಲಿ ನಿರ್ದಿಷ್ಟ ಪಡಿಸಬಹುದಾದಂಥ ಅಧಿಕಾರಿಗಳು ಅಥವಾ ಪ್ರಾಧಿಕಾರಗಳು ಅಂಥ ಮೊಬಲಗಿಗೆ ರಾಜಿ ಮಾಡಿಕೊಳ್ಳಬಹುದು.
      2. (2) (1)ನೇ ಪ್ರಕರಣ ದ ಮೇರೆಗೆ ಅಪರಾಧದ ಸಂಬಂಧದಲ್ಲಿ ರಾಜಿ ಮಾಡಿಕೊಂಡಿರುವಲ್ಲಿ ಅಪರಾಧಿಯು ಅಭಿರಕ್ಷೆಯಲ್ಲಿದ್ದರೆ, ಅವನನ್ನು ಬಿಡುಗಡೆ ಮಾಡತಕ್ಕದ್ದು ಮತ್ತು ಅಂಥ ಅಪರಾಧಕ್ಕೆ ಸಂಬಂಧಿಸ ಅವನ ವಿರುದ್ದ ಆ ತರುವಾಯ ಯಾವುದೇ ವ್ಯವಹರಣೆಯನ್ನು ಕೈಗೊಳ್ಳತಕ್ಕದ್ದಲ್ಲ.
      1. ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಯು 184ನೇ ಪ್ರಕರಣ ಅಥವಾ 185ನೇ ಪ್ರಕರಣದ ಅಥವಾ 197ನೇ ಪ್ರಕರಣದ ಮೇರೆಗೆ ದಂಡನೀಯವಾದ ಅಪರಾಧವನ್ನು ತನ್ನ ಸಮುಕ್ಷಮದಲ್ಲಿ ಮಾಡುವ ಯಾರೇ ವ್ಯಕ್ತಿಯನ್ನು ವಾರೆಂಟಿಲ್ಲದೇ ದಸ್ತಗಿರಿ ಮಾಡಬಹುದು. ಪರಂತು, 185ನೇ ಪ್ರಕರಣದ ಮೇರೆಗೆ ದಂಡನೀಯವಾದ ಅಪರಾಧದ ಸಂಬಂಧದಲ್ಲಿ ದಸ್ತಗಿರಿ ಮಾಡಲ್ಪಟ್ಟ ಯಾರೇ ವ್ಯಕ್ತಿಯನ್ನು ಅವನ ದಸ್ತಗಿರಿಯ ಎರಡು ಗಂಟೆಗಳೊಳಗೆ ನೋಂದಾರಯಿ ವೈದ್ಯಕೀಯ ವೃತ್ತಿಗನಿಂದ 203ನೇ ಮತ್ತು 204ನೇ ಪ್ರಕರಣಗಳಲ್ಲಿ ಉಲ್ಲೇಖಿಸಿರುವ ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸತಕ್ಕದ್ದು ಅದಕ್ಕೆ ತಪ್ಪಿದಲ್ಲಿ ಅವನನ್ನು ಆಭಿರಕ್ಷೆಯಿಂದ ಬಿಡುಗಡೆ ಮಾಡತಕ್ಕದ್ದು.
      2. ಈ ಅಧಿನಿಯಮದ ಮೇರೆಗಿನ ಅಪರಾಧವನ್ನು ಮಾಡುವ ಯರೇ ವ್ಯಕ್ತಿಯು ತನ್ನ ಹೆಸರು ಮತ್ತು ವಿಳಾಸವನ್ನು ನೀಡಲು ನಿರಾಕರಿಸಿದರೆ, ಅಂಥ ವ್ಯಕ್ತಿಯನ್ನು ಸಮವಸ್ತ್ರದಲ್ಲಿರುವ ಪೊಲೀಸು ಅಧಿಕಾರಿಯು ವಾರೆಂಟಿಲ್ಲದೆ ಬಂಧಿಸಬಹುದು.
      3. ಮೋಟಾರು ವಾಹನ ಚಾಲಕನನ್ನು ವಾರೆಂಟಿಲ್ಲದೆ ದಸ್ತಗಿರಿ ಮಾಡುವ ಪೊಲೀಸ್ ಅಧಿಕಾರಿಯು, ವಾಹನವನ್ನು ತಾತ್ಕಾಲಿಕ ವಲೆ ಮಾಡಲು ತಾನು ಸೂಕ್ತವೆಂದು ಭಾವಿಸಬಹುದಾದಂಥ ಯಾವುದೇ ಕ್ರಮಗಳನ್ನು ಕೈಗೊಳ್ಳುವುದನ್ನು ಅಥವಾ ಕೈಗೊಳ್ಳುವಂತೆ ಮಾಡುವುದನ್ನು ಪರಿಸ್ಥಿತಿಗಳು ಅಗತ್ಯಪಡಿಸಿದರೆ, ಹಾಗೆ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಅಥವಾ ಕೈಗೊಳ್ಳುವಂತೆ ಮಾಡತಕ್ಕದ್ದು.
    1. ಸಮವಸ್ತ್ರದಲ್ಲಿರುವ ಪೊಲೀಸು ಅಧಿಕಾರಿಗೆ ಅಥವಾ ಮೋಟಾರು ವಾಹನಗಳ ಇಲಾಖೆಯು ಈ ಬಗ್ಗೆ ಅಧಿಕೃತಗೊಳಿಸಬಹುದಾದ ಾ ಇಲಾಖೆಯ ಅಧಿಕಾರಿಗೆ ಸಾರ್ವಜನಿಕ ಸ್ಥಳದಲ್ಲಿ ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ಻ಥವಾ ಚಾಲನೆ ಮಾಡಲು ಪ್ರಯತ್ನಿಸುತ್ತಿರುವ ಯಾರೇ ವ್ಯಕ್ತಿಯು 185ನೇ ಪ್ರಕರಣದ ಮೇರೆಗೆ ದಂಡನೀಯವಾದ ಅಪರಾಧವನ್ನು ಮಾಡಿದ್ದಾನೆ ಎಂದು ಶಂಕಿಸಲು ಅಂಥ ಪೊಲೀಸು ಅಧಿಕಾರಿಗೆ ಅಥವಾ ಅಧಿಕಾರಿಗೆ ಯಾವುದೇ ಮುಕ್ತ ಕಾರಣವಿದ್ದರೆ ಆ ವ್ಯಕ್ತಿಯನ್ನು ಅಲ್ಲಿಯೇ ಅಥವಾ ಅಲ್ಲಿಗೆ ಸಮೀಪದಲ್ಲಿ ಉಸಿ ರು ಪರೀಕ್ಷೆಗಾಗಿ ಉಸಿರಾಟದ ಒಂದು ಅಥವಾ ಹೆಚ್ಚು ಮಾದರಿಗಳನ್ನು ಒದಗಿಸುವಂತೆ ಅಗತ್ಯಪಡಿಸಬಹುದು.

      ಪರಂತು, ಅಂಥ ಅಪರಾಧವನ್ನು ಮಾಡಿದ ಮೇಲೆ ಯುಕ್ತವಾಗಿ ಸಾಧ್ಯವಾದದಷ್ಟು ಬೇಗನ ಉಸಿರಾಟದ ಪರೀಕ್ಷೆಯನ್ನು ಅಗತ್ಯಪಡಿಸಿದ ಹೊರತು ಆ ಉಸಿರಾಟದ ಪರೀಕ್ಷೆಗಾಗಿ ಮಾದರಿಗಳನ್ನು ಒದಗಿಸುವಂತೆ ಅಗತ್ಯಪಡಿಸತಕ್ಕದ್ದಲ್ಲ.

