Monday, August 20, 2018,

Menu

 
Back

ಮಾಲೀಕರು ಮರಣ ಹೊಂದಿದ ಸಮಯದಲ್ಲಿ ಮಾಲೀಕತ್ವ ವರ್ಗಾವಣೆ ನಮೂದು

(ಮೋಟಾರು ವಾಹನ ಕಾಯ್ದೆ 1988 ರ ಕಲಂ 50 & ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 56 ಗಮನಿಸಿ)

ಯಾವುದೇ ವಾಹನ ಮಾಲೀಕ ಮರಣ ಹೊಂದಿದಲ್ಲಿ ಇವರ ವಾರಸುದಾರರು 30 ದಿನಗಳೊಳಗಾಗಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಛೇರಿಗೆ ಪತ್ರದ ಮುಖೇನ ಮರಣದ ಮಾಹಿತಿ ತಿಳಿಸಬೇಕಾಗುತ್ತದೆ.

ಲಗತ್ತಿಸಬೇಕಾದ ದಾಖಲೆಗಳು

  1. ನಮೂನೆ 31 ಸಿಎಂವಿಆರ್
  2. ಪೈನಾನ್ಸ್ ಇದ್ದಲ್ಲಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು
  3. ಶುಲ್ಕ ಸಿಎಂವಿಆರ್ ನಿಯಮ 81 ರಲ್ಲಿ ತಿಳಿಸಿರುವಂತೆ ಪಾವತಿಸಬೇಕು. ತಡವಾಗಿದ್ದಲ್ಲಿ ದಂಡ ಶುಲ್ಕ ಪ್ರತಿ ತಿಂಗಳಿಗೆ ರೂ.25/- ರಂತೆ ಗರಿಷ್ಟ ದಂಡದ ಮೊತ್ತ ರೂ.100/- ಪಾವತಿಸಬೇಕು
  4. ರೂ.200/- ಸ್ಮಾರ್ಟ್ ಕಾರ್ಡ್ ಶುಲ್ಕ.
  5. ನೋಂದಣಿ ಪತ್ರ, ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ, (ಸಾರಿಗೆ ವಾಹನವಾಗಿದ್ದಲ್ಲಿ) ರಹದಾರಿ ನಡಾವಳಿ, ಅರ್ಹತಾ ಪತ್ರ
  6. ಮರಣ ಸಮರ್ಥನಾ ಪತ್ರ.
  7. ಸಂಬಂಧಪಟ್ಟ ಪ್ರಾಧಿಕಾರದಿಂದ ನೀಡಿದ ವಾರಸುದಾರರ ದೃಢೀಕರಣ ಪತ್ರ.
  8. ಕುಟುಂಬದ ಇತರೆ ಸದಸ್ಯರ ಒಪ್ಪಿಗೆ ಪತ್ರ / ಅಫಿಡವಿಟ್.
  9. ವಿಳಾಸ ಪುರಾವೆ
  10. 2 ಪಾಸ್ ಪೊರ್ಟ್ ಅಳತೆಯ ಭಾವ ಚಿತ್ರ.

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಕಛೇರಿಯ ನೋಂದಣಿ ವಿಭಾಗದಲ್ಲಿ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ ಮಾಲೀಕತ್ವ ವರ್ಗಾವಣೆ ನಮೂದಿಸಿದ ನಂತರ "ಸಕಾಲ" ನಿಯಮದಡಿ ನಿಗದಿಪಡಿಸಿರುವ ನಿರ್ಧಿಷ್ಟ ಸಮಯದಲ್ಲಿ ನೋಂದಣಿದಾರರಿಗೆ ಸ್ಟೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.  

© Content Owned & Site maintained by Transport Department, Karnataka State Government.
Visitors Count :: 4162240 | Site Last updated on :: 14-08-2018