Sunday, June 24, 2018,

Menu

 
Back

ಮಜಲು ವಾಹನ (ಪಕ್ಕಾ ಪರ್ಮಿಟ್)

ಮಜಲು ವಾಹನ ರಹದಾರಿ

(ಮೋಟಾರು ವಾಹನ ಕಾಯ್ದೆ 1988 ರ ಕಲಂ 70, 71, 72 ಗಮನಿಸಿ)

ಮಜಲು ವಾಹನ ರಹದಾರಿ ಮಂಜೂರಾತಿ ವಿವರಗಳು (ಮೋಟಾರು ವಾಹನ ಕಾಯ್ದೆ 88 ನಿಯಮ 70,71,72)

ಎ. ಅರ್ಜಿಯ ಹಂತಗಳು –

  1. ನಮೂನೆ 35 ಕೆ.ಎಂ.ವಿ.ಆರ್ ರಲ್ಲಿ ಅರ್ಜಿಯನ್ನು ಸಂಭಂಧಿಸಿದ ಪ್ರಾ.ಸಾ.ಅ ರವರಿಗೆ ಸಲ್ಲಿಸುವುದು.
  2. ಶುಲ್ಕ – ರೂ.2000/- + 100/- ನಮೂದು ಶುಲ್ಕ, ಪ್ರ.ಸಾ.ಅ ಕಛೇರಿಯಲ್ಲಿ ನಗದು ಕೌಂಟರ್‍ನಲ್ಲಿ ಪಾವತಿಸುವುದು.
  3. ಮಾರ್ಗದ ಸ್ಕೆಚ್ ಪ್ರತಿ ಸ್ಟೇಜ್‍ಗೆ ಇರುವ ದೂರ ಮತ್ತು ಕೋರಿರುವ ಮಾರ್ಗ ಸರ್ವೆ ಆಗಿದ್ದರೆ, ಸರ್ವೆ ವರದಿ ಎಲ್ಲಾ ದಾಖಲೆಗಳನ್ನು ಒದಗಿಸುವುದು. 
  4. ವೇಳಾಪಟ್ಟಿ

ಬಿ. ಜಾರಿ ಮಾಡುವ ಪತ್ರ

  1. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ / ರಾಜ್ಯ ಸಾರಿಗೆ ಪ್ರಾಧಿಕಾರದ ನಡಾವಳಿ.
  2. ವಾಹನದ ಸಿಂಧುತ್ವ ಇರುವ ದಾಖಲಾತಿಗಳು

  5. ರಹದಾರಿಯ ಸಿಂಧುತ್ವ        

ರಹದಾರಿಯನ್ನು ಐದು (5) ವರ್ಷಗಳ ಅವಧಿಗೆ ನೀಡಲಾಗುವುದು, ನಂತರ ಪುನಃ 5 ವರ್ಷಗಳ ಅವಧಿಗೆ ನವೀಕರಣ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ಮಜಲು ವಾಹನ ರಹದಾರಿ ನವೀಕರಣಕ್ಕೆ ಲಗತ್ತಿಸಬೇಕಾದ ದಾಖಲೆಗಳು

(ಮೋಟಾರು ವಾಹನ ಕಾಯ್ದೆ 1988 ರ ಕಲಂ 81 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 76 ರ ಗಮನಿಸಿ)
  1. ಅರ್ಜಿ ನಮೂನೆ 36 ಕೆ.ಎಂ.ವಿ.ಆರ್
  2. ಶುಲ್ಕ – ರೂ.2000/- + 100/-
  3. ರಹದಾರಿ ಸಿಂಧುತ್ವ ಮುಕ್ತಾಯಗೊಳ್ಳುವ 15 ದಿವಸಗಳ ಮುಂಗಡವಾಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.
  4. ಮೂಲ ರಹದಾರಿ
  5. ದಾಖಲಾತಿಗಳು
  • ವಾಹನವು ಕಂತು ಖರೀದಿ ಒಪ್ಪಂದ/ ಲೀಸ್/ ಹೈಪಾತಿಕೇಷನ್ ಒಳಪಟ್ಟಿದ್ದರೆ ಸಂಬಂಧಿಸಿದವರಿಂದ ನಿರಾಪೇಕ್ಷಣಾ ಪತ್ರ.
  • ಪ್ರಾದೇಶಿಕ ಸಾರಿಗೆ ಪ್ರಾಧಿಕಾರ/ ರಾಜ್ಯ ಸಾರಿಗೆ ಪ್ರಾಧಿಕಾರ ರವರ ನಡಾವಳಿ
  • ಇನ್‍ಸಾಲ್ವೆನ್ಸಿ ಇಲ್ಲ ಎಂಬುವ ಬಗ್ಗೆ ಪ್ರಮಾಣ ಪತ್ರ
  • ರಹದಾರಿಯನ್ನು ಐದು (5) ವರ್ಷಗಳ ಅವಧಿಗೆ ನವೀಕರಿಸಲಾಗುವುದು.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ಮಜಲು ವಾಹನ ರಹದಾರಿ ವರ್ಗಾವಣೆ (ಮೋಟಾರು ವಾಹನ ಕಾಯ್ದೆ 1988ಸೆಕ್ಷನ್ 82 ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಗಳ 1989ನಿಯಮ 82)

