Sunday, March 24, 2019,

Menu

 
Back

ಇತರೆ ರಾಜ್ಯಗಳಿಂದ ವಲಸೆ ಬಂದಂತಹ ವಾಹನಗಳ ಮಾಲೀಕತ್ವ ವರ್ಗಾವಣೆ

 

ಮಾಲೀಕತ್ವ ವರ್ಗಾವಣೆಗೆ ಅನುಸರಿಸಬೇಕಾದ ಎಲ್ಲಾ ವಿದಿವಿದಾನಗಳು/ ಶುಲ್ಕಗಳು/ ದಾಖಲೆಗಳು ಸಹ ಇದಕ್ಕೆ ಅನ್ವಯಿಸುತ್ತವೆ ಇದರ ಜೊತೆಗೆ ನಮೂನೆ 27 ಸಿಎಂವಿಆರ್, ನಮೂನೆ 27 ಕೆಎಂವಿಆರ್, ಹೊರ ರಾಜ್ಯದಿಂದ ನಮೂನೆ 28 ರಲ್ಲಿ ದ್ವಿಪ್ರತಿಯಲ್ಲಿ ನೀಡಿದ ಆಕ್ಷೇಪಣಾ ರಹಿತ ಪತ್ರ ಸಲ್ಲಿಸಬೇಕು. ವಾಹನದ ಇನ್ವಾಯ್ಸ್/ ವಾಹನದ ನೋಂದಣಿ ದಿನಾಂಕಕ್ಕೆ ಅನುಗುಣವಾಗಿ ತೆರಿಗೆ ಲೆಕ್ಕಾಚಾರ ಹಾಕಿ/ ಆಕರಿಸಿ ಅದರಂತೆ ರೂ.3500/- ಕ್ಕಿಂತ ತೆರಿಗೆ ಮೊತ್ತ ಹೆಚ್ಚಾಗಿದ್ದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಸರಿಗೆ ತೆಗೆದ ಡಿಡಿ ಮುಖಾಂತರ ಸಲ್ಲಿಸಬೇಕಾಗುತ್ತದೆ ಮತ್ತು ವಾಹನವನ್ನು ತಪಾಸಣೆಗೆ ಒಳಪಡಿಸಿ ಮೋಟಾರು ವಾಹನ ತನಿಖಾಧಿಕಾರಿಗಳಿಂದ ವರದಿ ಪಡೆಯಬೇಕಾಗಿರುತ್ತದೆ. ಇನ್ನುಳಿದಂತೆ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ನಿಯಮ ವಿದಿವಿಧಾನಗಳು ಇದಕ್ಕೂ ಅನ್ವಯಿಸುತ್ತವೆ. ಮತ್ತು ಕಛೇರಿಯಲ್ಲಿ ಸಲ್ಲಿಸಿದ ಅರ್ಜಿ ಪರಿಷ್ಕರಿಸಿ ಸಂಬಂಧಪಟ್ಟ ಹೊರ ರಾಜ್ಯಕ್ಕೆ ಆಕ್ಷೇಪಣಾ ರಹಿತ ಪತ್ರ ದೃಢೀಕರಿಸಲು ನೋಂದಾಯಿತ ಅಂಚೆ ಮೂಲಕ ಪತ್ರ ಬರೆಯಲಾಗುವುದು. ಆ ಕಛೇರಿಯಿಂದ ಸ್ವೀಕೃತಿ ಪತ್ರ/ ದೃಢೀಕರಣ ಪತ್ರ ಆದರಿಸಿ ವಿಳಾಸ ಬದಲಾವಣೆ/ ಮಾಲೀಕತ್ವ ವರ್ಗಾವಣೆ ನಮೂದಿಸಿ ಸಂಬಂಧಪಟ್ಟ ನೋಂದಣಿದಾರರಿಗೆ ಸ್ಪೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು.

