Monday, August 19, 2019,

Menu

 
Back

ಕಂತು ಕರಾರು ಒಪ್ಪಂದ ರದ್ದತಿ/ ಲೀಸ್ ಒಪ್ಪಂದ ರದ್ದತಿ

ಲಗತ್ತಿಸಬೇಕಾದ ದಾಖಲೆಗಳು :

  • ನಮೂನೆ 35 ರಲ್ಲಿ ಅರ್ಜಿ ಸಿಎಂವಿಆರ್.
  • ಶುಲ್ಕ ರೂ.100/-
  • ನೋಂದಣಿ ಪತ್ರ, ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ, ಅರ್ಹತಾ ಪತ್ರ,
  • ಪೈನಾನ್ಸ್ದಾರರ ಒಪ್ಪಿಗೆ ಪತ್ರ.
  • ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
  • ಹಸಿರು ತೆರಿಗೆ ರೂ.200/- (ಸಾರಿಗೆ ವಾಹನ 7 ವರ್ಷ ಪೂರೈಸಿದ್ದಲ್ಲಿ).
  • ಸಾರಿಗೇತರ ವಾಹನವಾಗಿದ್ದಲ್ಲಿ ದ್ವಿ-ಚಕ್ರ ರೂ. 250, ಮೋಟಾರು ಕಾರು ರೂ.500/-

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಕಛೇರಿಯ ನೋಂದಣಿ ವಿಭಾಗದಲ್ಲಿ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ ವಾಹನದ ಕಂತು ಕರಾರು ಒಪ್ಪಂದ/ ಲೀಸ್ ಒಪ್ಪಂದ ನಮೂದು ಅಥವಾ ಕಂತು ಕರಾರು ರದ್ದತಿ/ ಲೀಸ್ ಒಪ್ಪಂದ ರದ್ದತಿ ನಮೂದಿಸಿದ ಸ್ಮಾರ್ಟ್ ಕಾರ್ಡ್ನ್ನು "ಸಕಾಲ" ನಿಯಮದಡಿ ನಿಗದಿಪಡಿಸಿರುವ ನಿರ್ಧಿಷ್ಟ ಸಮಯದಲ್ಲಿ ನೋಂದಣಿದಾರರಿಗೆ ಸ್ಟೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.
© Content Owned & Site maintained by Transport Department, Karnataka State Government.
Visitors Count :: 5849022 | Site Last updated on :: 03-08-2019