Monday, August 19, 2019,

Menu

 
Back

ತೆರಿಗೆ ಹಿಂಪಾವತಿ

ಯಾವುದೇ ವಾಹನ ಮಾಲೀಕರು ತಮ್ಮ ವಾಹನಕ್ಕೆ ಹೆಚ್ಚಿನ ತೆರಿಗೆ ಪಾವತಿಸಿದ್ದಲ್ಲಿ ಮತ್ತು ವಾಹನ ರಸ್ತೆಯಲ್ಲಿ ಬಳಸದೆ ಇದ್ದಲ್ಲಿ ಅಥವಾ ವಾಹನವು ಇತರೆ ರಾಜ್ಯಕ್ಕೆ ವಲಸೆ ಹೋಗಿದ್ದಲ್ಲಿ ಮತ್ತು ವಾಹನದ ನೋಂದಣಿ ಪತ್ರ ರದ್ದಾದಲ್ಲಿ ಈ ಎಲ್ಲಾ ಅಗತ್ಯ ಪುರಾವೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಮೂನೆ 16 ರಲ್ಲಿ ಅರ್ಜಿ ಸಲ್ಲಿಸಿ ತೆರಿಗೆ ಹಿಂಪಾವತಿ ಪಡೆಯಲು ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 7 ರಲ್ಲಿ ಅವಕಾಶ ನೀಡಲಾಗಿದೆ.

ಲಗತ್ತಿಸಬೇಕಾದ ದಾಖಲೆಗಳು

ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಕಛೇರಿಯ ನೋಂದಣಿ ವಿಭಾಗದಲ್ಲಿ ಸ್ವವಿಳಾಸ ಹೊಂದಿದ ಲಕೋಟೆಯೊಂದಿಗೆ ಸಲ್ಲಿಸಬೇಕು. ಈ ವಾಹನದ ತೆರಿಗೆ ಕಛೇರಿಯಲ್ಲಿ ಪಾವತಿ/ ಜಮಾ ಆಗಿರುವುದನ್ನು ಕಛೇರಿಯ ಖಜಾನೆ ವಿಭಾಗದ ತೆರಿಗೆ ಷೆಡ್ಯೂಲ್ನಲ್ಲಿ ಪರಿಶೀಲಿಸಿ ದೃಢೀಕರಿಸಿಕೊಂಡು, ಆಡಿಟ್ ವಿಭಾಗದ ಷರಾ ಪಡೆದು ವಾಹನದ ಹೆಚ್ಚುವರಿ ತೆರಿಗೆಯನ್ನು ನೋಂದಣಿ ಮಾಲೀಕರಿಗೆ ತೆರಿಗೆ ಹಿಂಪಾವತಿಸಲು ರೀಫಂಡ್ ಆರ್ಡರ್ ಸಿದ್ದಪಡಿಸಿ ನೋಂದಾಯಿತ ಅಂಚೆ ಮುಖಾಂತರ ಕಳುಹಿಸಲಾಗುವುದು.

  1. ನಮೂನೆ 16 ರಲ್ಲಿ ಅರ್ಜಿ
  2. ವಾಹನ ಅನುಪಯುಕ್ತತೆಯಲ್ಲಿ ಇದ್ದುದ್ದರ ಮಾಹಿತಿ.
  3. ಆಕ್ಷೇಪಣಾ ರಹಿತ ಪತ್ರ ಪಡೆದು ವಾಹನ ಹೊರ ರಾಜ್ಯಕ್ಕೆ ವಲಸೆ ಹೋಗಿದ್ದಲ್ಲಿ ಬೇರೆ ರಾಜ್ಯದ ಕಛೇರಿಯಲ್ಲಿ ಈ ವಾಹನ ನಮೂದಾಗಿರುವುದರ CRTI ದೃಢೀಕರಣ ಪತ್ರ ಮತ್ತು ಆ ರಾಜ್ಯದಲ್ಲಿ ತೆರಿಗೆ ಪಾವತಿಸಿದ ವಿವರ.
  4. ವಾಹನ ಅಪಘಾತವಾಗಿದ್ದಲ್ಲಿ ಪೊಲೀಸ್ ಪಿರ್ಯಾದು ಪ್ರತಿ ಮತ್ತು ವಾಹನ ಪರಿಶೀಲಿಸಿ ತನಿಖಾಧಿಕಾರಿಯು ನೀಡಿದ ತಪಾಸಣಾ ವರದಿ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.   

© Content Owned & Site maintained by Transport Department, Karnataka State Government.
Visitors Count :: 5848978 | Site Last updated on :: 03-08-2019