    2. ಸಾರ್ವಜನಿಕ ಸ್ಥಳದಲ್ಲಿ ಉಂಟಾದ ಅಪಘಾತದಲ್ಲಿ ಮೋಟಾರು ವಾಹನವು ಒಳಗೊಂಡಿದ್ದರೆ ಮತ್ತು ಅಪಘಾತದ ಸಮಯದಲ್ಲಿ ಮೋಟಾರು ವಾಹನವನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಯು ಅವನ ರಕ್ತದಲ್ಲಿ ಮದ್ಯಸಾರವಿತ್ತೆಂದು ಅಥವಾ 185ನೇ ಪ್ರಕರಣದಲ್ಲಿ ಉಲ್ಲೇಖಿಸಲಾದ ಔಷಧದ ಪ್ರಭಾವದಲ್ಲಿದ್ದು ವಾಹನವನ್ನು ಚಾಲನೆ ಮಾಡುತ್ತಿದ್ಅನೆಂದು, ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗೆ ಸಂಶಯಪಡಲು ಯುಕ್ತ ಕಾರಣವಿದ್ದರೆ, ಅವನು ಹಾಗೆ ವಾಹನ ಚಾಲನೆ ಮಾಡುತ್ತಿರುವ ವ್ಯಕ್ತಿಯನ್ನು:
      1. (ಎ) ಆ ವ್ಯಕ್ತಿಯು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವ ಸಂದರ್ಭದಲ್ಲಿ ಆಸ್ಪತ್ರಯಲ್ಲಿ
      2. (ಬಿ) ಯಾರೆ ಇತರೆ ವ್ಯಕ್ತಿಯ ಸಂದರ್ಭದಲ್ಲಿ ಯಾವ ಸ್ಥಳದಲ್ಲಿ ಹಾಗೆ ಅಗತ್ಯಪಡಿಸಲಾಯಿತೋ ಆ ಸ್ಥಳದಲ್ಲಿ ಅಥವಾ ಅದಕ್ಕೆ ಸಮೀಪದಲ್ಲಿ ಅಥವಾ ಪೊಲೀಸು ಅಧಿಕಾರಿಯು ಯುಕ್ತ ಎಂದು ಭಾವಿಸಿದಲ್ಲಿ ಆ ಪೊಲೀಸ್ ಅಧಿಕಾರಿಯು ನಿರ್ದಿಷ್ಟಪಡಿಸಿದ ಪೊಲೀಸ್ ಠಾಣೆಯಲ್ಲಿ.

        ಉಸಿರಾಟದ ಪರೀಕ್ಷೆಗಾಗಿ ಉಸಿರಿನ ಮಾದರಿಗಳನ್ನು ಒದಗಿಸಲು ಅಗತ್ಯಪಡಿಸಹುದು:

        ಪರಂತು, ಆ ವ್ಯಕ್ತಿಯು ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವಾಗ ಅವನ ಶುಶ್ರೂಷೆಯ ನಿಕಟ ಮೇಲ್ವಿಚಾರಣೆಯನ್ನು ಹೊಂದಿರುವ ನೋಂದಾಯಿತ ವ್ಯೆದ್ಯ ವೃತ್ತಿಗಾರನಿಗೆ ಅಂಥ ಅಗತ್ಯತೆಯ ಪ್ರಸ್ತಾವವನ್ನು ಮೊದಲು ತಿಳಿಸದಿದಲ್ಲಿ ಅಥವಾ ವ್ಯೆದ್ಯ ವೃತ್ತಿಗಾರನು ರೋಗಿಯ ಉಸಿರಾಟದ ಮಾದರಿಯನ್ನು ಒದಗಿಸುವುದರಿಂದ ಅದನ್ನು ಒದಗಿಸುವಂತೆ ಅಗತ್ಯ ಪಡಿಸುವುದರಿಂದ ರೋಗಿಯ ಯುಕ್ತ ಆರೈಕ್ಕೆ ಅಥವಾ ಶಶ್ರೂಷೆಗೆ ಬಾಧಕವುಂಟಾಗುವುದೆಂಬ ಕಾರಣದ ಮೇಲೆ ಅಂಥ ಮಾದರಿಯನ್ನು ಒದಗಿಸುವುದಕ್ಕೆ ಆಕ್ಷೇಪಿಸಿದರೆ ಅವನನ್ನು ಅಂಥ ಮಾದರಿಯನ್ನು ಒದಗಿಸಲು ಅಗತ್ಯಪಡಿಸತಕ್ಕದಲ್ಲ.

    3. ಸಮವಸ್ತ್ರದಲ್ಲಿರುವ ಪೊಲೀಸು ಅಧಿಕಾರಿಗೆ (1)ನೇ ಉಪಪ್ರಕರಣ ಆಥವಾ (2)ನೇ ಉಪಪ್ರಕರಣದ ಮೇರೆಗೆ ತಾನು ನಡೆಸಿದ ಯಾರೇ ವ್ಯಕ್ತಿಯ ಉಸಿರಾಟದ ಪರೀಕ್ಷೆಯ ಪರಿಣಾಮವಾಗಿ ಯಾವ ಸಾಧನದಿಂದ ಪರೀಕ್ಷೆ ನಡೆಸಲಾಯಿತೋ ಆ ಸಾಧನವು ಆ ವ್ಯಕ್ತಿಯ ರಕ್ತದಲ್ಲಿ ಮಧ್ಯಸಾರ ಇರುವುದನ್ನು ಸೂಚಿಸುತ್ತದೆ ಎಂದು ಕಂಡುಬಂದರೆ, ಆ ಪೊಲೀಸ್ ಅಧಿಕಾರಿಯು ಆ ವ್ಯಕ್ತಿಯನ್ನು ಅವನು ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದಾಗ ಹೊರತು ವಾರೆಂಟಿಲ್ಲದೆ ದಸ್ತಗಿರಿ ಮಾಡಬಹುದು.
    4. (1)ನೇ ಉಪಪ್ರಕರಣದ ಅಥವಾ (2)ನೇ ಉಪಪ್ರಕರಣದ ಮೇರೆಗೆ ಉಸಿರಾಟದ ಪರೀಕ್ಷೆಗೆ ಉಸಿರಿನ ಮಾದರಿಯನ್ನು ಒದಗಿಸಲು ಪೊಲೀಸ್ ಅಧಿಕಾರಿಯು ಅಗತ್ಯಪಡಿಸಿದ ವ್ಯಕ್ತಿಯು ಹಾಗೆ ಮಾಡಲು ನಿರಾಕರಿಸಿದರೆ ಅಥವಾ ತಪ್ಪಿದರೆ ಮತ್ತು ಪೊಲೀಸ್ ಅಧಿಕಾರಿಗೆ ಅವನ ರಕ್ತದಲ್ಲಿ ಮದ್ಯಸಾರವಿದೆ ಎಂದು ಸಂಶಯಪಡಲು ಯಕ್ತ ಕಾರಣವಿದ್ದರೆ, ಪೊಲೀಸ್ ಅಧಿಕಾರಿಯು ಆ ವ್ಯಕ್ತಿಯನ್ನು ಅವನು ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದಾಗ ಹೊರತು, ವಾರೆಂಟಿಲ್ಲದೆ ದಸ್ತಗಿರಿ ಮಾಡಬಹುದು.
    5. ಈ ಪ್ರಕರಣ ಮೇರೆಗೆ ದಸ್ತಗಿರಿ ಮಾಡಿದ ವ್ಯಕ್ತಿಗೆ, ಅವನು ಪೊಲೀಸ್ ರಾಣೆಯಲ್ಲಿರುವಾಗ ಅಲ್ಲಿ ಉಸಿರಾಟದ ಪರೀಕ್ಷೆಗಾಗಿ ಉಸಿರಿನ ಮಾದರಿಯನ್ನು ಒದಗಿಸಲು ಅವಕಾಶ ನೀಡತಕ್ಕದ್ದು.
    6. ಈ ಪ್ರಕರಣದ ಉಪಬಂಧಗಳಿಗನುಸಾರವಾಗಿ ಮಾಡಿದ ಉಸಿರಾಟದ ಪರೀಕ್ಷೆಯ ಫಲಿತಾಂಶಗಳು ಸಾಕ್ಷ್ಯದಲ್ಲಿ ಸ್ವೀಕಾರಾರ್ಹವಾಗಿರತಕ್ಕದ್ದು.

