Monday, August 19, 2019,

Menu

 
Back

ಹೊಸ ವಾಹನ ನೋಂದಣಿ ಮಾಡಲು ಇರುವ ವಿಧಾನ

(ಕೇಂದ್ರ ಮೋಟಾರು ವಾಹನ ಕಾಯ್ದೆ ಕಲಂ 39, 40, 41 ಗಮನಿಸಿ)

ಡೀಲರ್ ರವರಿಂದ ಯಾವುದೇ ಅರ್ಜಿದಾರ ವಾಹನ ಖರೀದಿಸಿದ ನಂತರ ಇಂಟರ್ನೆಟ್ ತಂತ್ರಾಂಶದಲ್ಲಿರುವ ಆನ್ಲೈನ್ ಮುಖಾಂತರ "ಸಾರಿಗೆ ಇಲಾಖೆಯ" ವೆಬ್ ಸೈಟ್ http://transport.karnataka.gov.in ನಲ್ಲಿ ಅರ್ಜಿ ತುಂಬಿ ಅದನ್ನು ಸೇವ್ ಮಾಡಿ ಗಣಕಯಂತ್ರದಲ್ಲಿ VOWID (Vahan Over Web Identity) ನಂಬರ್ ಪಡೆದು ಅದನ್ನು ಜನರೇಟ್ ಮಾಡಿ ನಮೂನೆ-20 ಪ್ರಿಂಟ್ ತೆಗೆದುಕೊಂಡು ಅದನ್ನು ನೋಂದಣಿ ಪ್ರಾಧಿಕಾರಕ್ಕೆ ಅವಶ್ಯಕ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಲಗತ್ತಿಸಬೇಕಾದ ದಾಖಲೆಗಳು