(ಮೋಟಾರು ವಾಹನ ಕಾಯ್ದೆ 1988 ರ ಕಲಂ 82, ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 82 ಗಮನಿಸಿ)
  1. ಅರ್ಜಿ ನಮೂನೆ 32 ಕೆ.ಎಂ.ವಿ.ಆರ್
  2. ಶುಲ್ಕ – ರೂ.2000/- + 100/-
  3. ರಹದಾರಿ ವರ್ಗಾವಣೆ ಮಾಡುವವರು ಮತ್ತು ವರ್ಗಾವಣೆ ಪಡೆಯುವವರು ಇವರಿಬ್ಬರಿಂದ ಜಂಟಿಯಾಗಿ ಸಹಿ ಮಾಡಿದ ಪ್ರಮಾಣ ಪತ್ರ.
  4. ಮೂಲ ರಹದಾರಿ
  5. ದಾಖಲಾತಿಗಳು
  6. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ/ ರಾಜ್ಯ ಸಾರಿಗೆ ಪ್ರಾಧಿಕಾರ ರವರ ನಡಾವಳಿ ಅಥವಾ ಮಾನ್ಯ ನ್ಯಾಯಾಲಯದ ಆದೇಶ.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ರಹದಾರಿದಾರರು ಮರಣಹೊಂದಿದ ಪಕ್ಷದಲ್ಲಿ ರಹದಾರಿ ವರ್ಗಾವಣೆ (ಮೋಟಾರು ವಾಹನ ಕಾಯ್ದೆ 1989ನಿಯಮಗಳ 83)

(ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 83 ಗಮನಿಸಿ)
  1. ಅರ್ಜಿ - ನಮೂನೆ 53 (ಕೆ.ಎಂ.ವಿ.ಆರ್) ನಿಯಮ, ಪ್ರಾ.ಸಾ.ಅ/ ಸ.ಪ್ರಾ.ಅ ರವರಿಗೆ ಸಲ್ಲಿಸುವುದು.
  2. ಶುಲ್ಕ – ರೂ.100/- + 100/- ನಮೂದು ಶುಲ್ಕ, ಪ್ರ.ಸಾ.ಅ ಕಛೇರಿಯಲ್ಲಿ ನಗದು ಕೌಂಟರ್‍ನಲ್ಲಿ ಪಾವತಿಸುವುದು.
  3. ದಾಖಲೆಗಳು
  4. ರಹದಾರಿದಾರರು ಮರಣ ಹೊಂದಿರುವ ಬಗ್ಗೆ ಮರಣ ಪತ್ರ. ಸಂಬಂಧಿಸಿದ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು.
  5. ಸಂಬಂಧಪಟ್ಟ ಪ್ರಾಧಿಕಾರವು ನೀಡಿದ ವಾರಸುದಾರರ ಪ್ರಮಾಣ ಪತ್ರ.
  6. ಅರ್ಜಿದಾರರಲ್ಲಿ ವಾಹನದ ವಶ ಮತ್ತು ರಹದಾರಿ ಇರುವ ಬಗ್ಗೆ ಮಾಹಿತಿ ಇರಬೇಕು.
  7. ವಾರ್ತಾ ಪತ್ರಿಕೆಯಲ್ಲಿ ಪ್ರಕಟಿಸಿರುವ ನೋಟೀಸ್ ನಮೂನೆ 54 ಕೆ.ಎಂ.ವಿ.ಆರ್ 
  8. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ/ ರಾಜ್ಯ ಸಾರಿಗೆ ಪ್ರಾಧಿಕಾರ ರವರ ನಡಾವಳಿ ಅಥವಾ ಮಾನ್ಯ ನ್ಯಾಯಾಲಯದ ಆದೇಶ.
  9. ವಾರಸುದಾರರಿಂದ ಪ್ರಮಾಣ ಪತ್ರ ಮತ್ತು ಕುಟುಂಬದ ಸದಸ್ಯರಿಂದ ನಿರಾಪೇಕ್ಷಣ ಪತ್ರ.