      ವಿವರಣೆ : ಈ ಪ್ರಕರಣದ ಉದ್ದೇಶಗಳಿಗಾಗಿ " ಉಸಿರಾಟದ ಪರೀಕ್ಷೆ" ಎಂದರೆ ಒಬ್ಬ ವ್ಯಕ್ತಿಯ ರಕ್ತದಲ್ಲಿ ಮದ್ಯಸಾರ ಇರುವುದರ ಸೂಚನೆಯನ್ನು ಪಡೆಯುವ ಉದ್ದೇಶಕ್ಕಾಗಿ, ಆ ವ್ಯಕ್ತಿಯು ಒದಗಿಸಿದ ಒಂದು ಅಥವಾ ಹೆಚ್ಚಿನ ಉಸಿರಾಟದ ಮಾದರಿಗಳ ಮೇಲೆ ಅಂಥ ಪರೀಕ್ಷೆಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಅನುಮೋದಿಸಿದ ಪ್ರಕಾರದ ಸಾಧನದ ಮೂಲಕ ನಡೆಸಲಾಗುವ ಪರೀಕ್ಷೆ.

    1. 203ನೇ ಪ್ರಕರಣದ ಮೇರೆಗೆ ದಸ್ತಗಿರಿ ಮಾಡಿದ ವ್ಯಕ್ತಿಯನ್ನು ಅವನು ಪೊಲೀಸು ಠಾಣೆಯಲ್ಲಿರುವಾಗ:
      1. (ಎ) ಅಂಥ ವ್ಯಕ್ತಿಯ ಸಂಬಂಧದಲ್ಲಿ ಉಸಿರು ಪರೀಕ್ಷೆಗೆ ಬಳಸಲಾದ ಸಾಧನವು ಆ ವ್ಯಕ್ತಿಯ ರಕ್ತದಲ್ಲಿ ಮದ್ಯಸಾರ ಇರುವುದನ್ನು ಸೂಚಿಸುತ್ತದೆ ಎಂದು ಪೊಲೀಸು ಅಧಿಕಾರಿಗೆ ಕಂಡುಬಂದರೆ ಅಥವಾ,
      2. (ಬಿ) ಅಂಥ ವ್ಯಕ್ತಿಗೆ ಉಸಿರಾಟದ ಪರೀಕ್ಷೆಗೆ ಒಳಗಾಗಲು ಅವಕಾಶ ಕೊಟ್ಟಿರುವಾಗ ಅವನು ಹಾಗೆ ಮಾಡಲು ನಿರಾಕರಿಸಿದರೆ, ಲೋಪಿಸಿದರೆ ಅಥವಾ ತಪ್ಪಿದರೆ.
      ಪೊಲೀಸು ಅಧಿಕಾರಿಯು ಹಾಜರುಪಡಿಸಬಹುದಾದ ನೋಂದಾಯಿತ ವೈದ್ಯ ವೃತ್ತಿಗ಻ರನಿಗೆ ಪ್ರಯೋಗ ಶಾಲೆಯ ಪರೀಕ್ಷೆಗಾಗಿ ಅವನ ರಕ್ತದ ಮಾದರಿಯನ್ನು ಒದಗಿಸುವಂತೆ ಪೊಲೀಸು ಅಧಿಕಾರಿಯು ಅಗತ್ಯಪಡಿಸಬಹುದು

      ಪೊಲೀಸು ಅಧಿಕಾರಿಯು ಹಾಜರುಪಡಿಸಬಹುದಾದ ನೋಂದಾಯಿತ ವೈದ್ಯ ವೃತ್ತಿಗ಻ರನಿಗೆ ಪ್ರಯೋಗ ಶಾಲೆಯ ಪರೀಕ್ಷೆಗಾಗಿ ಅವನ ರಕ್ತದ ಮಾದರಿಯನ್ನು ಒದಗಿಸುವಂತೆ ಪೊಲೀಸು ಅಧಿಕಾರಿಯು ಅಗತ್ಯಪಡಿಸಬಹುದು.

      ಪರಂತು, ಅಂಥ ಮಾದರಿಯನ್ನು ಒದಗಿಸಲು ಅಗತ್ಯಪಡಿಸಲಾದ ವ್ಯಕ್ತಿಯು ಮಹಿಳೆಯಾಗಿರುವಲ್ಲಿ ಮತ್ತು ಅಂಥ ಪೊಲೀಸು ಅಧಿಕಾರಿಯು ಹಾಜರುಪಡಿಸಿದ ನೋಂದಾಯಿತ ವೈದ್ಯ ವೃತ್ತಿಗಾರನು ಪುರುಷ ವೈದ್ಯ ವೃತ್ತಿಗಾರನಾಗಿದ್ದರೆ, ವೈದ್ಯ ವೃತ್ತಿಗಾರನಾಗಿರುವ ಅಥವಾ ಅಲ್ಲದ ಮಹಿಳೆಯ ಸಮಕ್ಷಮದಲ್ಲಿ ಮಾತ್ರ ಮಾದರಿಯನ್ನು ತೆಗೆದುಕೊಳ್ಳತಕ್ದದ್ದು.

    2. ಒಬ್ಬ ವ್ಯಕ್ತಿಯನ್ನು ಅವನು ಒಳರೋಗಿಯಾಗಿ ಆಸ್ಪತ್ರಯಲ್ಲಿರುವಾಗ
      1. (ಎ) ಅಂಥ ವ್ಯಕ್ತಿಯ ಉಸಿರಾಟಕ್ಕೆ ಸಂಬಂಧಿಸಿ ಯಾವ ಸಾಧನದ ಮೂಲಕ ಪರೀಕ್ಷೆಯನ್ನು ನಡೆಸಲಾಯಿತು ಆ ಸಾಧನವು ಅಂಥ ವ್ಯಕ್ತಿಯ ರಕ್ತದಲ್ಲಿ ಮಧ್ಯಸಾರವಿರುವುದನ್ನು ಸೂಚಿಸುವುದೆಂದು ಪೊಲೀಸ್ ಅಧಿಕಾರಿಗೆ ಕಂಡು ಬಂದರೆ ಅಥವಾ
      2. (ಬಿ) ಉಸಿರಾಟಕ ಪರೀಕ್ಷೆಗಾಗಿ ಉಸಿರಿನ ಮಾದರಿಯನ್ನು ಒದಗಿಸಲು ಅಗತ್ಯಪಡಿಸಲಾದ ವ್ಯಕ್ತಿಯು ಅವನು ಆಸ್ತತ್ರೆಯಲ್ಲಿರಲಿ ಅಥವಾ ಬೇರೆಡೆಯಲ್ಲಿರಲಿ, ಹಾಗೇ ಮಾಡಲು ನಿರಾಕರಿಸಿದರೆ, ಲೋಪಿಸಿದರೆ ಅಥವಾ ತಪ್ಪಿದರೆ ಮತ್ತು ಪೊಲೀಸ್ ಅಧಿಕಾರಿಗೆ ಅವನ ರಕ್ತದಲ್ಲಿ ಮಧ್ಯಸಾರ ಇರುವುದಾಗಿ ಶಂಕಿಸಲು ಯುಕ್ತ ಕಾರಣವಿದ್ದರೆ,

      ಪ್ರಯೋಗ ಶಾಲಾ ಪರೀಕ್ಷೆಗಾಗಿ ಅವನ ರಕ್ತದ ಮಾದರಿಯನ್ನು ಆಸ್ಪತ್ರೆಯಲ್ಲಿ ಒದಗಿಸುವಂತೆ ಪೊಲೀಸ್ ಅಧಿಕಾರಿಯು ಅಗತ್ಯಪಡಿಸಬಹುದು"

    3. ಈ ಪ್ರಕರಣದ ಅನುಸಾರವಾಗಿ ಮಾಡಿದ ಪ್ರಯೋಗ ಶಾಲಾ ಪರೀಕ್ಷೆಯ ಫಲಿತಾಂಶಗಳು ಸಾಕ್ಷ್ಯದಲ್ಲಿ ಸ್ವೀಕಾರಾರ್ಹತಕ್ಕದ್ದು.

      ವಿವರಣೆ: ಈ ಪ್ರಕರಣದ ಉದ್ದೇಶಗಳಿಗಾಗಿ ಪ್ರಯೋಗ ಶಾಲಾ ಪರೀಕ್ಷೆ ಎಂದರೆ ಕೇಂದ್ರ ಸರ್ಕಾರವು ಅಥವಾ ಯಾವುದೊಂದು ರಾಜ್ಯ ಸರ್ಕಾರವು ಸ್ಥಾಪಿಸಿ ನಿರ್ವಹಿಸುತ್ತಿರುವ ಅಥವಾ ಮನ್ನಣೆ ನೀಡಲಾದ ಪ್ರಯೋಗ ಶಾಲೆಯಲ್ಲಿ ಮಾಡಿದ ರಕ್ತ ಮಾದರಿಯ ವಿಶ್ಲೇಷಣೆ.

