Tuesday, February 20, 2018,

Menu

 
Back

ನಕಲು ನೋಂದಣಿ ಪತ್ರ ನೀಡುವ ಬಗ್ಗೆ

(ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 53 ಹಾಗೂ ಕರ್ನಾಟಕ ಮೋಟಾರು ವಾಹನಗ ನಿಯಮಗಳು 1989 ರ ನಿಯಮ 40, 41 & 42 ಗಮನಿಸಿ)

ಲಗತ್ತಿಸಬೇಕಾದ ದಾಖಲೆಗಳು

  1. ನಮೂನೆ 26 ರಲ್ಲಿ ಅರ್ಜಿ ಸಿಎಂವಿಆರ್.
  2. ಪೈನಾನ್ಸ್ ಇದ್ದಲ್ಲಿ ದ್ವಿಪ್ರತಿಯಲ್ಲಿ.
  3. ನೋಂದಣಿ ಶುಲ್ಕದ ಅರ್ಧದಷ್ಟು ಶುಲ್ಕ.
  4. ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ, ಅರ್ಹತಾ ಪತ್ರ.
  5. ಪೈನಾನ್ಸ್ದಾರರ ಒಪ್ಪಿಗೆ ಪತ್ರ.
  6. ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
  7. ಹಸಿರು ತೆರಿಗೆ ರೂ.200/- (ಸಾರಿಗೆ ವಾಹನ 7 ವರ್ಷ ಪೂರೈಸಿದ್ದಲ್ಲಿ).
  8. ಸಾರಿಗೇತರ ವಾಹನವಾಗಿದ್ದಲ್ಲಿ ದ್ವಿ-ಚಕ್ರ ರೂ. 250, ಮೋಟಾರು ಕಾರು ರೂ.500/-
  9. ಹರಿದ/ ಹಾಳಾದ/ ವಿರೂಪಗೊಂಡ/ ಪೂರ್ತಾ ಮುಗಿದ ನೋಂದಣಿ ಪತ್ರ.
  10. 2 ಪಾಸ್ ಪೋರ್ಟ್ ಸೈಜ್ ಅಳತೆಯ ಬಾವ ಚಿತ್ರ.

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಕಛೇರಿಯ ನೋಂದಣಿ ವಿಭಾಗದಲ್ಲಿ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ ಸದರಿ ವಾಹನಕ್ಕೆ ನಕಲು ನೋಂದಣಿ ಪತ್ರ ಸಿದ್ದಪಡಿಸಿ ಹಿಂಬರಹದೊಂದಿಗೆ ಸ್ಮಾರ್ಟ್ ಕಾರ್ಡ್ನ್ನು "ಸಕಾಲ" ನಿಯಮದಡಿ ನಿಗದಿಪಡಿಸಿರುವ ನಿರ್ಧಿಷ್ಟ ಸಮಯದಲ್ಲಿ ನೋಂದಣಿದಾರರಿಗೆ ಸ್ಟೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು.

ಸೂಚನೆ: ಹೆಚ್ಚಿನ ಮಾಹಿತಿಗಾಗಿ

ಮೋಟಾರು ವಾಹನ ಕಾಯ್ದೆ 1988.

ಕೇಂದ್ರ ಮೋಟಾರು ವಾಹನ ನಿಯಮಗಳು 1989.

ಕರ್ನಾಟಕ ಮೋಟಾರು ವಾಹನ ನಿಯಮಗಳು 1989.

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957.

ಕರ್ನಾಟಕ ಮೋಟಾರು ವಾಹನ ತೆರಿಗೆ ನಿಯಮಗಳು 1957 ಪರಾಮರ್ಶಿಸಬಹುದು.

© Content Owned & Site maintained by Transport Department, Karnataka State Government.
Visitors Count :: 3099310 | Site Last updated on :: 20-02-2018