Menu

 
Back

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆ, ಇವರ ಸಂದೇಶ.


ಡಾ. ಬಿ. ಬಸವರಾಜು, ಭಾ.ಆ.ಸೇ.


ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯು ತನ್ನದೆ ಆದ "ಜಾಲತಾಣ" ಹೊಂದಿದ್ದು, ಸದರಿ ಜಾಲತಾಣದಲ್ಲಿ ಇನ್ನಷ್ಟು ಸೇವೆಗಳನ್ನು ಅಳವಡಿಸಿ ಬಿಡುಗಡೆಗೊಳಿಸುತ್ತಿರುವುದು ಕೇಳಿ ಬಹಳ ಸಂತೋಷವಾಯಿತು. ಈಗಾಗಲೇ "ಜಾಲತಾಣ" ದಲ್ಲಿ ಲಭ್ಯವಿರುವ ಸಾರಿಗೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಸೌಲಭ್ಯಗಳು ರಾಜ್ಯದ ಜನತೆ ಪಡೆದುಕೊಳ್ಳಬೇಕೆನ್ನುವ ಆಸೆಯಿಂದ ಇಲಾಖೆಯ ನೂತನ ಜಾಲತಾಣವನ್ನು ಬಿಡುಗಡೆಗೊಳಿಸುತ್ತಿರುವುದು ಹರ್ಷದ ಸಂಗತಿಯಾಗಿದೆ. ಈ ಎಲ್ಲ ಆನ್ಲೈನ್ ಸೇವೆಗಳು ವಾಹನ ಚಾಲಕರು ಮತ್ತು ವಾಹನ ಚಾಲನೆ ಕಲಿಯುವವರಿಗೆ ಹಾಗೂ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಲಿದೆ. ಆನ್ ಲೈನ್ ಮೂಲಕ ವಾಹನ ಶುಲ್ಕ ಮತ್ತು ತೆರಿಗೆ ಪಾವತಿಸಲು ಇ-ಪಾವತಿ ಪದ್ದತಿ ಮತ್ತು ನವೀಕೃತಗೊಂಡ ಜಾಲತಾಣವು ಇಲಾಖೆಯ ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ ಇಲಾಖೆಯ ಎಲ್ಲಾ ಸೇವೆಗಳಲ್ಲಿ ದಕ್ಷತೆ, ಭ್ರಷ್ಟರಹಿತ ವಾತಾವರಣ ಉಂಟುಮಾಡುವುದು. ಇದರ ಜೊತೆಗೆ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ನೇರವಾಗಿ ಸಂಬಂಧಿಸಿದ ಕಛೇರಿಗೆ ನೀಡಿ ಸೂಕ್ತ ಪರಿಹಾರ ಪಡೆಯಲು ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕರು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಬಹುದಾಗಿದೆ. ಆದುದರಿಂದ ಎಲ್ಲಾ ಆನ್-ಲೈನ್ ಸೇವೆಗಳನ್ನು ವಾಹನ ಚಾಲಕರು ಹಾಗೂ ಸಾರ್ವಜನಿಕರು ತಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸಿಕೊಳ್ಳಲಿ ಎಂದು ಆಶಿಸುತ್ತಾ ಸಾರಿಗೆ ಇಲಾಖೆಯವರು ಬಿಡುಗಡೆಗೊಳಿಸುತ್ತಿರುವ "ಜಾಲತಾಣ" ಹಾಗೂ “ಇ-ಪಾವತಿ ಪದ್ದತಿ” ಎಲ್ಲರಿಗೂ ಉಪಯೋಗವಾಗಲಿ ಎಂದು ಶುಭ ಹಾರೈಸುತ್ತೇನೆ.

 
                                                                                                         
ಡಾ. ಬಿ. ಬಸವರಾಜು, ಭಾ.ಆ.ಸೇ.
ಸರ್ಕಾರದ ಪ್ರಧಾನ ಕಾರ್ಯದರ್ಶಿ
ಸಾರಿಗೆ ಇಲಾಖೆ
© Content Owned & Site maintained by Transport Department, Karnataka State Government.
Visitors Count :: 5389326 | Site Last updated on :: 04-05-2019