    1. ಪೊಲೀಸ್ ಅಧಿಕಾರಿಯು ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಯು, ಮೋಟಾರು ವಾಹನದ ಚಾಲಕನು ಅಥವಾ ಅದರ ಪ್ರಭಾವ ಹೊಂದಿರುವ ವ್ಯಕ್ತಿಯು ಅವನ ಮುಂದೆ ಹಾಜರುಪಡಿಸಿದ ಮೋಟಾರು ವಾಹನದ ಮೇಲಿರುವ ಯಾವುದೇ ಗುರುತು ಚಿಹ್ನೆ ಅಥವಾ ಯಾವುದೇ ಲೈಸೆನ್ಸು, ಪರ್ಮಿಟ್ಟ, ನೋಂದಣಿ ಪ್ರಮಾಣ ಪತ್ರ ಅಥವಾ ಇತೆ ದಸ್ತಾವೇಜು, ಭಾರತ ದಂಡ ಸಂಹಿತೆಯ 464ನೇ ಪ್ರಕರಣದ ಅರ್ಥದಲ್ಲಿ ಸುಳ್ಳು ದಸ್ತಾವೇಜಾಗಿದ್ದರೆ, ಆ ಚಿಹ್ನೆ ಅಥವಾ ದಸ್ತಾವೇಜು ಅವನ ಸ್ವಾಧೀನದಲ್ಲಿರುವ ಬಗ್ಗೆ ಅಥವಾ ವಾಹನದಲ್ಲಿರುವ ಬಗ್ಗೆ ವಿವರಣೆಯನ್ನು ನೀಡಲು ಆ ವಾಹನದ ಚಾಲಕರನ್ನು ಅಥವಾ ಒಡೆಯನನ್ನು ಕೇಳಬಹುದು
    2. ಪೊಲೀಸ್ ಅಧಿಕಾರಿಯು ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಯು, ಈ ಅಧಿನಿಯಮದ ಮೇರೆಗಿನ ಯಾವುದೇ ಅಪರಾಧದ ಬಗ್ಗೆ ಅಪಾದಿತನಾದ ಮೋಟಾರು ವಾಹನದ ಚಾಲಕನು ತಲೆಮರೆಸಿಕೊಳ್ಳಬಹುದು ಅಥವಾ ಅನ್ಯಥಾ ಸಮುನು ಜಾರಿ ಮಾಡುವುದಕನ್ನು ತಪ್ಪಿಸಿಕೊಳ್ಳಬಹುದು ಎಂದು ನಂಬಲು ಕಾರಣವಿದ್ದರೆ, ಅಂಥ ಚಾಲಕನು ಹೊಂದಿರುವ ಯಾವುದೇ ಲೈಸನ್ಸನ್ನು ವಶಪಡಿಸಿಕೊಳ್ಳಬಹುದು ಮತ್ತು ಅಪರಾಧದ ಬಗ್ಗೆ ಸಂಜ್ಞಾನ ತೆಗೆದುಕೊಳ್ಳುವ ನ್ಯಾಯಾಲಯಕ್ಕೆ ಅದನ್ನು ಕಳುಹಿಸಬಹುದು ಮತ್ತು ಸದರಿ ನ್ಯಾಯಾಲಯವು, ಅಂಥ ಚಾಲಕನು ಅದರ ಮುಂದೆ ಮೊದಲ ಬಾರಿ ಹಾಜರಾದ ಮೇಲೆ, 3ನೇ ಪ್ರಕರಣದ ಮೇರೆಗೆ ಕೊಡಲಾದ ತಾತ್ಕಾಲಿಕ ತಲುಪೊಪ್ಪಿಗೆ ನಡೆದ ಮೇಲೆ ಆ ಲೈಸನ್ಸನ್ನು ಅವನಿಗೆ ಹಿಂದಿರುಗಿಸಬಹುದು.
    3. (2)ನೇ ಉಪಪ್ರಕರಣದ ಮೇರೆಗೆ ಲೈಸನ್ಸನ್ನು ವಶಪಡಿಸಿಕೊಳ್ಳುವ ಪೊಲೀಸ ಅಧಿಕಾರಿಯು ಅಥವಾ ಇತರ ವ್ಯಕ್ತಿಯು, ಲೈಸನ್ಸನ್ನು ಒಪ್ಪಿಸಿಕೊಡುವ ವ್ಯಕ್ತಿಗೆ ಆ ಬಗ್ಗೆ ಒಂದು ತಾತ್ಕಾಲಿಕ ತಲುಪೊಪ್ಪಿಗೆ ಯನ್ನು ಕೊಡತಕ್ಕದ್ದು ಮತ್ತು ಆಂಥ ತಲುಪೊಪ್ಪಿಗೆಯು ಲೈಸನ್ಸು ಧಾರಕನ್ನು ಅವನಿಗೆ ಲೈಸನ್ಸು ಹಿಂದಿರುಗಿಸುವವರೆಗೆ ಅಥವಾ ಪೊಲೀಸ್ ಅಧಿಕಾರಿ ಅಥವಾ ಇತರ ವ್ಯಕ್ತಿಯು ಆ ತಲುಪೊಪ್ಪಿಗೆ ನಿರ್ದಿಷ್ಟಪಡಿಸಬಹುದಾ ದಿನಾಂಕದ ವರೆಗೆ ಇವುಗಳಲ್ಲಿ ಯಾವುದೇ ಮೊದಲೋ ಅಲ್ಲಿಯವರೆಗೆ, ವಾಹನವನ್ನು ನಡೆಸಲು ಅಧಿಕಾರ ಕೊಡತಕ್ಕದ್ದು.
    4. ಪರಂತು, ಮ್ಯಾಜಿಸ್ಟ್ರೇಟ್ , ಪೊಲೀಸು ಅಧಿಕಾರಿ ಆಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಯು ತನಗೆ ಸಲ್ಲಿಸಿದ ಅರ್ಜಿಯ ಮೇಲೆ ಲೈಸಸ್ಸು ಧಾರಕನು ಜವಾಬ್ಧಾರವಾಗಿಲ್ದದ ಯಾವುದೇ ಕಾರಣಕ್ಕಾಗಿ ತಲುಪೊಪ್ಪಿಗೆಯಲ್ಲಿ ನಿರ್ದಿಷ್ಟಪಡಿಸಿದ ದಿನಾಂಕಕ್ಕೆ ಮುಂಚೆ ಲೈಸನ್ಸನ್ನು ಆ ಲೈಸನ್ಸು ಧಾರಕನಿಗೆ ಹಿಂದಿರುಗಿಸಲು ಆಗುವುದಿಲ್ಲ. ಅಥವಾ ಹಿಂದಿರುಗಿಸಲಾಗಿಲ್ಲವೆಂದು ಮನದಟ್ಟಾದರೆ, ಸಂದರ್ಭಾನುಸಾರ, ಆ ಮ್ಯಾಜಿಸ್ಟ್ರೇಟ್, ಪೊಲೀಸ್ ಅಧಿಕಾರಿ ಅಥವಾ ಇತರ ವ್ಯಕ್ತಿಯು ತಲುಪೊಪ್ಪಿಗೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದವರೆಗೆ ವಾಹನವನ್ನು ನಡೆಸಲು ಅಧಕೃತಗೊಳಿಸಿದ ಅವಧಿಯನ್ನು ವಿಸ್ತರಿಸಬಹುದು
    1. ಪೊಲೀಸ್ ಅಧಿಕಾರಿ ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಗೆ ಮೋಟಾರು ವಾಹನವನ್ನು 3ನೇ ಪ್ರಕರಣ ಅಥವಾ 4ನೇ ಪ್ರಕರಣ ಅಥವಾ 39ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸಿ ಮಾರ್ಗದಲ್ಲಿ ಅಥವಾ ಯಾವ ಪ್ರದೇಶದಲ್ಲಿ ಅಥವಾ ಯಾವ ಉದ್ದೇಶಕ್ಕಾಗಿ ಉಪಯೋಗಿಸಬಹುದೆಂಬುದಕ್ಕೆ ಸಂಬಂಧಿಸಿದಂತೆ ಪರ್ಮಿಟ್ ನಲ್ಲಿರುವ ಯಾವುದೇ ಷರತ್ತನ್ನು ಉಲ್ಲಂಘಿಸಿ ಬಳಸಲಾಗಿದೆ ಅಥವಾ ಬಳಸಲಾಗುತ್ತಿದೆ ಎಂದು ನಂಬಲು ಕಾರಣವಿದ್ದರೇ ಅವನು ಆ ವಾಹನವನ್ನು ವಶಪಡಿಸಿಕೊಳ್ಳಬಹುದು ಮತ್ತು ನಿಯಮಿಸಿದ ರೀತಿಯಲ್ಲಿ ತಡೆಹಿಡಿದಿಡಬಹುದು ಮತ್ತು ಈ ಉದ್ದೇಶಕ್ಕಾಗಿ ಅಥವಾ ವಾಹನದ ತಾತ್ಕಾಲಿಕ ಸುರಕ್ಷಿತ ಅಭಿರಕ್ಷೆಗಾಗಿ ತಾನು ಯುಕ್ತ ಎಂದು ಪರ್ಯಾಲೋಚಿಸಬಹುದಾದ ಯಾವುವೇ ಕ್ರಮಗಳನ್ನು ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳುವಂತೆ ಮಾಡಬಹುದು.