 1. ನಮೂನೆ 20 (ಸಿ.ಎಂ.ವಿ.ಆರ್)
 2. ವಾಹನಕ್ಕೆ ಹಣಕಾಸು ನೆರವು ಪಡೆದಿದ್ದಲ್ಲಿ ದ್ವಿಪ್ರತಿಯಲ್ಲಿ ಸಲ್ಲಿಸಬೇಕು.
 3. ಮಾರಾಟ ಪತ್ರ ನಮೂನೆ -21 (ಸಿ.ಎಂ.ವಿ.ಆರ್)
 4. ರಸ್ತೆ ಸಂಚಾರ ಯೋಗ್ಯತಾ ಪ್ರಮಾಣ ಪತ್ರ ನಮೂನೆ 22 (ಸಿ.ಎಂ.ವಿ.ಆರ್)
 5. ಸಾರಿಗೆ ವಾಹನಗಳಿಗೆ ಅರ್ಹತಾ ಪರೀಕ್ಷೆಯ ನಮೂನೆ ಕೆ.ಎಂ.ವಿ. 20
 6. ನಮೂನೆ 22ಎ ಮಾಲಿನ್ಯ ಗುಣಮಟ್ಟ ಮತ್ತು ಬಿಡಿಭಾಗಗಳ ಸುರಕ್ಷತಾ ಗುಣಮಟ್ಟ, ರಸ್ತೆ ಸಂಚಾರ ಯೋಗ್ಯತಾ ಪ್ರಮಾಣ ಪತ್ರ, ಪ್ರತ್ಯೇಕವಾಗಿ ವಾಹನ ನಿರ್ಮಿಸಿದ್ದಲ್ಲಿ ದೃಢೀಕರಣ ಪತ್ರ.
 7. ಯಾವುದೇ ಪ್ರಾಧಿಕಾರ ನೀಡಿದ ತಾತ್ಕಾಲಿಕ ನೋಂದಣಿ/ಡೀಲರ್ ನೀಡಿರುವ ಟ್ರೇಡ್ ಸರ್ಟಿಫೀಕೆಟ್
 8. ವಿಮಾ ಪ್ರಮಾಣ ಪತ್ರ
 9. ವಿಳಾಸ ಪುರಾವೆ ದೃಢೀಕರಣ (ಪಡಿತರ ಚೀಟಿ, ಪಾಸಪೋರ್ಟ್, ವಿದ್ಯುಚ್ಛಕ್ತಿ ಬಿಲ್, ಟೆಲಿಪೋನ್ ಬಿಲ್, ವಾಟರ್ ಬಿಲ್ ಇತರೆ)
 10. ತೆರಿಗೆ ರಸೀದಿ.
 11. ಶುಲ್ಕ ಪಾವತಿಸಿದ ರಸೀದಿ.
 12. ಆಮದು ವಾಹನ ಆಗಿದ್ದಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್ ಸರ್ಟಿಫೀಕೆಟ್
 13. ಸಾರಿಗೆ ವಾಹನ ಆಗಿದ್ದಲ್ಲಿ ಅರ್ಹತಾ ಪತ್ರದ ಶುಲ್ಕ
 14. ವಾಹನಕ್ಕೆ ಪೈನಾನ್ಸ್ ಇದ್ದಲ್ಲಿ ಕಂತು ಕರಾರು ಒಪ್ಪಂದ ಶುಲ್ಕ
 15. ಸ್ಮಾರ್ಟ್ಕಾರ್ಡ್ ಶುಲ್ಕ ರೂ.200/-
 16. ಆದಾಯ ತೆರಿಗೆ ಪಾನ್ ಕಾರ್ಡ್/ನಮೂನೆ 60 ಮತ್ತು 61
 17. ಸಂಬಂಧಪಟ್ಟ ತಹಶೀಲ್ದಾರ್ರಿಂದ ನೀಡಿದ ಕೃಷಿ ಪ್ರಮಾಣ ಪತ್ರ (ಟ್ಯಾಕ್ಟರ್/ ಟ್ರೈಲರ್ ನೋಂದಣಿಗಾಗಿ)
 18. ಇನ್ವ್ಯಾಲಿಡ್ ಕ್ಯಾರೇಜ್ ಆಗಿದ್ದಲ್ಲಿ ಸರ್ಕಾರದಿಂದ ನೀಡಿರುವ ಮಾನ್ಯತಾ ಪ್ರಮಾಣ ಪತ್ರ
 19. ಮುಂಗಡ ನೋಂದಣಿ ಸಂಖ್ಯೆ ಹಂಚಿಕೆ ಪತ್ರ
 20. ಮುಂಗಡ ನೋಂದಣಿ ಸಂಖ್ಯೆಗೆ ಪಾವತಿಸಬೇಕಾದ ಶುಲ್ಕ (ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 46 ಎ ಗಮನಿಸಿ)
  Advance/Fancy Registration Number Fees:
  ಕೌಟುಂಬಿಕತೆ ಅದೇ ಶ್ರೇಣಿಯಲ್ಲಿ  ಮುಂಗಡ ಶ್ರೇಣಿ ಆದಲ್ಲಿ
  ದ್ವಿ ಚಕ್ರವಾಹನಗಳಿಗೆ ರೂ. 6000/- ರೂ. 25000/-
  ಮೋಟಾರು ಕಾರ್ಗಳಿಗೆ ರೂ. 20000/- ರೂ. 75000/-
  ಇತರೆ ವಾಹನಗಳಿಗೆ ರೂ. 30000/- ರೂ. 75000/-
   

  ಸೂಚನೆ:

  • ಹಾಲಿ ನಡೆಯುತ್ತಿರುವ ನೋಂದಣಿ ಶ್ರೇಣಿಯ ವಾಹನಗಳ 1000 ನೋಂದಣಿ ಸಂಖ್ಯೆಯಲ್ಲಿ ಅದೇ ದಿನ ಯಾವುದೇ ಅರ್ಜಿದಾರ ಅರ್ಜಿ ಸಲ್ಲಿಸಿದಾಗ ನಿಗದಿತ ಶುಲ್ಕ ಪಾವತಿಸಿದ್ದಲ್ಲಿ ಸಂಬಂಧಪಟ್ಟ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ/ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಅರ್ಜಿದಾರರು ಕೋರಿರುವ ನೋಂದಣಿ ಸಂಖ್ಯೆ ಹಂಚಿಕೆ ಮಾಡಬಹುದು.
  • ಹಾಲಿ ನಡೆಯುತ್ತಿರುವ ನೋಂದಣಿ ಶ್ರೇಣಿಯ 1000 ಕ್ಕಿಂತಲೂ ಹೆಚ್ಚಿನ ನೋಂದಣಿ ಸಂಖ್ಯೆ ಬೇಕಾಗಿದ್ದಲ್ಲಿ ಸಾರಿಗೆ ಆಯುಕ್ತರ ಕಛೇರಿಯಲ್ಲಿ ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ ಇವರ ಹೆಸರಿಗೆ ತೆಗೆದ ಡಿ.ಡಿ.ಯನ್ನು ನಮೂನೆ 21 ಮಾರಾಟ ಪತ್ರದೊಂದಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಮುಂಗಡ ನೋಂದಣಿ ಸಂಖ್ಯೆಯ ಹೆಚ್ಚಿನ ಮಾಹಿತಿಗಾಗಿ ಇಚ್ಛೆಯುಳ್ಳವರು ಸಾರಿಗೆ ಇಲಾಖೆಯ ವೆಬ್ಸೈಟ್ http://transport.karnataka.gov.in ಗೆ ಲಾಗ್ ಆಗಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು.)
  • ಸಾರಿಗೇತರ ವಾಹನಗಳಿಗೆ ಜೀವಾವಧಿ ತೆರಿಗೆಯನ್ನು ವಾಹನ ಖರೀದಿಸಿದ ಇನ್ವಾಯಿಸ್ ಮುಖಬೆಲೆ ಮೇಲೆ ಲೆಕ್ಕ ಹಾಕಲಾಗುವುದು. ಸಾರಿಗೆ ವಾಹನಗಳು 6+1 ಆಸನ ಸಾಮಥ್ರ್ಯವಿದ್ದಲ್ಲಿ ಅದರ ಖರೀದಿ ಮೊತ್ತ ರೂ.15.00 ಲಕ್ಷ ಮೀರಿದ್ದರೆ ಅದರ ಆಧಾರದ ಮೇಲೆ ಜೀವಾವಧಿ ತೆರಿಗೆ ಲೆಕ್ಕಹಾಕಲಾಗುವುದು.
  • ಎರಡು ಪಾಸ್ಪೋರ್ಟ್ ಸೈಜ್ ಅಳತೆಯ ಭಾವಚಿತ್ರ ಸಲ್ಲಿಸಬೇಕು.

ದಾಖಲೆಗಳ ವಿಲೇವಾರಿ:

ಹೊಸ ವಾಹನಗಳ ನೋಂದಣಿ ಅರ್ಜಿದಾರರು/ನೋಂದಣಿ ಮಾಲೀಕರು ತಮ್ಮ ಅರ್ಜಿಯ ಜೊತೆ ಅವಶ್ಯಕ ಮೊತ್ತದ ಸ್ಟಾಂಪ್ ಹಚ್ಚಿರುವ ಸ್ವವಿಳಾಸದ ಲಕೋಟೆ ಸಲ್ಲಿಸಿರಬೇಕು. ವಾಹನ ನೋಂದಣಿಯಾದ ನಂತರ "ಸಕಾಲ"ದಲ್ಲಿ ನಿಗದಿಪಡಿಸಿರುವ ಅವಧಿಯೊಳಗೆ ನೋಂದಣಿ ಪತ್ರದ ಸ್ಮಾರ್ಟ್ಕಾರ್ಡ್ನ್ನು ಸ್ಪೀಡ್ ಪೋಸ್ಟ್ ಮುಖಾಂತರ ನೋಂದಣಿದಾರರ ವಿಳಾಸಕ್ಕೆ ಕಳುಹಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.  

© Content Owned & Site maintained by Transport Department, Karnataka State Government.
Visitors Count :: 5848990 | Site Last updated on :: 03-08-2019