Wednesday, November 14, 2018,

Menu

 
Back

ಹೊಸ ನೋಂದಣಿ ಪತ್ರ ನೀಡುವ ಬಗ್ಗೆ (FRC) (ಆರ್ಥಿಕ ನೆರವುದಾರರು ವಾಹನ ವಶಪಡಿಸಿಕೊಂಡಾಗ)

(ಮೋಟಾರು ವಾಹನ ಕಾಯ್ದೆ 1988 ರ ಕಲ 51 (5) ಹಾಗೂ ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 53 ಗಮನಿಸಿ)

ಲಗತ್ತಿಸಬೇಕಾದ ದಾಖಲೆಗಳು

  1. ನಮೂನೆ 36 ರಲ್ಲಿ ಅರ್ಜಿ ಸಿಎಂವಿಆರ್.
  2. ವಾಹನ ಗ್ಯಾರೇಜ್ನಲ್ಲಿ ನಿಲ್ಲಿಸಿರುವ ವಿವರ.
  3. ತೆರಿಗೆ ಪಾವತಿಸಿದ ವಿವರ.
  4. ಶುಲ್ಕ ಸಿಎಂವಿಆರ್ ನಿಯಮ 81 ರಲ್ಲಿ ತಿಳಿಸಿರುವಂತೆ ಪಾವತಿಸಬೇಕು. ತಡವಾಗಿದ್ದಲ್ಲಿ ದಂಡ ಶುಲ್ಕ ಪ್ರತಿ ತಿಂಗಳಿಗೆ ರೂ.25/- ರಂತೆ ಗರಿಷ್ಟ ದಂಡದ ಮೊತ್ತ ರೂ.100/- ಪಾವತಿಸಬೇಕು
  5. ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
  6. ಹಸಿರು ತೆರಿಗೆ.

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಕಛೇರಿಯ ನೋಂದಣಿ ವಿಭಾಗದಲ್ಲಿ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ ನೋಂದಣಿ ಮಾಲೀಕರಿಗೆ ನಮೂನೆ 37 ರಲ್ಲಿ ನೋಂದಾಯಿತ ಅಂಚೆ ಮುಖಾಂತರ ನೋಟೀಸ್ ಜಾರಿಮಾಡಿ, ಸದರಿ ನೋಟೀಸ್ ತಲುಪಿದ 7 ದಿನಗಳೊಳಗಾಗಿ ವಿವರಣೆ ಸಲ್ಲಿಸಲು ಹಾಗೂ ನೋಂದಣಿ ಪತ್ರವನ್ನು ಕಛೇರಿಗೆ ಹಿಂದಿರುಗಿಸಲು ಸೂಚಿಸಲಾಗುವುದು. ನೋಂದಣಿ ಮಾಲೀಕರು ಈ ನೋಟೀಸ್ ಸ್ವೀಕರಿಸಿ, ಅಂಚೆ ಸ್ವೀಕೃತಿ ಬಂದಲ್ಲಿ ಹಾಗೂ ಈ ನೋಟಿಸ್ಗೆ ಅವರ ಏನಾದರೂ ವಿವರಣೆ ಇದ್ದಲ್ಲಿ ಪರಿಶೀಲಿಸಿ ನಿಯಮಾನುಸಾರ ವಾಹನಕ್ಕೆ ಹೊಸ ನೋಂದಣಿ ಪತ್ರ ನೀಡಲಾಗುವುದು ಮತ್ತು ಸ್ಮಾರ್ಟ್ ಕಾರ್ಡ್ನ್ನು "ಸಕಾಲ" ನಿಯಮದಡಿ ನಿಗದಿಪಡಿಸಿರುವ ನಿರ್ಧಿಷ್ಟ ಸಮಯದಲ್ಲಿ ನೋಂದಣಿ ಮಾಲೀಕರಿಗೆ ಸ್ಟೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು.

© Content Owned & Site maintained by Transport Department, Karnataka State Government.
Visitors Count :: 4576509 | Site Last updated on :: 13-11-2018