      ಪರಂತು, ಅಂಥ ಯಾರೇ ಅಧಿಕಾರಿ ಅಥವಾ ವ್ಯಕ್ತಿಯು ಮೋಟಾರು ವಾಹನವನ್ನು 3ನೇ ಪ್ರಕರಣ ಅಥವಾ 4ನೇ ಪ್ರಕರಣವನ್ನು ಉಲ್ಲಂಘಿಸಿ ಅಥವಾ 66ನೇ ಪ್ರಕರಣದ 1ನೇ ಪ್ರಕರಣದಲ್ಲಿ ಅಗತ್ಯಪಡಿಸಲಾದ ಪರ್ಮಿಟ್ಟ ಇಲ್ಲದೇ ಬದಲಾಗಿ ವಾಹನದ ನೋಂದಣಿ ಪ್ರಮಾಣ ಪತ್ರವನ್ನು ವಶಪಡಿಸಿಕೊಳ್ಳಬಹುದು ಮತ್ತು ಆ ಬಗ್ಗೆ ಒಂದು ತಲುಪೊಪ್ಪಿಗೆಯನ್ನು ಕೊಡತಕ್ಕದ್ದು. ಅವನು ಆ ವಾಹನವನ್ನು ವಶಪಡಿಸಿಕೊಳ್ಳುವುದಕ್ಕೆ ಬದಲಾಗಿ ವಾಹನದ ನೋಂದಣಿ ಪ್ರಮಾಣ ಪತ್ರವನ್ನು ವಶಪಡಿಸಿಕೊಳ್ಳಬಹುದು ಮತ್ತು ಆ ಬಗ್ಗೆ ಒಂದು ತಲುಪೊಪ್ಪಿಗೆಯನ್ನು ಕೊಡತಕ್ಕದ್ದು.

    2. ವಾಹನವನ್ನು 1ನೇ ಉಪಪ್ರಕರಣದ ಮೇರೆಗೆ ವಶಪಡಿಸಿಕೊಂಡು ತಡೆಹಿಡಿದಿಟ್ಟಿರುವಲ್ಲಿ ಆ ಮೋಟಾರು ವಾಹನದ ಒಡೆಯ ಅಥವಾ ಅದರ ಪ್ರಭಾರದಲ್ಲಿರುವ ವ್ಯಕ್ತಿಯು ವಾಹನದ ಬಿಡುಗಡೆಗೆ ಸಂಬಂಧಪಟ್ಟ ದಸ್ತಾವೇಜುಗಳೊಂದಿಗೆ ಸಾರಿಗೆ ಪ್ರಾಧಿಕಾರಕ್ಕೆ ಅಥವಾ ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ಅಧಿಕೃತಗೊಳಿಸಿದ ಯಾರೇ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅಂತ ಪ್ರಾಧಿಕಾರ ಅಥವಾ ಅಧಿಕಾರಿಯು ಅಂತ ದಸ್ತಾವೇಜುಗಳನ್ನು ಪರಿಶೀಲಿಸಿದ ತರುವಾಯ ಪ್ರಾಧಿಕಾರ ಅಥವಾ,
    3. ಈ ಅಧಿನಿಯಮದ ಮೇರೆಗೆ ಕೇಂದ್ರ ಸರ್ಕಾರವು ರಚಿಸಿದ ಪ್ರತಿಯೊಂದು ನಿಯಮವನ್ನು, 75ನೇ ಪ್ರಕರಣದ (1)ನೇ ಉಪಪ್ರಕರಣದ ಮತ್ತು 163ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಕೇಂದ್ರ ಸರ್ಕಾರವು ರೂಪಿಸಿದ ಪ್ರತಿಯೊಂದು ಯೋಜನೆಯನ್ನು ಮತ್ತು 41ನೇ ಪ್ರಕರಣದ (4)ನೇ ಉಪಪ್ರಕರಣ, 58ನೇ ಪ್ರಕರಣದ (1)ನೇ ಉಪಪ್ರಕರಣ, 59ನೇ ಪ್ರಕರಣದ (1)ನೇ ಉಪಪ್ರಕರಣ, 163ಎ ಪ್ರಕರಣದ (4)ನೇ ಉಪಪ್ರಕರಣ ಮತ್ತು 213ನೇ ಪ್ರಕರಣದ (4)ನೇ ಉಪಪ್ರಕರಣದ ಪರಂತುಕದ ಮೇರೆಗೆ ಕೇಂದ್ರ ಸರ್ಕಾರವು ಹೊರಡಿಸಿದ ಪ್ರತಿಯೊಂದು ಅಧಿಸೂಚನೆಯನ್ನು ಅದನ್ನು ರಚಿಸಿದ ತುರುವಾಯ ಆದಷ್ಟು ಬೇಗನೆ ಸಂಸತ್ತಿನ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ ಒಂದು ಅಧಿವೇಶನದಲ್ಲಿ ಅಥವಾ ಎರಡು ಅಥವಾ ಹೆಚ್ಚು ಅನುಕ್ರಮ ಅಧಿವೇಶನ ಅಥವಾ ಅನುಕ್ರಮ ಅಧಿವೇಶನದ ನಿಕಟೋತ್ತರ ಅಧಿವೇಶನದ ಮುಕ್ತಾಯಕ್ಕೆ ಮುಂಚೆ ಆ ನಿಯಮದಲ್ಲಿ ಯೋಜನೆಯಲ್ಲಿ ಅಥವಾ ಅಧಿಸೂಚನೆಯಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಎರಡೂ ಸದನಗಳು ಒಪ್ಪಿದರೆ ಅಥವಾ ಆ ನಿಯಮ ಅಥವಾ ಯೋಜನೆಯನ್ನು ರಚಿಸಕೂಡದೆಂದು ಅಥವಾ ಆ ಅಧಿಸೂಚನೆಯನ್ನು ಹೊರಡಿಸಕೂಡದೆಂದು ಎರಡೂ ಸದನಗಳು ಒಪ್ಪಿದರೆ, ಆ ತರುವಾಯ ಆ ನಿಯಮ, ಯೋಜನೆ ಅಥವಾ ಅಧಿಸೂಚನೆಯು, ಸಂದರ್ಭಾನುಸಾರ, ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರವೇ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ದದ್ದಲ್ಲ; ಆದಾಗ್ಯೂ ಅಂಥ ಯಾವುದೇ ಮಾರ್ಪಾಟು ಅಥವಾ ರದ್ದಿಯಾತಿಯು ಆ ನಿಯಮದ, ಯೋಜನೆಯ ಅಥವಾ ಅಧಿಸೂಚನೆಯ ಮೇರೆಗೆ ಹಿಂದೆ ಮಾಡಲಾದ ಯಾವುದೇ ಕಾರ್ಯದ ಕಾನೂನು ಮಾನ್ಯತೆಗೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.

