Thursday, June 29, 2017,

Menu

 
Back

ವಿಕಲ ಚೇತನರಿಗಾಗಿ

ಅಶಕ್ತ ವಾಹನ (ಇನ್ ವ್ಯಾಲಿಡ್ ಕ್ಯಾರೇಜ್) ಎಂಬುದಕ್ಕೆ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾವಳಿ, ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯಡಿ ವ್ಯಾಖ್ಯಾನಗಳು.

 1       ಕಲಿಕಾ ಅನುಜ್ಞಾ ಪತ್ರ

ಕಲಿಕಾ ಅನುಜ್ಞಾ ಪತ್ರವೆಂದರೆ ಅಧ್ಯಾಯ-2 ರಡಿ ಸಕ್ಷಮ ಪ್ರಾಧಿಕಾರದಿಂದ ನೀಡಲಾಗುವ ಯಾವುದೇ ನಿರ್ದಿಷ್ಟ ವರ್ಗದ ಅಥವಾ ವಿವರಣಾತ್ಮಕತೆಯ ಮೋಟಾರು ವಾಹನ ಅಥವಾ ಮೋಟಾರು ವಾಹನವನ್ನು ಕಲಿಕೆಗಾಗಿ ಚಾಲನೆ ಮಾಡಲು ನೀಡಿದ ಅನುಜ್ಞಾಪತ್ರವಾಗಿರುತ್ತದೆ.

  2 ಚಾಲನಾ ಅನುಜ್ಞಾ ಪತ್ರ

ಚಾಲನಾ ಅನುಜ್ಞಾ ಪತ್ರವೆಂದರೆ ಅಧ್ಯಾಯ-2 ರಡಿ ಸಕ್ಷಮ ಪ್ರಾಧಿಕಾರದಿಂದ ನೀಡಲಾಗುವ ಯಾವುದೇ ನಿರ್ದಿಷ್ಟ ವರ್ಗದ ಅಥವಾ ವಿವರಣಾತ್ಮಕತೆಯ ಮೋಟಾರು ವಾಹನ ಅಥವಾ ಮೋಟಾರು ವಾಹನವನ್ನು ಕಲಿಕೆಗಾಗಿ ಹೊರತುಪಡಿಸಿ, ಚಾಲನೆ ಮಾಡಲು ನೀಡಿದ ಅನುಜ್ಞಾಪತ್ರವಾಗಿರುತ್ತದೆ./p>

  3 ಅಶಕ್ತ ವಾಹನ (ಇನ್ ವ್ಯಾಲಿಡ್ ಕ್ಯಾರೇಜ್)

ಅಶಕ್ತ ವಾಹನ ಎಂದರೆ, ವಿಶೇಷವಾಗಿ ವಿನ್ಯಾಸಗೊಳಿಸಿದ, ನಿರ್ಮಿಸಿದ ಮತ್ತು ವಾಸ್ತವವಾಗಿ ದೈಹಿಕ ನ್ಯೂನತೆಯುಳ್ಳ ಅಥವಾ ಅಂಗವಿಕಲತೆಯುಳ್ಳ ವ್ಯಕ್ತಿಯ ಉಪಯೋಗಕ್ಕೆ ಹೊಂದುವಂತೆ ಭಾಗಶಃ ಮಾರ್ಪಡಿಸದೇ ಇರುವ ಮತ್ತು ಪೂರ್ಣವಾಗಿ ಅಥವಾ ಅಂತಹ ವ್ಯಕ್ತಿಯು ಬಳಸುವ ಮೋಟಾರು ವಾಹನವಾಗಿರುತ್ತದೆ.

  4 ಚಾಲಕ

ಮೋಟಾರು ವಾಹನಕ್ಕೆ ಸಂಬಂಧಿಸಿದಂತೆ ಚಾಲಕನೆಂದರೆ ವಾಹನವನ್ನು ಚಲಾಯಿಸುವ ವಾಹನದ ಅಂಬಿಗನಂತೆ ಕಾರ್ಯ ನಿರ್ವಹಿಸುವ ವ್ಯಕ್ತಿಯಾಗಿರುತ್ತಾನೆ.

  5 ಮಾಲೀಕ

ಮಾಲೀಕ ಎಂದರೆ, ಯಾರ ಹೆಸರಿನಲ್ಲಿ ಒಂದು ಮೋಟಾರು ವಾಹನವು ನೋಂದಣಿಯಾಗಿರುತ್ತದೆಯೋ ಆ ವ್ಯಕ್ತಿ ಮತ್ತು ಅಂತಹ ವ್ಯಕ್ತಿಯು ಅಪ್ರಾಪ್ತ ವಯಸ್ಕನಾಗಿದ್ದಲ್ಲಿ ಅಂತಹ ಅಪ್ರಾಪ್ತ ವ್ಯಕ್ತಿಯ ಪೋಷಕರು ಮತ್ತು ವಾಹನವು ಕಂತು-ಕರಾರು, ಒಪ್ಪಂದ ಅಥವಾ ಲೀಸ್ ಒಪ್ಪಂದಕ್ಕೆ ಒಳಪಟ್ಟು ಆ ಒಪ್ಪಂದದಡಿ ವಾಹನದ ಸುಪರ್ದಿ ವಹಿಸಿಕೊಂಡ ವ್ಯಕ್ತಿಯಾಗಿರುತ್ತಾರೆ.

