Monday, August 26, 2019,

Menu

 
Back

ಯಾವಾಗ ಹಾಗೂ ಹೇಗೆ ವಾಹನ ಚಾಲನಾ ಅನುಜ್ಞಾ ಪತ್ರವನ್ನು ನವೀಕರಿಸಬೇಕು

ಮುಖ್ಯವಾಗಿ ಗಮನಿಸಬೇಕಾದ್ದು:  ಭಾರಿ ಸಾರಿಗೆ ವಾಹನಗಳ ಚಾಲನಾ ಅನುಜ್ಞಾ ಪತ್ರ ಹೊಂದಿರುವವರು ಸರ್ಕಾರದ ಅಧಿಸೂಚನೆ ದಿನಾಂಕ 16-10-2015ರ ಪ್ರಕಾರ ಒಂದು ದಿವಸದ ಪುನಶ್ಚೇತನ ಭೋದನಾ ವ್ಯವಸ್ಥೆ (refresher course) ತರಬೇತಿಗೆ ಇಲಾಖಾ ಭಾರಿ ಸಾರಿಗೆ ವಾಹನಗಳ ಚಾಲಕರ ತರಬೇತಿ ಪರೀಕ್ಷಾ ಸಂಸ್ಥೆಯಲ್ಲಿ ಹಾಜರಾಗಬೇಕು.

1.ಚಾಲನಾ ಅನುಜ್ಞಾ ಪತ್ರ ನವೀಕರಣಕ್ಕಾಗಿ ಕೆಳಕಂಡ ವಿಧಾನಗಳನ್ನು ಪಾಲಿಸಬೇಕು.

ಚಾಲನಾ ಅನುಜ್ಞಾ ಪತ್ರದ ಸಿಂಧುತ್ವವು ಮುಕ್ತಾಯಗೊಳ್ಳುವ 30 ದಿನದೊಳಗಾಗಿ ಸಂಬಂಧಿಸಿದ ಚಾಲನಾ ಅನುಜ್ಞಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು.

2.ಅರ್ಜಿ ಮತ್ತು ದಾಖಲೆಗಳು

  • ಅರ್ಜಿ ನಮೂನೆ -9 (CMVR) ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.
  • ದೇಹದಾಡ್ಯತೆ ಘೋಷಣೆ ನಮೂನೆ -1 (CMVR) ಮತ್ತು ವೈದ್ಯಕೀಯ ಪ್ರಮಾಣ ಪತ್ರ ನಮೂನೆ -1ಎ (ವಯೋಮಿತಿ 40 ವರ್ಷ ಮೀರಿರುವವರಿಗೆ ಅನ್ವಯಿಸುತ್ತದೆ.
  • ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ. (ಒಂದು ಅರ್ಜಿಗೆ ಮತ್ತು ಇನ್ನೊಂದು ವೈದ್ಯಕೀಯ ಪ್ರಮಾನ ಪತ್ರಕ್ಕೆ ಅಂಟಿಸಬೇಕು)
  • ಮೂಲ ಚಾಲನಾ ಅನುಜ್ಞಾ ಪತ್ರವನ್ನು ಲಗತ್ತಿಸಬೇಕು
  • ಸ್ವವಿಳಾಸ ಹೊಂದಿರುವ   ಅಂಚೆ ಲಕೋಟೆ “ಸಕಾಲ” ದ ಪ್ರಕಾರ 30 ದಿವಸಗಳೊಗಾಗಿ ಚಾಲನಾ ಅನುಜ್ಞಾ ಪತ್ರವನ್ನು ರವಾನಿಸಲಾಗುವುದು.

3.ಶುಲ್ಕ (ಪ್ರಾ.ಸಾ. ಅ ಕಛೇರಿಯ ನಗದು ಕೌಂಟರ್ಗಳಲ್ಲಿ)

  • ಸ್ಮಾರ್ಟ್ ಕಾರ್ಡ್ ರೂ.200/- + ನವೀಕರಣ ಶುಲ್ಕ ರೂ.50/- (ನಿಗದಿತ ಅವಧಿಯೊಳಗೆ ಸಿಂಧುತ್ವ ವಿರುವ ಪ್ರಕರಣ)
  • ಸಿಂಧುತ್ವ ಮುಗಿದಿರುವ ಹಾಗೂ ಕ್ಷಮಾ ಅವಧಿ 30 ದಿವಸಗಳು ವೀರಿರುವ ಪ್ರಕರಣಗಳಿಗೆ ಅಧಿಕ ಶುಲ್ಕ ಮೊದಲ ವರ್ಷಕ್ಕೆ ರೂ.50/- ಹಾಗೂ ನಂತರದ ಅವಧಿಯ ಪ್ರತಿ ವರ್ಷಕ್ಕೆ ರೂ.100/-ರಂತೆ ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಉ.ಸಾ.ಆ. ಮತ್ತು ಹಿ.ಪ್ರಾ.ಸಾ.ಅ. / ಪ್ರಾ.ಸಾ.ಅ / ಸ.ಪ್ರ.ಸಾ.ಅ ರವರನ್ನು ದಯವಿಟ್ಟು ಸಂಪರ್ಕಿಸಿ.

© Content Owned & Site maintained by Transport Department, Karnataka State Government.
Visitors Count :: 5886596 | Site Last updated on :: 23-08-2019