Tuesday, February 20, 2018,

Menu

 
Back

ಸಾರಿಗೆ ವಾಹನಗಳಿಗೆ ಅರ್ಹತಾ ಪತ್ರ ನೀಡುವ ಬಗ್ಗೆ

(ಮೋಟಾರು ವಾಹನ ಕಾಯ್ದೆ 1988 ರ ಕಲ 56 ಹಾಗೂ ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 62 ಗಮನಿಸಿ)

ಸೂಚನೆ: ನಿಯಮದ ಪ್ರಕಾರ ಎಲ್ಲಾ (ಸಾರಿಗೆ ವಾಹನಗಳ ವ್ಯಾಪ್ತಿಗೆ ಬರುವ) ವಾಹನಕ್ಕೆ ನೋಂದಣಿಯಾದ ದಿನಾಂಕದಿಂದ ಮೊದಲ ಬಾರಿ ಎರಡು ವರ್ಷಗಳ ಅವಧಿಗೆ ಅರ್ಹತಾ ಪತ್ರ ನೀಡಲಾಗುತ್ತದೆ ಅನಂತರ ಪ್ರತಿ ವರ್ಷ ನೋಂದಣಿ ಮಾಲೀಕರು ತಮ್ಮ ವಾಹನವನ್ನು ತಾವು ನೋಂದಾಯಿಸಿಕೊಂಡಿರುವ ಪ್ರಾಧಿಕಾರದ ತನಿಖಾಧಿಕಾರಿಯ ಮುಂದೆ ಅರ್ಜಿ/ ನಿಗದಿತ ಶುಲ್ಕ ಮತ್ತು ದಾಖಲೆಗಳೊಂದಿಗೆ ಹಾಜರುಪಡಿಸಬೇಕು ಈ ಅಧಿಕಾರಿಯು ವಾಹನವು ಸುಸ್ಥಿತಿಯಲ್ಲಿದೆಯೇ/ ರಸ್ತೆಯಲ್ಲಿ ಓಡಾಡಲು ಯೋಗ್ಯವಾಗಿದೆಯೇ ಎಂಬುದನ್ನು ನಿಯಮಗಳ ಅನುಸಾರ ತಪಾಸಣೆ ನಡೆಸಿ ದೃಢೀಕರಣ ನೀಡಿದ ನಂತರ ಸದರಿ ವಾಹನಕ್ಕೆ ಅರ್ಹತಾ ಪತ್ರದ ಪ್ರಮಾಣ ಪತ್ರವನ್ನು ಮತ್ತೊಂದು ವರ್ಷದ ಅವಧಿಗೆ ನವೀಕರಿಸಿ ನೀಡಲಾಗುವುದು.

ಲಗತ್ತಿಸಬೇಕಾದ ದಾಖಲೆಗಳು

  1. ನಮೂನೆ 20 ರಲ್ಲಿ ಅರ್ಜಿ (ಕೆಎಂವಿ).
  2. ಶುಲ್ಕ ಸಿಎಂವಿಆರ್ 1989 ರ ನಿಯಮ 81 ರಲ್ಲಿ ನಿಗಧಿಪಡಿಸಿರುವಂತೆ ಪಾವತಿಸಬೇಕು.
  3. ನೋಂದಣಿ ಪತ್ರ, ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ, ಅರ್ಹತಾ ಪತ್ರ, ರಹದಾರಿ ನಡಾವಳಿ.

    ಫಿಟ್ನೆಸ್ ಪ್ರಮಾಣಪತ್ರ ನವೀಕರಣ ಶುಲ್ಕಗಳು:

    • ಶುಲ್ಕದ ವಿವರ- ಲಘು ಸಾರಿಗೆ ವಾಣಿಜ್ಯ ವಾಹನಕ್ಕೆ ರೂ.300/-
    • ಮಧ್ಯಮ ಗಾತ್ರದ ಸರಕು ಸಾಗಣಿ ವಾಹನಕ್ಕೆ ರೂ.400/-
    • ಮಧ್ಯಮ ಪ್ರಯಾಣಿಕರ ವಾಹನ ರೂ.400/-
    • ಭಾರೀ ಸರಕು ಸಾಗಣಿ ವಾಹನಕ್ಕೆ ರೂ.600/-
    • ಭಾರೀ ಪ್ರಯಾಣಿಕರ ವಾಹನ ರೂ.600/-
    • ಇತರೆ ವಾಹನಗಳಿಗೆ ರೂ.300/-
    • ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
  4. ಹಸಿರು ತೆರಿಗೆ:- ಸಾರಿಗೆ ವಾಹನವು ನೋಂದಣಿ ದಿನಾಂಕದಿಂದ 7 ವರ್ಷ ಪೂರೈಸಿದ್ದಲ್ಲಿ ಪ್ರತಿ ವರ್ಷ ರೂ. 200/- ರಂತೆ ಹಸಿರು ತೆರಿಗೆ ಪಾವತಿಸಬೇಕು.

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ/ ಶುಲ್ಕದೊಂದಿಗೆ ಸಂಬಂಧಪಟ್ಟ ಕಛೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ/ ಪ್ರಾದೇಶಿಕ ಸಾರಿಗೆ ಅಧಿಕಾರಿಯರ ಮೇಲುರುಜು ಪಡೆದು ನಂತರ ತನಿಖಾಧಿಕಾರಿಯ ಮುಂದೆ ವಾಹನ ಹಾಜರುಪಡಿಸಬೇಕು ಸಂಬಂಧಪಟ್ಟ ತನಿಖಾಧಿಕಾರಿಯು ಸದರಿ ವಾಹನವನ್ನು ಪರಿಶೀಲಿಸಿ/ ತಪಾಸಿಸಿ ವಾಹನವು ಸುಸ್ಥಿತಿಯಲ್ಲಿದೆಯೇ/ ರಸ್ತೆಯಲ್ಲಿ ಓಡಾಡಲು ಯೋಗ್ಯವಾಗಿದೆಯೇ ಎಂಬುದನ್ನು ನಿಯಮಗಳ ಅನುಸಾರ ತಪಾಸಣೆ ನಡೆಸಿ ದೃಢೀಕರಣ ನೀಡಿದ ನಂತರ ಸಾರಿಗೆ ವಾಹನಗಳ ಅರ್ಹತಾ ಪತ್ರ ಮುಂದಿನ 1 ವರ್ಷದ ಅವಧಿಗೆ ನವೀಕರಿಸಲಾಗುವುದು. ಅರ್ಜಿದಾರರು ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಿದ್ದಲ್ಲಿ ಅರ್ಹತಾ ಪತ್ರ ನವೀಕರಿಸಿದ ದಾಖಲೆಗಳನ್ನು ನೋಂದಣಿದಾರರಿಗೆ ಸ್ಟೀಡ್ ಪೋಸ್ಟ್ ಮುಖಾಂತರ ಕಳುಹಿಸಲಾಗುವುದು ಅಥವಾ ಅರ್ಜಿದಾರರು ತಾವೇ ಖುದ್ದಾಗಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಹಾಜರಾಗಿ ದಾಖಲೆ ವಹಿಯಲ್ಲಿ ಸಹಿ ಮಾಡಿದಲ್ಲಿ ದಾಖಲೆಗಳನ್ನು ನೀಡಲು ಕ್ರಮವಹಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.  
© Content Owned & Site maintained by Transport Department, Karnataka State Government.
Visitors Count :: 3099383 | Site Last updated on :: 20-02-2018