      Provided that where the person required to provide such specimen is a female and the registered medical practitioner produced by such police officer is a male medical practitioner, the specimen shall be taken only in the presence of a female, whether a medical practitioner or not.

      ಪೊಲೀಸು ಅಧಿಕಾರಿಯು ಹಾಜರುಪಡಿಸಬಹುದಾದ ನೋಂದಾಯಿತ ವೈದ್ಯ ವೃತ್ತಿಗ಻ರನಿಗೆ ಪ್ರಯೋಗ ಶಾಲೆಯ ಪರೀಕ್ಷೆಗಾಗಿ ಅವನ ರಕ್ತದ ಮಾದರಿಯನ್ನು ಒದಗಿಸುವಂತೆ ಪೊಲೀಸು ಅಧಿಕಾರಿಯು ಅಗತ್ಯಪಡಿಸಬಹುದು.

      ಪರಂತು, ಅಂಥ ಮಾದರಿಯನ್ನು ಒದಗಿಸಲು ಅಗತ್ಯಪಡಿಸಲಾದ ವ್ಯಕ್ತಿಯು ಮಹಿಳೆಯಾಗಿರುವಲ್ಲಿ ಮತ್ತು ಅಂಥ ಪೊಲೀಸು ಅಧಿಕಾರಿಯು ಹಾಜರುಪಡಿಸಿದ ನೋಂದಾಯಿತ ವೈದ್ಯ ವೃತ್ತಿಗಾರನು ಪುರುಷ ವೈದ್ಯ ವೃತ್ತಿಗಾರನಾಗಿದ್ದರೆ, ವೈದ್ಯ ವೃತ್ತಿಗಾರನಾಗಿರುವ ಅಥವಾ ಅಲ್ಲದ ಮಹಿಳೆಯ ಸಮಕ್ಷಮದಲ್ಲಿ ಮಾತ್ರ ಮಾದರಿಯನ್ನು ತೆಗೆದುಕೊಳ್ಳತಕ್ದದ್ದು.

    2. ಒಬ್ಬ ವ್ಯಕ್ತಿಯನ್ನು ಅವನು ಒಳರೋಗಿಯಾಗಿ ಆಸ್ಪತ್ರಯಲ್ಲಿರುವಾಗ
      1. (ಎ) ಅಂಥ ವ್ಯಕ್ತಿಯ ಉಸಿರಾಟಕ್ಕೆ ಸಂಬಂಧಿಸಿ ಯಾವ ಸಾಧನದ ಮೂಲಕ ಪರೀಕ್ಷೆಯನ್ನು ನಡೆಸಲಾಯಿತು ಆ ಸಾಧನವು ಅಂಥ ವ್ಯಕ್ತಿಯ ರಕ್ತದಲ್ಲಿ ಮಧ್ಯಸಾರವಿರುವುದನ್ನು ಸೂಚಿಸುವುದೆಂದು ಪೊಲೀಸ್ ಅಧಿಕಾರಿಗೆ ಕಂಡು ಬಂದರೆ ಅಥವಾ
      2. (ಬಿ) ಉಸಿರಾಟಕ ಪರೀಕ್ಷೆಗಾಗಿ ಉಸಿರಿನ ಮಾದರಿಯನ್ನು ಒದಗಿಸಲು ಅಗತ್ಯಪಡಿಸಲಾದ ವ್ಯಕ್ತಿಯು ಅವನು ಆಸ್ತತ್ರೆಯಲ್ಲಿರಲಿ ಅಥವಾ ಬೇರೆಡೆಯಲ್ಲಿರಲಿ, ಹಾಗೇ ಮಾಡಲು ನಿರಾಕರಿಸಿದರೆ, ಲೋಪಿಸಿದರೆ ಅಥವಾ ತಪ್ಪಿದರೆ ಮತ್ತು ಪೊಲೀಸ್ ಅಧಿಕಾರಿಗೆ ಅವನ ರಕ್ತದಲ್ಲಿ ಮಧ್ಯಸಾರ ಇರುವುದಾಗಿ ಶಂಕಿಸಲು ಯುಕ್ತ ಕಾರಣವಿದ್ದರೆ,

      ಪ್ರಯೋಗ ಶಾಲಾ ಪರೀಕ್ಷೆಗಾಗಿ ಅವನ ರಕ್ತದ ಮಾದರಿಯನ್ನು ಆಸ್ಪತ್ರೆಯಲ್ಲಿ ಒದಗಿಸುವಂತೆ ಪೊಲೀಸ್ ಅಧಿಕಾರಿಯು ಅಗತ್ಯಪಡಿಸಬಹುದು"

      ಪರಂತು, ಆ ವ್ಯಕ್ತಿಯ ಶುಶ್ರೂಷೆಯ ನಿಕಟ ಮೇಲ್ವಿಚಾರಣೆಯನ್ನು ಹೊಂದಿರುವ ನೊಂದಾಯಿತ ವೈದ್ಯ ವೃತ್ತಿಗಾರನು ಅಂಥ ಅಗತ್ಯತೆಯ ಪ್ರಸ್ತಾವವನ್ನು ಮೊದಲು ತಿಳಿಸದಿದ್ದಲ್ಲಿ ಅಥವಾ ವೈದ್ಯ ವೃತ್ತಿಗಾರನು ರೋಗಿಯ ರಕ್ತದ ಮಾದರಿಯನ್ನು ಒದಗಿಸುವುದರಿಂದ ಅಥವಾ ಅದನ್ನು ಒದಗಿಸುವಂತೆ ಅಗತ್ಯಪಡಿಸುವುದರಿಂದ ರೋಗಿಯ ಯಕ್ತ ಆರೈಕೆ ಅಥವಾ ಶುಶ್ರೂಷೆಗೆ ಭಾದಕವುಂಟಾಗುವುದು ಎಂಬ ಕಾರಣದ ಮೇಲೆ ಅಂಥ ಮಾದರಿಯನ್ನು ಒದಗಿಸುವುದಕ್ಕೆ ಆಕ್ಷೇಪಿಸಿ ಈ ಉಪಪ್ರಕರಣದ ಮೇರೆಗೆ ಪ್ರಯೋಗ ಶಾಲಾ ಪರೀಕ್ಷೆಗಾಗಿ ಆ ವ್ಯಕ್ತಿಯನ್ನು ಅವನ ರಕ್ತದ ಮಾದರಿಯನ್ನು ಒದಗಿಸಲು ಅಗತ್ಯಪಡಿಸತಕ್ಕದಲ್ಲ.

    3. ಈ ಪ್ರಕರಣದ ಅನುಸಾರವಾಗಿ ಮಾಡಿದ ಪ್ರಯೋಗ ಶಾಲಾ ಪರೀಕ್ಷೆಯ ಫಲಿತಾಂಶಗಳು ಸಾಕ್ಷ್ಯದಲ್ಲಿ ಸ್ವೀಕಾರಾರ್ಹತಕ್ಕದ್ದು.

      ವಿವರಣೆ: ಈ ಪ್ರಕರಣದ ಉದ್ದೇಶಗಳಿಗಾಗಿ ಪ್ರಯೋಗ ಶಾಲಾ ಪರೀಕ್ಷೆ ಎಂದರೆ ಕೇಂದ್ರ ಸರ್ಕಾರವು ಅಥವಾ ಯಾವುದೊಂದು ರಾಜ್ಯ ಸರ್ಕಾರವು ಸ್ಥಾಪಿಸಿ ನಿರ್ವಹಿಸುತ್ತಿರುವ ಅಥವಾ ಮನ್ನಣೆ ನೀಡಲಾದ ಪ್ರಯೋಗ ಶಾಲೆಯಲ್ಲಿ ಮಾಡಿದ ರಕ್ತ ಮಾದರಿಯ ವಿಶ್ಲೇಷಣೆ.

