Menu

 
Back

ಸಾರಿಗೇತರ ವಾಹನಗಳ ನೋಂದಣಿ ಪತ್ರ ನವೀಕರಣ

(ಮೋಟಾರು ವಾಹನ ಕಾಯ್ದೆ 1988 ರ ಕಲ 41 (10) ಹಾಗೂ ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 52 ಗಮನಿಸಿ)

ನಿಯಮದ ಪ್ರಕಾರ ಪ್ರತಿಯೊಂದು ಸಾರಿಗೇತರ ವಾಹನವು ನೋಂದಣಿ ದಿನಾಂಕದಿಂದ 15 ವರ್ಷಗಳನ್ನು ಪೂರೈಸಿದ್ದಲ್ಲಿ ಆ ವಾಹನದ ನೋಂದಣಿ ಪತ್ರವನ್ನು ನವೀಕರಣಗೊಳಿಸಬೇಕು./p>

ಲಗತ್ತಿಸಬೇಕಾದ ದಾಖಲೆಗಳು

  1. ನಮೂನೆ 25 ರಲ್ಲಿ ಅರ್ಜಿ ಸಿಎಂವಿಆರ್.
  2. ಶುಲ್ಕ ಸಿಎಂವಿಆರ್ 1989 ರ ನಿಯಮ 81 ರಲ್ಲಿ ನಿಗಧಿಪಡಿಸಿರುವಂತೆ ಪಾವತಿಸಬೇಕು.
  3. ನೋಂದಣಿ ಪತ್ರ, ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ.
  4. ಪೈನಾನ್ಸ್ದಾರರ ಒಪ್ಪಿಗೆ ಪತ್ರ.
  5. ಮರು ನೋಂದಣಿ ಶುಲ್ಕ ವಿವರ
    • ಅಶಕ್ತರ ವಾಹನ ರೂ.20/-/li>
    • ದ್ವಿ-ಚಕ್ರ ವಾಹನಕ್ಕೆ ರೂ.60/-
    • ನಾಲ್ಕು ಚಕ್ರ ವಾಹನಕ್ಕೆ (ಸಾರಿಗೇತರ) ರೂ.200/-
    • ಸಾರಿಗೇತರ (ಕಾರು) ಆಮದು ವಾಹನಕ್ಕೆ ರೂ.800/-
    • ಸಾರಿಗೇತರ ದ್ವಿ-ಚಕ್ರ ಆಮದು ವಾಹನಕ್ಕೆ ರೂ.200/-
    • ಇತರೆ ವಾಹನಗಳಿಗೆ ರೂ.300/-
    • ಕಂತು ಕರಾರು ಒಪ್ಪಂದ/ ರದ್ದತಿ ರೂ.100/-
    • ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
    • ಹಸಿರು ತೆರಿಗೆ (15 ವರ್ಷ ಆಗಿದ್ದಲ್ಲಿ)
    • ದ್ವಿಚಕ್ರ ವಾಹನಕ್ಕೆ ರೂ.250/-
    • ನಾಲ್ಕು ಚಕ್ರ ವಾಹನಕ್ಕೆ ರೂ.500/-
    • ತಡವಾದ ಅರ್ಜಿಗೆ ದಂಡ ಶುಲ್ಕ ಪ್ರತಿ ತಿಂಗಳಿಗೆ ರೂ.25/- ಗರಿಷ್ಟ ಮೊತ್ತ ರೂ.100/- ಪಾವತಿಸಬೇಕು.

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಕಛೇರಿಯ ಸಾರಿಗೇತರ ನೋಂದಣಿ ವಿಭಾಗದಲ್ಲಿ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ ಕಛೇರಿಯಲ್ಲಿ ಅರ್ಜಿಗೆ ಮೇಲುರುಜು ಆದನಂತರ ವಾಹನವನ್ನು ತನಿಖಾಧಿಕಾರಿಯ ಮುಂದೆ ಹಾಜರುಪಡಿಸಬೇಕು. ಸದರಿ ತನಿಖಾಧಿಕಾರಿಯು ವಾಹನ ಪರಿಶೀಲಿಸಿ ಚಾಸಿಸ್, ಇಂಜಿನ್ ಸಂಖ್ಯೆ ದೃಢೀಕರಿಸಿದ ನಂತರ ಅರ್ಜಿಯನ್ನು ಸಾರಿಗೇತರ ವಿಭಾಗದಲ್ಲಿ ಸಲ್ಲಿಸಬೇಕು ಸದರಿ ವಾಹನಕ್ಕೆ ನೋಂದಣಿ ಪತ್ರ ನವೀಕರಿಸಿ ಗಣಕಯಂತ್ರದಲ್ಲಿ ದಾಖಲಿಸಿದ ನಂತರ ವಾಹನದ ನೋಂದಣಿ ಪತ್ರ ನವೀಕರಿಸಿದ ಸ್ಮಾರ್ಟ್ ಕಾರ್ಡ್ನ್ನು "ಸಕಾಲ" ನಿಯಮದಡಿ ನಿಗದಿಪಡಿಸಿರುವ ನಿರ್ಧಿಷ್ಟ ಸಮಯದಲ್ಲಿ ನೋಂದಣಿದಾರರಿಗೆ ಸ್ಟೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು.

ಸೂಚನೆ: ಹೆಚ್ಚಿನ ಮಾಹಿತಿಗಾಗಿ

ಮೋಟಾರು ವಾಹನ ಕಾಯ್ದೆ 1988.

ಕೇಂದ್ರ ಮೋಟಾರು ವಾಹನ ನಿಯಮಗಳು 1989.

ಕರ್ನಾಟಕ ಮೋಟಾರು ವಾಹನ ನಿಯಮಗಳು 1989.

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957.

ಕರ್ನಾಟಕ ಮೋಟಾರು ವಾಹನ ತೆರಿಗೆ ನಿಯಮಗಳು 1957 ಪರಾಮರ್ಶಿಸಬಹುದು.

© Content Owned & Site maintained by Transport Department, Karnataka State Government.
Visitors Count :: 3634350 | Site Last updated on :: 25-05-2018