ಹೆಚ್ಚಿನ ವಿವರಗಳಿಗೆ: ಸಂಬಂಧಿಸಿದ ಆರ್.ಟಿ.ಒ / ಎ.ಆರ್.ಟಿ.ಒ ರವರನ್ನು ಸಂಪರ್ಕಿಸಬಹುದು.

ಮಜಲು ವಾಹನ ರಹದಾರಿಯಲ್ಲಿ ವೆರಿಯೇಷನ್ ನಮೂದು ಮಾಡಲು ಲಗತ್ತಿಸಬೇಕಾದ ದಾಖಲೆಗಳು

(ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 85 ಗಮನಿಸಿ)
  1. ನಮೂನೆ 36 ಎ ರಲ್ಲಿ ಅರ್ಜಿ (ಕೆಎಂವಿ)
  2. ಶುಲ್ಕ ರೂ.2000/- ಮತ್ತು ರೂ.100/- (ನಮೂದು ಶುಲ್ಕ)
  3. ಹಾಲಿ ಇರುವ ರಹದಾರಿಯಲ್ಲಿನ ಮಾರ್ಗ ನಕ್ಷೆ ಹಾಗೂ ಉದ್ದೇಶಿತ ಮಾರ್ಗ ನಕ್ಷೆ, ಮಾರ್ಗ ವಿಸ್ತರಣೆ/ ಮಾರ್ಗ ಕಡಿತ ಮಾಡಬೇಕಾಗಿರುವ ವಿವರ ಮತ್ತು ಆ ಮಾರ್ಗಗಳಲ್ಲಿ ಬರುವ ಊರು/ ಪಟ್ಟಣಗಳ ವಿವರ ಸಂರ್ಪಕಿಸಲು ಬೇಕಾದ ಮಾರ್ಗದ ವಿವರ, ರಸ್ತೆಗಳ ಜೋಡಣೆ ವಿವರ ತ್ರಿಪ್ರತಿಯಲ್ಲಿ ಸಲ್ಲಿಸತಕ್ಕದ್ದು.
  4. ಹಾಲಿ ವೇಳಾಪಟ್ಟಿ ಉದ್ದೇಶಿತ ವೇಳಾಪಟ್ಟಿ, ಮೂಲ ರಹದಾರಿ, ನೋಂದಣಿ ಪತ್ರ, ತೆರಿಗೆ ಪತ್ರ, ವಿಮೆ ಪತ್ರ, ಅರ್ಹತಾ ಪತ್ರ, ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ.
  5. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ/ ರಾಜ್ಯ ಸಾರಿಗೆ ಪ್ರಾಧಿಕಾರದ ನಿರ್ಣಯ (ಇದ್ದಲ್ಲಿ) ಅಥವಾ ನ್ಯಾಯಾಲಯ ನೀಡಿದ ಆದೇಶದ ಪ್ರತಿ (ಇದ್ದಲ್ಲಿ).