    1. ಪೊಲೀಸ್ ಅಧಿಕಾರಿಯು ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಯು, ಮೋಟಾರು ವಾಹನದ ಚಾಲಕನು ಅಥವಾ ಅದರ ಪ್ರಭಾವ ಹೊಂದಿರುವ ವ್ಯಕ್ತಿಯು ಅವನ ಮುಂದೆ ಹಾಜರುಪಡಿಸಿದ ಮೋಟಾರು ವಾಹನದ ಮೇಲಿರುವ ಯಾವುದೇ ಗುರುತು ಚಿಹ್ನೆ ಅಥವಾ ಯಾವುದೇ ಲೈಸೆನ್ಸು, ಪರ್ಮಿಟ್ಟ, ನೋಂದಣಿ ಪ್ರಮಾಣ ಪತ್ರ ಅಥವಾ ಇತೆ ದಸ್ತಾವೇಜು, ಭಾರತ ದಂಡ ಸಂಹಿತೆಯ 464ನೇ ಪ್ರಕರಣದ ಅರ್ಥದಲ್ಲಿ ಸುಳ್ಳು ದಸ್ತಾವೇಜಾಗಿದ್ದರೆ, ಆ ಚಿಹ್ನೆ ಅಥವಾ ದಸ್ತಾವೇಜು ಅವನ ಸ್ವಾಧೀನದಲ್ಲಿರುವ ಬಗ್ಗೆ ಅಥವಾ ವಾಹನದಲ್ಲಿರುವ ಬಗ್ಗೆ ವಿವರಣೆಯನ್ನು ನೀಡಲು ಆ ವಾಹನದ ಚಾಲಕರನ್ನು ಅಥವಾ ಒಡೆಯನನ್ನು ಕೇಳಬಹುದು
    2. ಪೊಲೀಸ್ ಅಧಿಕಾರಿಯು ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಯು, ಈ ಅಧಿನಿಯಮದ ಮೇರೆಗಿನ ಯಾವುದೇ ಅಪರಾಧದ ಬಗ್ಗೆ ಅಪಾದಿತನಾದ ಮೋಟಾರು ವಾಹನದ ಚಾಲಕನು ತಲೆಮರೆಸಿಕೊಳ್ಳಬಹುದು ಅಥವಾ ಅನ್ಯಥಾ ಸಮುನು ಜಾರಿ ಮಾಡುವುದಕನ್ನು ತಪ್ಪಿಸಿಕೊಳ್ಳಬಹುದು ಎಂದು ನಂಬಲು ಕಾರಣವಿದ್ದರೆ, ಅಂಥ ಚಾಲಕನು ಹೊಂದಿರುವ ಯಾವುದೇ ಲೈಸನ್ಸನ್ನು ವಶಪಡಿಸಿಕೊಳ್ಳಬಹುದು ಮತ್ತು ಅಪರಾಧದ ಬಗ್ಗೆ ಸಂಜ್ಞಾನ ತೆಗೆದುಕೊಳ್ಳುವ ನ್ಯಾಯಾಲಯಕ್ಕೆ ಅದನ್ನು ಕಳುಹಿಸಬಹುದು ಮತ್ತು ಸದರಿ ನ್ಯಾಯಾಲಯವು, ಅಂಥ ಚಾಲಕನು ಅದರ ಮುಂದೆ ಮೊದಲ ಬಾರಿ ಹಾಜರಾದ ಮೇಲೆ, 3ನೇ ಪ್ರಕರಣದ ಮೇರೆಗೆ ಕೊಡಲಾದ ತಾತ್ಕಾಲಿಕ ತಲುಪೊಪ್ಪಿಗೆ ನಡೆದ ಮೇಲೆ ಆ ಲೈಸನ್ಸನ್ನು ಅವನಿಗೆ ಹಿಂದಿರುಗಿಸಬಹುದು.
    3. (2)ನೇ ಉಪಪ್ರಕರಣದ ಮೇರೆಗೆ ಲೈಸನ್ಸನ್ನು ವಶಪಡಿಸಿಕೊಳ್ಳುವ ಪೊಲೀಸ ಅಧಿಕಾರಿಯು ಅಥವಾ ಇತರ ವ್ಯಕ್ತಿಯು, ಲೈಸನ್ಸನ್ನು ಒಪ್ಪಿಸಿಕೊಡುವ ವ್ಯಕ್ತಿಗೆ ಆ ಬಗ್ಗೆ ಒಂದು ತಾತ್ಕಾಲಿಕ ತಲುಪೊಪ್ಪಿಗೆ ಯನ್ನು ಕೊಡತಕ್ಕದ್ದು ಮತ್ತು ಆಂಥ ತಲುಪೊಪ್ಪಿಗೆಯು ಲೈಸನ್ಸು ಧಾರಕನ್ನು ಅವನಿಗೆ ಲೈಸನ್ಸು ಹಿಂದಿರುಗಿಸುವವರೆಗೆ ಅಥವಾ ಪೊಲೀಸ್ ಅಧಿಕಾರಿ ಅಥವಾ ಇತರ ವ್ಯಕ್ತಿಯು ಆ ತಲುಪೊಪ್ಪಿಗೆ ನಿರ್ದಿಷ್ಟಪಡಿಸಬಹುದಾ ದಿನಾಂಕದ ವರೆಗೆ ಇವುಗಳಲ್ಲಿ ಯಾವುದೇ ಮೊದಲೋ ಅಲ್ಲಿಯವರೆಗೆ, ವಾಹನವನ್ನು ನಡೆಸಲು ಅಧಿಕಾರ ಕೊಡತಕ್ಕದ್ದು.
    4. ಪರಂತು, ಮ್ಯಾಜಿಸ್ಟ್ರೇಟ್ , ಪೊಲೀಸು ಅಧಿಕಾರಿ ಆಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಯು ತನಗೆ ಸಲ್ಲಿಸಿದ ಅರ್ಜಿಯ ಮೇಲೆ ಲೈಸಸ್ಸು ಧಾರಕನು ಜವಾಬ್ಧಾರವಾಗಿಲ್ದದ ಯಾವುದೇ ಕಾರಣಕ್ಕಾಗಿ ತಲುಪೊಪ್ಪಿಗೆಯಲ್ಲಿ ನಿರ್ದಿಷ್ಟಪಡಿಸಿದ ದಿನಾಂಕಕ್ಕೆ ಮುಂಚೆ ಲೈಸನ್ಸನ್ನು ಆ ಲೈಸನ್ಸು ಧಾರಕನಿಗೆ ಹಿಂದಿರುಗಿಸಲು ಆಗುವುದಿಲ್ಲ. ಅಥವಾ ಹಿಂದಿರುಗಿಸಲಾಗಿಲ್ಲವೆಂದು ಮನದಟ್ಟಾದರೆ, ಸಂದರ್ಭಾನುಸಾರ, ಆ ಮ್ಯಾಜಿಸ್ಟ್ರೇಟ್, ಪೊಲೀಸ್ ಅಧಿಕಾರಿ ಅಥವಾ ಇತರ ವ್ಯಕ್ತಿಯು ತಲುಪೊಪ್ಪಿಗೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದವರೆಗೆ ವಾಹನವನ್ನು ನಡೆಸಲು ಅಧಕೃತಗೊಳಿಸಿದ ಅವಧಿಯನ್ನು ವಿಸ್ತರಿಸಬಹುದು
    1. ಪೊಲೀಸ್ ಅಧಿಕಾರಿ ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾರೇ ಇತರ ವ್ಯಕ್ತಿಗೆ ಮೋಟಾರು ವಾಹನವನ್ನು 3ನೇ ಪ್ರಕರಣ ಅಥವಾ 4ನೇ ಪ್ರಕರಣ ಅಥವಾ 39ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸಿ ಮಾರ್ಗದಲ್ಲಿ ಅಥವಾ ಯಾವ ಪ್ರದೇಶದಲ್ಲಿ ಅಥವಾ ಯಾವ ಉದ್ದೇಶಕ್ಕಾಗಿ ಉಪಯೋಗಿಸಬಹುದೆಂಬುದಕ್ಕೆ ಸಂಬಂಧಿಸಿದಂತೆ ಪರ್ಮಿಟ್ ನಲ್ಲಿರುವ ಯಾವುದೇ ಷರತ್ತನ್ನು ಉಲ್ಲಂಘಿಸಿ ಬಳಸಲಾಗಿದೆ ಅಥವಾ ಬಳಸಲಾಗುತ್ತಿದೆ ಎಂದು ನಂಬಲು ಕಾರಣವಿದ್ದರೇ ಅವನು ಆ ವಾಹನವನ್ನು ವಶಪಡಿಸಿಕೊಳ್ಳಬಹುದು ಮತ್ತು ನಿಯಮಿಸಿದ ರೀತಿಯಲ್ಲಿ ತಡೆಹಿಡಿದಿಡಬಹುದು ಮತ್ತು ಈ ಉದ್ದೇಶಕ್ಕಾಗಿ ಅಥವಾ ವಾಹನದ ತಾತ್ಕಾಲಿಕ ಸುರಕ್ಷಿತ ಅಭಿರಕ್ಷೆಗಾಗಿ ತಾನು ಯುಕ್ತ ಎಂದು ಪರ್ಯಾಲೋಚಿಸಬಹುದಾದ ಯಾವುವೇ ಕ್ರಮಗಳನ್ನು ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳುವಂತೆ ಮಾಡಬಹುದು.

