Menu

 
Back

ಯಾವಾಗ ಮತ್ತು ಯಾವ ರೀತಿಯಲ್ಲಿ ನಿರ್ವಾಹಕ ಲೈಸೆನ್ಸ್ ಅನ್ನು ನವೀಕರಿಸಬಹುದು

1.ಅವಶ್ಯಕವಿರುವ ಅರ್ಜಿ ಮತ್ತು ದಾಖಲಾತಿಗಳು

  • ನಿಗದಿತ ನಮೂನೆ 15 (KMVR 1989)
  • ವೈದ್ಯಕೀಯ ಪ್ರಮಾನ ಪತ್ರ ನಿಗದಿತ ನಮೂನೆ 13 (KMVR 1989)
  • ಸಿಂಧುತ್ವವಿರುವ ನಿರ್ವಾಹಕ ಅನುಜ್ಞಾ ಪತ್ರ
  • 3 ಪಾಸ್ ಪೋರ್ಟ್ ಭಾವಚಿತ್ರಗಳು
  • ಪ್ರಥಮ ಚಿಕಿತ್ಸಾ ಪ್ರಮಾಣ ಪತ್ರ (ಸೆಂಟ್ ಜಾನ್ಸ್ ಅಂಬುಲೆನ್ಸ್ ಅಸೋಸಿಯೇಷನ್ ರವರು ನೀಡಿರುವ ಪ್ರಮಾಣ ಪತ್ರ)

2.ನಿಗದಿತ ಶುಲ್ಕ (ಪ್ರಾಸಾಅ ನಗದು ಕೌಂಟರ್ ನಲ್ಲಿ ಪಾವತಿಸುವುದು)

  • ರೂ. 20/- (ನವೀಕರಣ ಅರ್ಜಿಯನ್ನು ಸಿಂಧುತ್ವ ಮುಗಿದ 30 ದಿವಸಗಳೊಗಾಗಿ ಅರ್ಜಿ ಸಲ್ಸಿಸಿದ ಪ್ರಕರಣಕ್ಕೆ ಸಂಬಂಧಿಸಿರುತ್ತದೆ.)
  • ಶುಲ್ಕ ರೂ.50/- (ಸಿಂಧುತ್ವ ಮುಗಿದ 30 ದಿವಸಗಳ ಅವಧಿ ನಂತರ ಅರ್ಜಿ ಸಲ್ಲಿಸಿದ ಪ್ರಕರಣಗಳಿಗೆ ಸಂಬಂಧಿಸುತ್ತದೆ)
  • ನಿರ್ವಾಹಕ ಅನುಜ್ಞಾ ಪತ್ರ ನವೀಕರಣಕ್ಕೆ ವಿಳಂಬವಾಗಿ ಅರ್ಜಿ ಸಲ್ಲಿಸಿದರೆ ಪ್ರತಿ ವರ್ಷ ಅಥವಾ ವರ್ಷದ ಭಾಗಕ್ಕೆ ಸಂಬಂಧಿಸಿದಂತೆ ಅಧಿಕ ಶುಲ್ಕ ರೂ. 50/-  ಪಾವತಿಸಬೇಕು. ಈ ಆವಕಾಶವು ಅನುಜ್ಞಾ ಪತ್ರ ಸಿಂಧುತ್ವ ಮುಕ್ತಾಯಗೊಂಡ 5 ವರ್ಷಗಳ ಅವಧಿಯ ನಂತರದ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ.

3.ಅರ್ಜಿಯನ್ನು ಎಲ್ಲಿಸಲ್ಲಿಸಬೇಕು?

ಅರ್ಜಿದಾರರು ಮೇಲೆ ತಿಳಿಸಿದ ದಾಖಲೆಗಳೊಂದಿಗೆ ಸಂಬಂಧಿಸಿದ ಚಾಲನಾ ಅನುಜ್ಞಾ ಪ್ರಾಧಿಕಾರದ ಕಛೇರಿಯಲ್ಲಿ ಸಲ್ಲಿಸಬೇಕು.

4.ನವೀಕರಿಸಿದ ನಿರ್ವಾಹಕ ಅನುಜ್ಞಾ ಪತ್ರದ ವಿತರಣೆ.

ನವೀಕರಿಸಿದ ನಿರ್ವಾಹಕ ಅನುಜ್ಞಾ ಪತ್ರವನ್ನು ಸಕಾಲ ಪ್ರಕಾರ 30 ದಿವಸದೊಳಗಾಗಿ ವಿತರಣೆ ಮಾಡಲಾಗುವುದು. (Sakala (KGSC Act 2011)).

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ / ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

© Content Owned & Site maintained by Transport Department, Karnataka State Government.
Visitors Count :: 3634375 | Site Last updated on :: 25-05-2018