  1. ಮೋಟಾರು ವಾಹನ ತೆರಿಗೆ: ದ್ವಿಚಕ್ರ ವಾಹನ ಮತ್ತು ಲಘು ಮೋಟಾರು ವಾಹನ (ಸಾರಿಗೇತರ), ಅಶಕ್ತ ವಾಹನಗಳಿಗೆ ಜೀವಾವಧಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ, ಆದರೆ ಮೋಟಾರು ವಾಹನಗ ತೆರಿಗೆ ಷೆಡ್ಯೂಲ್ ಭಾಗ-ಎ ರ ಕ್ರ.ಸಂ.2ರಲ್ಲಿ ಪ್ರತಿ ತ್ರೈಮಾಸಿಕ ರೂ.10/-ರಂತೆ ತೆರಿಗೆಯನ್ನು ಪಾವತಿಸಬೇಕು.
  2. ಅಶಕ್ತ ವಾಹನಗಳಲ್ಲಿ ಬದಲಾವಣೆ ಮಾಡಲು ಅನುಮತಿ: ಕರ್ನಾಟಕ ಸರ್ಕಾರ ಮತ್ತು ಸಾರಿಗೆ ಇಲಾಖೆಯು ವಿಕಲಚೇತನರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ನಿರ್ದಿಷ್ಟಪಡಿಸಿದ ಮತ್ತು ಅನುಮೋದಿತ ಕೇಂದ್ರಗಳ ಮೂಲಕ ಸಾರಿಗೇತರ ವಾಹನಗಳಿಗೆ ಅಶಕ್ತ ವಾಹನಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅನುಮತಿ ನೀಡುತ್ತಿವೆ. ಅನುಬಂಧ-1 ನ್ನು ಅವಲೋಕಿಸುವುದು.
  3. ನೋಂದಣಿ ಶುಲ್ಕ:-
    • ನೋಂದಣಿ ಶುಲ್ಕ ರೂ.20/-
    • ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
    • ಬದಲಾವಣೆ ಶುಲ್ಕ ರೂ.50/-

ಅಶಕ್ತ ವಾಹನಗಳ ನೋಂದಣಿ ಕಾರ್ಯ ವಿಧಾನ

    ವಾಹನ ಖರೀದಿ ನಂತರ ಡೀಲರರು ನಮೂನೆ-19, ನಮೂನೆ-21, ನಮೂನೆ-22 ಗಳನ್ನು ನೋಂದಣಿ ಸಲುವಾಗಿ ನೀಡುತ್ತಾರೆ.

   ಅರ್ಜಿದಾರರು ನಮೂನೆ ಸಿ.ಎಂ.ವಿ-20ರಲ್ಲಿ ಎಲ್ಲಾ ಅಗತ್ಯ ಮಾಹಿತಿಗಳನ್ನು ಸಾರಿಗೆ ಇಲಾಖೆಯ ವೆಬ್ ಸೈಟ್ ವಿಳಾಸ transport.karnataka.gov.in ಮೂಲಕ ಭರ್ತಿ ಮಾಡಿ ನಮೂನೆ ಸಿ.ಎಂ.ವಿ.20 ನ್ನು ಮುದ್ರಿಸಿ ಪಡೆಯಬೇಕು.

   ಈ ರೀತಿ ಪಡೆದ ನಮೂನೆ-20 ರೊಂದಿಗೆ (ಕಂತು ಕರಾರಿಗೆ ಒಳಪಟ್ಟಿದ್ದಲ್ಲಿ ದ್ವಿಪ್ರತಿಯಲ್ಲಿ) ಅರ್ಜಿದಾರರು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೆರಿಗೆ ಡೀಲರರು ನೀಡಿದ ನಮೂನೆಗಳೊಂದಿಗೆ ಅವಶ್ಯ ಸಹಿಯೊಂದಿಗೆ ಮತ್ತು ವಿಳಾಸ ದೃಢೀಕರಣ ಮತ್ತು ಪ್ಯಾನ್ ಕಾರ್ಡ್ ದಾಖಲೆಗಳನ್ನು ಸಲ್ಲಿಸತಕ್ಕದ್ದು. ದಾಖಲೆಗಳ ಪರಿಶೀಲನೆ ನಂತರ ಅರ್ಜಿದಾರರು ಮೇಲೆ ತಿಳಿಸಿರುವಂತೆ ನಿಗದಿತ ಶುಲ್ಕ ಮತ್ತು ತೆರಿಗೆಯನ್ನು ಪಾವತಿಸಬೇಕು ಮತ್ತು ತಪಾಸಣೆಗಾಗಿ ಮತ್ತು ಚಾಲನಾ ಪರೀಕ್ಷೆಗಾಗಿ ತಪಾಸಣಾ ಪ್ರಾಧಿಕಾರದ ಮುಂದೆ ವಾಹನವನ್ನು ಹಾಜರುಪಡಿಸಬೇಕು. ತಪಾಸಣಾ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ನೋಂದಣಿ ಪ್ರಾಧಿಕಾರವು ಅಂತಹ ವಾಹನವನ್ನು ಅಶಕ್ತರ ವಾಹನವನ್ನಾಗಿ ನೋಂದಾಯಿಸುತ್ತದೆ ಮತ್ತು ಸ್ಮಾರ್ಟ್ ಕಾರ್ಡ್ ನೋಂದಣಿ ಪ್ರಪತ್ರವನ್ನು ತ್ವರಿತ ಅಂಚೆ ಮೂಲಕ ಕಳುಹಿಸಿಕೊಡಲಾಗುತ್ತದೆ.