      ಪರಂತು, ಅಂಥ ಯಾರೇ ಅಧಿಕಾರಿ ಅಥವಾ ವ್ಯಕ್ತಿಯು ಮೋಟಾರು ವಾಹನವನ್ನು 3ನೇ ಪ್ರಕರಣ ಅಥವಾ 4ನೇ ಪ್ರಕರಣವನ್ನು ಉಲ್ಲಂಘಿಸಿ ಅಥವಾ 66ನೇ ಪ್ರಕರಣದ 1ನೇ ಪ್ರಕರಣದಲ್ಲಿ ಅಗತ್ಯಪಡಿಸಲಾದ ಪರ್ಮಿಟ್ಟ ಇಲ್ಲದೇ ಬದಲಾಗಿ ವಾಹನದ ನೋಂದಣಿ ಪ್ರಮಾಣ ಪತ್ರವನ್ನು ವಶಪಡಿಸಿಕೊಳ್ಳಬಹುದು ಮತ್ತು ಆ ಬಗ್ಗೆ ಒಂದು ತಲುಪೊಪ್ಪಿಗೆಯನ್ನು ಕೊಡತಕ್ಕದ್ದು. ಅವನು ಆ ವಾಹನವನ್ನು ವಶಪಡಿಸಿಕೊಳ್ಳುವುದಕ್ಕೆ ಬದಲಾಗಿ ವಾಹನದ ನೋಂದಣಿ ಪ್ರಮಾಣ ಪತ್ರವನ್ನು ವಶಪಡಿಸಿಕೊಳ್ಳಬಹುದು ಮತ್ತು ಆ ಬಗ್ಗೆ ಒಂದು ತಲುಪೊಪ್ಪಿಗೆಯನ್ನು ಕೊಡತಕ್ಕದ್ದು.

    2. ವಾಹನವನ್ನು 1ನೇ ಉಪಪ್ರಕರಣದ ಮೇರೆಗೆ ವಶಪಡಿಸಿಕೊಂಡು ತಡೆಹಿಡಿದಿಟ್ಟಿರುವಲ್ಲಿ ಆ ಮೋಟಾರು ವಾಹನದ ಒಡೆಯ ಅಥವಾ ಅದರ ಪ್ರಭಾರದಲ್ಲಿರುವ ವ್ಯಕ್ತಿಯು ವಾಹನದ ಬಿಡುಗಡೆಗೆ ಸಂಬಂಧಪಟ್ಟ ದಸ್ತಾವೇಜುಗಳೊಂದಿಗೆ ಸಾರಿಗೆ ಪ್ರಾಧಿಕಾರಕ್ಕೆ ಅಥವಾ ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ಅಧಿಕೃತಗೊಳಿಸಿದ ಯಾರೇ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅಂತ ಪ್ರಾಧಿಕಾರ ಅಥವಾ ಅಧಿಕಾರಿಯು ಅಂತ ದಸ್ತಾವೇಜುಗಳನ್ನು ಪರಿಶೀಲಿಸಿದ ತರುವಾಯ ಪ್ರಾಧಿಕಾರ ಅಥವಾ,
    3. ಈ ಅಧಿನಿಯಮದ ಮೇರೆಗೆ ಕೇಂದ್ರ ಸರ್ಕಾರವು ರಚಿಸಿದ ಪ್ರತಿಯೊಂದು ನಿಯಮವನ್ನು, 75ನೇ ಪ್ರಕರಣದ (1)ನೇ ಉಪಪ್ರಕರಣದ ಮತ್ತು 163ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಕೇಂದ್ರ ಸರ್ಕಾರವು ರೂಪಿಸಿದ ಪ್ರತಿಯೊಂದು ಯೋಜನೆಯನ್ನು ಮತ್ತು 41ನೇ ಪ್ರಕರಣದ (4)ನೇ ಉಪಪ್ರಕರಣ, 58ನೇ ಪ್ರಕರಣದ (1)ನೇ ಉಪಪ್ರಕರಣ, 59ನೇ ಪ್ರಕರಣದ (1)ನೇ ಉಪಪ್ರಕರಣ, 163ಎ ಪ್ರಕರಣದ (4)ನೇ ಉಪಪ್ರಕರಣ ಮತ್ತು 213ನೇ ಪ್ರಕರಣದ (4)ನೇ ಉಪಪ್ರಕರಣದ ಪರಂತುಕದ ಮೇರೆಗೆ ಕೇಂದ್ರ ಸರ್ಕಾರವು ಹೊರಡಿಸಿದ ಪ್ರತಿಯೊಂದು ಅಧಿಸೂಚನೆಯನ್ನು ಅದನ್ನು ರಚಿಸಿದ ತುರುವಾಯ ಆದಷ್ಟು ಬೇಗನೆ ಸಂಸತ್ತಿನ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ ಒಂದು ಅಧಿವೇಶನದಲ್ಲಿ ಅಥವಾ ಎರಡು ಅಥವಾ ಹೆಚ್ಚು ಅನುಕ್ರಮ ಅಧಿವೇಶನ ಅಥವಾ ಅನುಕ್ರಮ ಅಧಿವೇಶನದ ನಿಕಟೋತ್ತರ ಅಧಿವೇಶನದ ಮುಕ್ತಾಯಕ್ಕೆ ಮುಂಚೆ ಆ ನಿಯಮದಲ್ಲಿ ಯೋಜನೆಯಲ್ಲಿ ಅಥವಾ ಅಧಿಸೂಚನೆಯಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಎರಡೂ ಸದನಗಳು ಒಪ್ಪಿದರೆ ಅಥವಾ ಆ ನಿಯಮ ಅಥವಾ ಯೋಜನೆಯನ್ನು ರಚಿಸಕೂಡದೆಂದು ಅಥವಾ ಆ ಅಧಿಸೂಚನೆಯನ್ನು ಹೊರಡಿಸಕೂಡದೆಂದು ಎರಡೂ ಸದನಗಳು ಒಪ್ಪಿದರೆ, ಆ ತರುವಾಯ ಆ ನಿಯಮ, ಯೋಜನೆ ಅಥವಾ ಅಧಿಸೂಚನೆಯು, ಸಂದರ್ಭಾನುಸಾರ, ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರವೇ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ದದ್ದಲ್ಲ; ಆದಾಗ್ಯೂ ಅಂಥ ಯಾವುದೇ ಮಾರ್ಪಾಟು ಅಥವಾ ರದ್ದಿಯಾತಿಯು ಆ ನಿಯಮದ, ಯೋಜನೆಯ ಅಥವಾ ಅಧಿಸೂಚನೆಯ ಮೇರೆಗೆ ಹಿಂದೆ ಮಾಡಲಾದ ಯಾವುದೇ ಕಾರ್ಯದ ಕಾನೂನು ಮಾನ್ಯತೆಗೆ ಬಾಧಕವನ್ನುಂಟು ಮಾಡತಕ್ಕದ್ದಲ್ಲ.
© Content Owned & Site maintained by Transport Department, Karnataka State Government.
Visitors Count :: 3099197 | Site Last updated on :: 20-02-2018