ಮಜಲು ವಾಹನದ ನಕಲು ರಹದಾರಿ ನೀಡಿಕೆ ಲಗತ್ತಿಸಬೇಕಾದ ದಾಖಲೆಗಳು

(ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 84 ಗಮನಿಸಿ)
  1. ಸಾದಾ ಹಾಳೆಯಲ್ಲಿ ಬರೆದ ಅರ್ಜಿ.
  2. ರಹದಾರಿ ಶುಲ್ಕದ ಅರ್ಧದಷ್ಟು ಮೊತ್ತದ ಶುಲ್ಕ.
  3. ಪೋಲಿಸ್ ಪಿರ್ಯಾದು ದಾಖಲಿಸಿದ ಪ್ರತಿ
  4. ರಹದಾರಿಯನ್ನು ಯಾವುದೇ ಪ್ರಾಧಿಕಾರ/ ಪೋಲಿಸ್, ಪೈನಾನ್ಸ್ದಾರರು ವಶಪಡಿಸಿಕೊಂಡಿಲ್ಲವೆಂಬ ಪ್ರಮಾಣ ಪತ್ರ.
  5. ಸಂಪೂರ್ಣ ಹರಿದ/ ವಿರೂಪಗೊಂಡ/ ಪೂರ್ತಾ ಮುಗಿದ ರಹದಾರಿ.
  6. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ/ ರಾಜ್ಯ ಸಾರಿಗೆ ಪ್ರಾಧಿಕಾರದ ನಿರ್ಣಯ (ಇದ್ದಲ್ಲಿ) ಅಥವಾ ನ್ಯಾಯಾಲಯ ನೀಡಿದ ಆದೇಶದ ಪ್ರತಿ (ಇದ್ದಲ್ಲಿ).

ಮಜಲು ವಾಹನದಲ್ಲಿ ರಹದಾರಿ ಬದಲಾವಣೆಗೆ ಲಗತ್ತಿಸಬೇಕಾದ ದಾಖಲೆಗಳು

(ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 79 ಗಮನಿಸಿ)
  1. ನಮೂನೆ 51 ರಲ್ಲಿ ಅರ್ಜಿ (ಕೆಎಂವಿ)
  2. ಶುಲ್ಕ ರೂ.1000/- ಮತ್ತು ರೂ.100/- (ನಮೂದು ಶುಲ್ಕ)
  3. ಮೂಲ ರಹದಾರಿ
  4. ಹಾಲಿ ವಾಹನದ/ ಉದ್ದೇಶಿತ ಬದಲು ವಾಹನದ ನೋಂದಣಿ, ವಿಮಾ ಪತ್ರ, ತೆರಿಗೆ ಪತ್ರ.
  5. ಎರಡೂ ವಾಹನಗಳು ಒಂದೇ ಮಾದರಿ/ ಸ್ವರೂಪದ್ದಾಗಿರಬೇಕು.

ಮಜಲು ವಾಹನದ ರಹದಾರಿಯಲ್ಲಿ ವಿಳಾಸ ಬದಲಾವಣೆಗೆ ಲಗತ್ತಿಸಬೇಕಾದ ದಾಖಲೆಗಳು

  1. ಸಾದಾ ಹಾಳೆಯಲ್ಲಿ ಬರೆದ ಅರ್ಜಿ
  2. ನೋಂದಣಿ ಪತ್ರದಲ್ಲಿ ವಾಹನ ಮರು ನೋಂದಾಯಿಸಿದ ವಿವರ
  3. ತೆರಿಗೆ ಪತ್ರ, ಅರ್ಹತಾ ಪತ್ರ, ವಿಮಾ ಪತ್ರ.

ರಹದಾರಿಯಲ್ಲಿ ಮೇಲು ರುಜು ನಮೂದುಗೆ ಲಗತ್ತಿಸಬೇಕಾದ ದಾಖಲೆಗಳು:-

(ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 79 ಗಮನಿಸಿ)
  1. ಸಾದಾ ಹಾಳೆಯಲ್ಲಿ ಅರ್ಜಿ ಅಥವಾ ನಮೂನೆ 36 ಬಿ (ಕೆಎಂವಿ)
  2. ಶುಲ್ಕ ರೂ.2000/- ಮತ್ತು ರೂ.100/- (ನಮೂದು ಶುಲ್ಕ)
  3. ಮೂಲ ರಹದಾರಿ
  4. ನೋಂದಣಿ ಪತ್ರ, ತೆರಿಗೆ ಪತ್ರ, ಅರ್ಹತಾ ಪತ್ರ, ವಿಮಾ ಪತ್ರ
  5. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ/ ರಾಜ್ಯ ಸಾರಿಗೆ ಪ್ರಾಧಿಕಾರದ ನಿರ್ಣಯ (ಇದ್ದಲ್ಲಿ) ಅಥವಾ ನ್ಯಾಯಾಲಯ ನೀಡಿದ ಆದೇಶದ ಪ್ರತಿ (ಇದ್ದಲ್ಲಿ)
© Content Owned & Site maintained by Transport Department, Karnataka State Government.
Visitors Count :: 3813443 | Site Last updated on :: 22-06-2018