(ಮೋಟಾರು ವಾಹನ ಕಾಯ್ದೆ 1988 ರ ಕಲಂ 50 & ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 55 ಗಮನಿಸಿ)

ಲಗತ್ತಿಸಬೇಕಾದ ದಾಖಲೆಗಳು

  1. ನಮೂನೆ 29 ದ್ವಿ-ಪ್ರತಿಯಲ್ಲಿ ಸಿಎಂವಿಆರ್.
  2. ನಮೂನೆ 30 (ವಾಹನಕ್ಕೆ ಪೈನಾನ್ಸ್ ಇದ್ದಲ್ಲಿ ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು ಸಿಎಂವಿಆರ್.
  3. ಪಾವತಿಸಬೇಕಾದ ಶುಲ್ಕ
    • ನಾಲ್ಕು ಚಕ್ರ ವಾಹನಕ್ಕೆ ರೂ.100/-
    • ಸಾರಿಗೆ ಲಘು ವಾಣಿಜ್ಯ ವಾಹನಕ್ಕೆ ರೂ.150/-
    • ಮಧ್ಯಮ ಗಾತ್ರದ ವಾಹನಕ್ಕೆ ರೂ.200/-
    • ಭಾರೀ ವಾಹನಕ್ಕೆ ರೂ.300/-
    • ಸಾರಿಗೇತರ (ಕಾರು) ಆಮದು ವಾಹನಕ್ಕೆ ರೂ.400/-
    • ಸಾರಿಗೇತರ ದ್ವಿ-ಚಕ್ರ ಆಮದು ವಾಹನಕ್ಕೆ ರೂ.100/-
    • ಇತರೆ ವಾಹನಗಳಿಗೆ ರೂ.150/-
    • ಕಂತು ಕರಾರು ಒಪ್ಪಂದ/ ರದ್ದತಿ ರೂ.100/-
    • ಸ್ಮಾರ್ಟ್ ಕಾರ್ಡ್ ಶುಲ್ಕ ರೂ.200/-
    • ತಡವಾದ ಅರ್ಜಿಗೆ ದಂಡ ಶುಲ್ಕ ಪ್ರತಿ ತಿಂಗಳಿಗೆ ರೂ.25/- ಗರಿಷ್ಟ ಮೊತ್ತ ರೂ.100/- ಪಾವತಿಸಬೇಕು.
  4. ರಾಜ್ಯದ ಇತರೆ ಪ್ರಾದೇಶಿಕ ಸಾರಿಗೆ ಕಛೇರಿಗಳಿಂದ ಪಡೆದ ತೀರುವಳಿ ಪತ್ರ (ದ್ವಿ ಚಕ್ರ ವಾಹನ ಹೊರತುಪಡಿಸಿ ಇತರೆ ವಾಹನಗಳಿಗೆ)
  5. ನೋಂದಣಿ ಪತ್ರ, ವಿಮಾ ಪತ್ರ, ತೆರಿಗೆ ಪತ್ರ, ಮಾಲಿನ್ಯ ನಿಯಂತ್ರಣ ಪತ್ರ, ಅರ್ಹತಾ ಪತ್ರ (ಸಾರಿಗೆ ವಾಹನವಾಗಿದ್ದಲ್ಲಿ)
  6. ವಿಳಾಸ ಪುರಾವೆ (ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 4 ರಲ್ಲಿ ತಿಳಿಸಿರುವಂತೆ)

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಕಛೇರಿಯ ನೋಂದಣಿ ವಿಭಾಗದಲ್ಲಿ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಬೇಕು. ಮಾಲೀಕತ್ವ ವರ್ಗಾವಣೆ ನಮೂದಿಸಿದ ನಂತರ "ಸಕಾಲ" ನಿಯಮದಡಿ ನಿಗದಿಪಡಿಸಿರುವ ನಿರ್ಧಿಷ್ಟ ಸಮಯದಲ್ಲಿ ನೋಂದಣಿದಾರರಿಗೆ ಸ್ಟೀಡ್ ಪೋಸ್ಟ್ ಮುಖಾಂತರ ದಾಖಲೆಗಳನ್ನು ಕಳುಹಿಸಲಾಗುವುದು ಇದನ್ನು ಸಕಾಲ ವೆಬ್ ಸೈಟ್ನಲ್ಲಿಯೂ ಸಹ ವೀಕ್ಷಿಸಬಹುದು.

 

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.

© Content Owned & Site maintained by Transport Department, Karnataka State Government.
Visitors Count :: 5143076 | Site Last updated on :: 22-03-2019