ಅಶಕ್ತ ವಾಹನಗಳ ಕಲಿಕಾ ಅನುಜ್ಞಾಪತ್ರ ಪಡೆಯಲು ಕಾರ್ಯ ವಿಧಾನ

  • ಅರ್ಜಿ ನಮೂನೆ ಸಿಎಂವಿ-2 (ಅಂತರ್ಜಾಲ ಮೂಲಕ ಸಲ್ಲಿಸಬೇಕು).
  • ವಿಳಾಸ ದೃಢೀಕರಣ
  • 3 ಭಾವಚಿತ್ರಗಳು
  • ಅಂಗವಿಕಲತೆ ಕುರಿತು ಅರ್ಜಿದಾರರ ದೈಹಿಕ ಅರ್ಹತೆಗೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣ ಪತ್ರ
  • ಸಿ.ಎಂ.ವಿ-1 ಮತ್ತು ಸಿ.ಎಂ.ವಿ-1 ರಲ್ಲಿ ವೈದ್ಯಕೀಯ ಪ್ರಮಾಣಪತ್ರ.
  • ಶುಲ್ಕ ರೂ.30/-

   ಅರ್ಜಿದಾರರು ನಮೂನೆ ಸಿ.ಎಂ.ವಿ-2 ರಲ್ಲಿ ಎಲ್ಲಾ ಅಗತ್ಯ ಮಾಹಿತಿಗಳನ್ನು ಸಾರಿಗೆ ಇಲಾಖೆಯ ವೆಬ್ ಸೈಟ್ ವಿಳಾಸ transport.karnataka.gov.in ಮೂಲಕ ಭರ್ತಿ ಮಾಡಿ ಸಿ.ಎಂ.ವಿ. ನಮೂನೆ-2ನ್ನು ಮುದ್ತಿಸಿ ಪಡೆಯಬೇಕು

   ಈ ರೀತಿ ಪಡೆದ ನಮೂನೆ ಸಿ.ಎಂ.ವಿ.2 ರೊಂದಿಗೆ ಅರ್ಜಿದಾರರು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ, ವಿಳಾಸ ದೃಢೀಕರಣ, ವಯಸ್ಸಿನ ದೃಡೀಕರಣ, 3 ನ್ಯೂನತೆಯು ಅನಾವರಣಗೊಂಡ ಭಾವಚಿತ್ರಗಳ ದಾಖಲೆಗಳನ್ನು ಸಲ್ಲಿಸತಕ್ಕದ್ದು. ದಾಖಲೆಗಳ ಪರಿಶೀಲನೆ ನಂತರ ಅರ್ಜಿದಾರರು ಮೇಲೆ ತಿಳಿಸಿರುವಂತೆ ನಿಗದಿತ ಶುಲ್ಕ ಪಾವತಿಸಬೇಕು ಮತ್ತು ತಪಾಸಣೆಗಾಗಿ ಮತ್ತು ಕಲಿಕಾ ಅನುಜ್ಞಾ ಪತ್ರ ಪರೀಕ್ಷೆಗಾಗಿ ಅನುಜ್ಞಾಪತ್ರ ಪ್ರಾಧಿಕಾರದ ಮುಂದೆ ಹಾಜರಾಗಬೇಕು. ಚಾಲನಾ ಪರೀಕ್ಷಾ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ಕಲಿಕಾ ಅನುಜ್ಞಾ ಪತ್ರವನ್ನು ಏಳು ದಿನಗಳಲ್ಲಿ (ಸಕಾಲ ಪ್ರಕಾರ) ನೀಡಲಾಗುತ್ತದೆ ಮತ್ತು ನೀಡಿಕೆ ದಿನಾಂಕದಿಂದ ಆರು ತಿಂಗಳವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ.


ಅಧಿಸೂಚನೆ ಮತ್ತು ಸುತ್ತೋಲೆಗಳ ಪ್ರತಿ ಪಡೆಯುವುದು/ನೋಡಿ
© Content Owned & Site maintained by Transport Department, Karnataka State Government.
Visitors Count :: 1710072 | Site Last updated on :: 19-06-2017